Advertisement

ಗಡಿನಾಡು ಕನ್ನಡ ಅಭಿವೃದ್ಧಿಗೆ ಅನುದಾನ ನೀಡಲು ಆಗ್ರಹ

06:21 PM Mar 16, 2021 | Team Udayavani |

ಆಳಂದ: ಗಡಿನಾಡ ಕನ್ನಡ ಅಭಿವೃದ್ಧಿ ಭಾಷೆ ಕನ್ನಡಕ್ಕಾಗಿ ರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದು ಖಜೂರಿ ಮಠದ ಮುರುಘೇಂದ್ರ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಖಜೂರಿ ಗ್ರಾಮದ ಕರಿಬಸವೇಶ್ವರ ಮಠದ ಕನ್ನಡ ಭವನದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್‌ ಘಟಕ ಹಮ್ಮಿಕೊಂಡ ಸಾಹಿತ್ಯ ಪರಿಷತ್‌
ಸದಸ್ಯರಿಗೆ ಹಾಗೂ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗಡಿ ಸಮಸ್ಯೆಗಳ ನಿವಾರಣೆಗೆ ಸರ್ಕಾರ
ಸಕಾಲಕ್ಕೆ ಅಗತ್ಯಕ್ಕೆ ತಕ್ಕಂತ ಅನುದಾನ ಒದಗಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಧ್ವನಿಯಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ತಾಲೂಕು ಕೇಂದ್ರ ಆಳಂದ ಪಟ್ಟಣದಲ್ಲಿ ಇಂದಿಗೂ ಕನ್ನಡ ಭವನ ನಿರ್ಮಾಣ ಕಾರ್ಯ ನಡೆದಿಲ್ಲ. ಆದರೆ ಗಡಿ ಭಾಗದ ಕನ್ನಡಾಭಿಮಾನಿಗಳ ಒತ್ತಾಸೆಯ ಮೇರೆಗೆ ಭವನ ನಿರ್ಮಾಣ ಕಾರ್ಯ ನಡೆದಿದೆ. ಅದು ತ್ವರಿತವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಡಿಭಾಗದಲ್ಲಿ ಅನ್ಯ ಭಾಷೆಗಳ ಪ್ರಭಾವ ಮಧ್ಯೆ ಕನ್ನಡ ಕಟ್ಟುವ ಕಾರ್ಯಕ್ಕೆ ಕಸಾಪ ಘಟಕ ಶ್ರಮಿಸುತ್ತಿದೆ. ಕನ್ನಡ ಭವನ ಕಟ್ಟಡ ಉಳಿದ ಕಾಮಗಾರಿ ಪೂರ್ಣಗೊಳಿಸಲು ಶಾಸಕರ ಗಮನಕ್ಕೆ ತಂದು ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಅಧಿಕಾರ ಸ್ವೀಕರಿಸಿದ ಮೇಲೆ ಎಲ್ಲಾ ತಾಲೂಕುಗಳಲ್ಲಿ ಕನ್ನಡ ಕಾರ್ಯಕ್ಕೆ ಶ್ರಮಿಸಲಾಗಿದೆ. ಭವನ ನಿರ್ಮಾಣ ಕಾರ್ಯ ನಡೆದಿವೆ. ಕಲಬುರಗಿಯಲ್ಲೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದು, ಬರುವ ಕಸಾಪ ಚುನಾವಣೆಯಲ್ಲಿ ಮರು ಆಯ್ಕೆ ಮಾಡಿದರೆ ವಿಶ್ವ ಸಮ್ಮೇಳನ ಮಾಡುವ ಜತೆಗೆ ತಾಲೂಕು ಮತ್ತು ಹೋಬಳಿ ಕಸಾಪ ಘಟಕಗಳನ್ನು ಚುರುಕುಗೊಳಿಸಲಾಗುವುದು. ಅಲ್ಲದೆ, ಕನ್ನಡ
ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಲಾಗುವುದು. ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

Advertisement

ಹೋಬಳಿ ಕಸಾಪ ಅಧ್ಯಕ್ಷ ಶಿವುಪುತ್ರ ಶಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಸಂಗಯ್ಯ ಸ್ವಾ ,  ಮಲ್ಲಿಕಾರ್ಜುನ ಕಂಡಗೂಳೆ, ಗೀತಾ ಹರಿಹರ, ಚಂದ್ರಶೇಕಾಂತ ಘೋಡಕೆ, ಆದಿನಾಥ ಹೀರಾ, ಶ್ರೀಕಾಂತ ಖೂನೆ, ದೌಲತರಾವ್‌ ಪಾಟೀಲ, ಮಡಿವಾಳಪ್ಪ ನಾಗರಾಳ, ಅಂಬಾಜಿ ಕೌಲಗಾ, ರಾಜಶೇಖರ ಹರಿಹರ, ಸಂಜೀವನ ದೇಶಮುಖ, ಗುಣಮಂತ ಢಗೆ, ಶಂಕರ ಬಂಡೆ, ಪಾರ್ವತಿ ಹರಿಹರ, ಶಿವಪ್ಪ ಘಂಟೆ, ಶರಣಪ್ಪ ಹೊಸಮನಿ, ಶರಣಬಸಪ್ಪ ಧೂಳೆ ಮತ್ತಿತರರು ಇದ್ದರು. ಮಂಜುನಾಥ ಕಂದಗೂಳೆ ಸ್ವಾಗತಿಸಿದರು. ಶ್ರೀಶೈಲ ಭೀಂಪೂರೆ ನಿರೂಪಿಸಿದರು. ಗಂಗಾಧರ ಕುಂಬಾರ ವಂದಿಸಿದರು. ಕಸಾಪ ಮತ್ತು ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next