Advertisement
ಹಣಕಾಸು ಇಲಾಖೆಗೆ ಪ್ರಸ್ತಾವನೆ: ರಾಜ್ಯದಲ್ಲಿನ 50 ಹೊಸ ತಾಲೂಕುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯವಾಗಿ ನೂತನ ತಾಲೂಕಿನಲ್ಲಿ 14 ಕಚೇರಿಗಳನ್ನು ಕಾರ್ಯಾರಂಭ ಮಾಡಬೇಕಾಗಿವೆ. ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಖರೀದಿಸುವ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಉದ್ದು, ಹೆಸರು ಖರೀದಿಗೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಸಹಾಯಕ ಆಯುಕ್ತ ರಾಚಪ್ಪ, ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಹಿರಿಯ ಮುಖಂಡ ಕೃಷ್ಣಾಜಿ ಕುಲಕರ್ಣಿ ಮುಂತಾದವರಿದ್ದರು.
ಅನಾವೃಷ್ಟಿಯಿಂದ ಬೆಳೆ ಹಾನಿ ವೀಕ್ಷಿಸುವ ಸಂದರ್ಭದಲ್ಲಿ ಕಮಲಾಪುರ ರೈತ ಮಹಿಳೆ ಶಾಂತಿಬಾಯಿ ಮಾತನಾಡಿ, ಸಾಹೇಬ್ರೆ ನಾವು ಬ್ಯಾಂಕ್‌ನಲ್ಲಿ ಬೆಳೆ ಸಾಲ ಪಡೆದಿಲ್ಲ. ಹೀಗಾಗಿ ಉದ್ದು ಬೆಳೆವಿಮೆಗೆಂದು ರಾಷ್ಟ್ರೀಕೃತ ಬ್ಯಾಂಕ್‌ಗೆ ಪ್ರಿಮಿಯಂ ತುಂಬಲು ಹೋದಾಗ ನಿರಾಕರಿಸಿದ್ದಾರೆ. ದಿನಾಂಕ ಮುಗಿದಿದೆ ಎಂದು ಸಬೂಬು ಹೇಳಿ ಕಳಿಸಿದ್ದಾರೆ. ತಮ್ಮ ಹೊಲದಲ್ಲೀಗ ಬೆಳೆ ನಷ್ಟವಾಗಿದೆ. ಆದ್ರೆ ಬೆಳೆವಿಮೆ ಬರಂಗಿಲ್ಲ. ಹಿಂಗಾದರೆ ಹೇಗೆ? ಈ ನಿಟ್ಟಿನ ಸಮಸ್ಯೆ ಬಗೆಹರಿಸಿ ಎಂದು ಸಚಿವ ಆರ್. ದೇಶಪಾಂಡೆ ಎದುರು ಅಳಲು ತೋಡಿಕೊಂಡರು. ಇದಕ್ಕೆ ಉತ್ತರ ನೀಡಿದ ಸಚಿವರು, ಬೆಳೆವಿಮೆ ಕುರಿತು ಸಾಕಷ್ಟು ಪ್ರಚಾರ ನಡೆಸಲಾಗಿದೆ. ಮುಖ್ಯವಾಗಿ ಬೆಳೆವಿಮೆಯಲ್ಲಿನ ತೊಂದರೆ ನಿವಾರಿಸಬೇಕಾಗಿದೆ. ಒಟ್ಟಾರೆ ಬೆಳೆಹಾನಿಗೆ ಸೂಕ್ತ ಪರಿಹಾರ ದೊರಕಿಸಲು ಯತ್ನಿಸಲಾಗುವುದು ಎಂದು ಹೇಳಿದರು. ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗುರ ಅವರು ಜಿಲ್ಲೆಯಲ್ಲಿನ ಬೆಳೆಗಳ ಹಾನಿ ಕುರಿತು ವಿವರಿಸಿದರು.