Advertisement

ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಮನವಿ

04:57 PM Jul 04, 2020 | Suhan S |

ಕುಷ್ಟಗಿ: ಪಟ್ಟಣದ 1ನೇ ವಾರ್ಡ್ ನ ಲಿಯೋ ಕಾಲೋನಿಯಲ್ಲಿ ಕೋವಿಡ್ ಸೋಂಕು ದೃಢವಾಗಿರುವ ಮನೆಯವರು, ಹೋಮ್‌ ಕ್ವಾರಂಟೈನ್‌ ನಿಯಮ ಉಲ್ಲಂಘಿಸುತ್ತಿದ್ದಾರೆ. ಸೋಂಕಿತರ ಮನೆ ಸದಸ್ಯರನ್ನು ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್‌ಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಸ್ಥಳೀಯರು ತಹಶೀಲ್ದಾರ್‌ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಸತೀಶ್‌ ಗೆ ಮನವಿ ಸಲ್ಲಿಸಿದರು.

Advertisement

ಲಿಯೋ ಕಾಲೋನಿಯಲ್ಲಿ ಕೋವಿಡ್ ಸೋಂಕು ದೃಢವಾದ ಇಬ್ಬರು ಸಹೋದರರ ಪೈಕಿ, ಸರ್ಕಾರಿ ವೈದ್ಯ ಗುಣಮುಖರಾಗಿದ್ದಾರೆ. ಅವರ ಸಹೋದರನಿಗೆ ಕೋವಿಡ್ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಮನೆಯವರು, ಮನೆಯಲ್ಲಿ ಇರದೇ ಹೊರಗೆ ಬರುತ್ತಿದ್ದು, ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಕಂಟೈನ್ಮೆಂಟ್‌ ಪ್ರದೇಶದಲ್ಲಿ ಸೀಲ್‌ಡೌನ್‌ ಸಹ ಮಾಡಲಾಗಿದ್ದು, ಹೋಮ್‌ ಕ್ವಾರಂಟೈನ್‌ ಗೆ ಸೂಚಿಸಿದವರು ಮನೆಯಲ್ಲಿರಬೇಕೇ ವಿನಃ ಅನಗತ್ಯವಾಗಿ ತಿರುಗಾಡಬಾರದು. ಆದರೂ ಹೊರಗೆ ಬರುತ್ತಿರುವುದನ್ನು ಸ್ಥಳೀಯರು ಪ್ರಶ್ನಿಸಿದರು.

ಇದೇ ವೇಳೆ ಪಿಎಸ್‌ಐ ಚಿತ್ತರಂಜನ್‌ ನಾಯಕ್‌ ಭೇಟಿ ನೀಡಿ, ಹೋಮ ಕ್ವಾರಂಟೈನ್‌ ಅವಧಿ ಪೂರ್ಣಗೊಳ್ಳುವವರೆಗೂ ಮನೆಯಲ್ಲಿರಬೇಕು, ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು. ಪುರಸಭೆ ಸದಸ್ಯ ವಸಂತ ಮೇಲಿನಮನಿ ಪ್ರತಿಕ್ರಿಯಿಸಿ, ಕಾಲೋನಿಗೆ ಹಬ್ಬುವ ಆತಂಕ ಹೋಗಲಾಡಿಸಲು ಹೋಮ್‌ ಕ್ವಾರಂಟೈನ್‌ಲ್ಲಿ ಇರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಬೇಕು. ಇಲ್ಲವಾದರೆ ನಾವೇ ಮನೆ ಬಿಡುವ ಯೋಚನೆಯಲ್ಲಿದ್ದೇವೆ. ಪೊಲೀಸರು, ಹೊರತು ಪಡಿಸಿದರೆ ಪುರಸಭೆಯವರು ಅಗತ್ಯ ವಸ್ತುಗಳು, ಮೂಲ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next