ಜೇವರ್ಗಿ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿ ಸೇರಿದಂತೆ ಮುಂಗಾರು ಹಾಗೂ ಹಿಂಗಾರಿನ ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ ಎಂದು ಸೋಮವಾರ ರೈತರು ನೆಲೋಗಿಯಲ್ಲಿ ಪ್ರತಿಭಟನೆ ನಡೆಸಿದರು.
ಈಗಾಗಲೇ ಬೆಳೆ ಹಾನಿ ಕುರಿತು ತಾಲೂಕಿನಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ ನೆಲೋಗಿ ವಲಯವನ್ನು ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈಗಾಗಲೇ ಬೆಳೆ ಹಾನಿಯಿಂದ ಸಂಕಷ್ಟ ಎದುರಿಸುತ್ತಿರುವ ರೈತರ ಬೆಳೆ ಹಾನಿ ಸಮೀಕ್ಷೆ ನಡೆಸದೆ ವಂಚಿಸಿ ಅಧಿಕಾರಿ ವರ್ಗ ರೈತರ ಗಾಯದ ಮೇಲೆ ಬರೆಯೆಳಿದಿದ್ದಾರೆ. ಕೂಡಲೇ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕೊಡಲೇ ಸಮೀಕ್ಷೆ ನಡೆಸಬೇಕೆಂದು ಪಟ್ಟು ಹಿಡಿದಿದ್ದರು. ಪ್ರತಿಭಟನೆಯ ಕಾವೂ ಎರುತ್ತಿದ್ದಂತೆಯೇ ತಹಶೀಲ್ದಾರ್ ವಿನಯಕುಮಾರ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಖಾಸಿಂ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ದೇವು ಮುದ್ದಾ, ವಿನೋದ ಭಾಸಗಿ, ಕಲ್ಯಾಣಿ ಮಂಗಾ, ಭಗವಂತರಾಯ ಚೌಡಾಪುರ, ಶರಬು ಕಲ್ಯಾಣಿ, ಶ್ರೀಶೈಲ ಮುದ್ದಾ, ಶಿವಾನಂದ ನಂದಿಗುಂಡ, ನಿಂಗು ಸಸಬಾ, ಬಾಪುಗೌಡ ವಿಬೂತಿ, ದೇವು ತಳಕೇರಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.