Advertisement

ಅಕ್ರಮ ಕಸಾಯಿಖಾನೆ ತೆರವಿಗೆ ಆಗ್ರಹ

03:18 PM Jan 29, 2021 | Team Udayavani |

ವಿಜಯಪುರ: ಗೋಹತ್ಯೆ ನಿಷೇಧ ಕಾಯ್ದೆ ಸಮ  ರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುವ ಮೂಲಕ ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು ಎಂದು ಭಜರಂಗದಳ ಜಿಲ್ಲಾ ಘಟಕದ ಸಂಚಾಲಕ ವಿ.ಕೃಷ್ಣಮೂರ್ತಿ ಒತ್ತಾಯಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದಲ್ಲಿ  ಹಲವು ವರ್ಷಗಳಿಂದ ಅಕ್ರಮವಾಗಿ ಕಸಾಯಿಖಾನೆಗಳನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಕೊಳಚೆ ನೀರು ಹರಿಯಬೇಕಾಗಿರುವ ಚರಂಡಿಗಳಲ್ಲಿ ರಕ್ತ ಹರಿಯುತ್ತಿದೆ. ಇದನ್ನು ವಿರೋಧಿಸುವವರ ಮನೆಗಳ ಮುಂದೆ ರಾತ್ರಿ ವೇಳೆ ರಕ್ತ ತಂದು ಎರಚುವಂತಹ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವಾಗಿ ಹನುಮಂತ ಶೆಟ್ಟಿ ಎನ್ನುವವರು ತಮ್ಮ ಮನೆಯ ಪಕ್ಕದಲ್ಲಿರುವ ಕಸಾಯಿಖಾನೆಗಳ ದುಷ್ಕೃತ್ಯದ ಬಗ್ಗೆ ಗೋಹತ್ಯೆ ಬಗ್ಗೆ ದೂರು ಪುರಸಭೆಗೆ ಹಾಗೂ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರಿಂದ ಕಸಾಯಿಖಾನೆ ವ್ಯಾಪಾರಿಗಳು ಹನುಮಂತಶೆಟ್ಟಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಪಾದಯಾತ್ರೆಗೆ ಅದ್ದೂರಿ·ಸ್ವಾಗತ

ಇಂತಹ ಕೃತ್ಯಗಳ ಬಗ್ಗೆ ಪುರಸಭೆ ಹಾಗೂ ಸ್ಥಳೀಯ ಪೊಲೀಸರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು. ಅಕ್ರಮವಾಗಿ ಕಸಾಯಿಖಾನೆಗಳಿಗೆ ಗೋವುಗಳು ಎಲ್ಲಿಂದ ಬರುತ್ತಿವೆ ಎನ್ನುವ ಕುರಿತು ತನಿಖೆಯಾಗಬೇಕು ಎಂದರು. ಪುರಸಭೆ ಮತ್ತು ಪೊಲೀಸರಿಗೆ ಈ ವರೆಗೆ ನೀಡಿರುವ ದೂರು ಮತ್ತು ಮನವಿ ಪತ್ರ ಮತ್ತು ಇತರೆ ದಾಖಲೆಗಳನ್ನು ಪ್ರಸ್ತುತ ಪಡಿಸಿದರು. ವಿಶ್ವ ಹಿಂದೂ ಪರಿಷತ್‌ ಸಂಚಾಲಕ ಆನಂದ್‌, ಮಹೇಶ್‌, ಹನುಮಂತಶೆಟ್ಟಿ, ನಯನ್‌ ಕೆ. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next