Advertisement

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆಗೆ ಮನವಿ

04:51 PM Sep 07, 2020 | Suhan S |

ರಾಯಚೂರು: ರಾಯಚೂರು ಸ್ನಾತ್ತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಈ ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಲು ಆಗ್ರಹಿಸಿ ಉಪನ್ಯಾಸಕರು ಗುವಿವಿ ಸಿಂಡಿಕೇಟ್‌ ಸದಸ್ಯ ಶರಣಬಸವ ಪಾಟೀಲ ಜೋಳದಹೆಡಗಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಸೇವೆಯಲ್ಲಿ ಮುಂದುವರಿಸಬೇಕು. ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಹೊಸ ನೇಮಕಾತಿ ಮಾಡದೆ ಹಳಬರನ್ನೇ ಮುಂದುವರಿಸಲು ಆದೇಶ ಹೊರಡಿಸಿವೆ. ಆದರೆ, ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಮಿತಿ ಮಾತ್ರ ಹೊಸ ಅತಿಥಿ ಉಪನ್ಯಾಸಕರನ್ನು ನೇಮಿಸಲು ಒಪ್ಪಿಗೆ ನೀಡಿದೆ ಎನ್ನುವ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಅಂಥ ನಿರ್ಧಾರ ಕೈಗೊಳ್ಳಬಾರದು. ಈಗಿರುವ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸುವ ಮೂಲಕ ಸೇವಾ ಭದ್ರತೆ ಕಲ್ಪಿಸಬೇಕೆಂದು ವಿನಂತಿಸಿದರು.

ಸೆ.1ರಿಂದಲೇ ಕಾರ್ಯಭಾರ ಜಾರಿಯಾಗುವಂತೆ ಆದೇಶ ಹೊರಡಿಸಲುವಿವಿ ಕುಲಪತಿಗಳಿಗೆ ಮನವರಿಕೆಮಾಡಿಕೊಡುವ ಮೂಲಕ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರನ್ನೇ ಪರಿಗಣಿಸಲು ಕೋರಿದರು. ಈ ವೇಳೆ ಸ್ನಾತಕೋತ್ತರ ಕೇಂದ್ರದ ಅತಿಥಿ ಉಪನ್ಯಾಸಕರಾದ ರೇಖಾ ಪಾಟೀಲ, ವಿಜಯಲಕ್ಷ್ಮೀ, ತಾಯಪ್ಪ, ಡಾ| ಶರಣಪ್ಪ, ಛಲವಾದಿ, ಡಾ| ಲಕ್ಷ್ಮೀ ಕಾಂತ ಆರ್‌., ಬಜಾರಪ್ಪ, ಡಾ|ರಂಗನಾಥ, ಡಾ| ಆಂಜನೇಯ, ಡಾ| ಕೃಷ್ಣ, ಡಾ| ಹನುಮಂತ, ಡಾ| ವಿಕ್ರಮಸಿಂಗ್‌, ಡಾ| ಸೋಮನಾಥರೆಡ್ಡಿ, ಡಾ| ಶ್ರೀಮಂತ ಸುಧೀರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next