Advertisement

ಕೇಂದ್ರ ನೌಕರರ ಸರಿಸಮಾನ ವೇತನಕ್ಕೆ ಆಗ್ರಹ

12:19 PM Jan 07, 2022 | Team Udayavani |

ಬೀದರ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ನೌಕರರ ಸರಿಸಮಾನ ವೇತನ ಕೊಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

Advertisement

ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಭಾಗವಾಗಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ನಗರದಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಶಾಸಕರಾದ ರಹೀಂಖಾನ್‌, ಬಂಡೆಪ್ಪ ಕಾಶೆಂಪೂರ ಹಾಗೂ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಗಂದಗೆ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಿತರಕ್ಷಣೆ ಕಾರ್ಯದಲ್ಲಿ ನಿರತವಾಗಿದೆ. ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕಿದೆ. ದೇಶದ 26 ರಾಜ್ಯಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರದ ಸರಿಸಮಾನ ವೇತನ ಕೊಡಲಾಗುತ್ತಿದೆ. ದೇಶದಲ್ಲಿ ಈಗಾಗಲೇ “ಒಂದೇ ದೇಶ, ಒಂದೇ ತೆರಿಗೆ’ ನಿಯಮ ಜಾರಿಯಲ್ಲಿದೆ. ಕರ್ನಾಟಕ ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲೂ ಇದೆ. ಆದರೂ, ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರಕ್ಕೆ ಸರಿಸಮನಾದ ವೇತನ ನೀಡುತ್ತಿಲ್ಲ. ವೇತನ ವಿಚಾರದಲ್ಲೂ “ಒಂದೇ ದೇಶ, ಒಂದೇ ವೇತನ’ ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ರಾಜಕುಮಾರ ಹೊಸದೊಡ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಕ್ರೀಡಾ ಕಾರ್ಯದರ್ಶಿ ಸುಮತಿ ರುದ್ರಾ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್‌, ಪ್ರಾಥಮಿಕ ಶಾಲಾ ಪದವೀಧರೇತರ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಕಪಲಾಪುರೆ, ಪ್ರಮುಖರಾದ ಸಂಜೀವ ಬಿ ಸೂರ್ಯವಂಶಿ, ಗಣಪತಿ ಜಮಾದಾರ್‌, ಅನ್ಸರ್‌ ಬೇಗ್‌, ಸುನೀಲ್‌, ಸಂಜಯ ಬಿರಾದಾರ, ಕಾಶೀನಾಥ ಬೋರಾಳೆ, ಶಿವಾನಂದ ಮಠಪತಿ, ಮಹಮ್ಮದ್‌ ಝಾಕೀರ್‌ ಅಹಮ್ಮದ್‌, ಯುಸೂಫ್‌ ಖಾನ್‌, ಶ್ರೀಪತಿ ಮೇತ್ರೆ, ಮಿಸ್ಬಾಕ್‌ ನವಾಬ್‌, ಅನಿಲಕುಮಾರ ಪಾಟೀಲ, ಗೋವಿಂದರೆಡ್ಡಿ, ಸಂತೋಷಕುಮಾರ ಪೂಜಾರಿ, ಶಿವಶಂಕರ ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next