Advertisement

ದೇಶದ ಉಜ್ವಲ ಭವಿಷ್ಯಕ್ಕೆ ಸಹಕರಿಸಿ

07:43 AM Jan 27, 2019 | |

ದೇವನಹಳ್ಳಿ: ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಅನೇಕ ಜಾತಿ, ಧರ್ಮ ಹಾಗೂ ಬಹುಭಾಷೆಯ ಜನರಿದ್ದಾರೆ. ಇಂದಿನ ಯುವ ಪೀಳಿಗೆಗೆ ಭಾರತದ ಏಕತೆ, ಅಖಂಡತೆ ಹಾಗೂ ಸಾರ್ವ ಭೌಮತ್ವವನ್ನು ಎತ್ತಿ ಹಿಡಿಯಲು ಹಾಗೂ ದೇಶವನ್ನು ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯಲು ಸಹಕರಿಸಬೇಕೆಂದು ವಸತಿ ಸಚಿವ ಎಂ.ಟಿ.ಬಿ. ನಾಗರಾಜ್‌ ತಿಳಿಸಿದರು.

Advertisement

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಏರ್ಪಡಿಸಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಭಾಷೆ ಹಲವು, ಧರ್ಮ ಹಲವು, ವರ್ಣ ಹಲವು, ವೈವಿಧ್ಯತೆ, ಆಚಾರ, ವಿಚಾರ ಹಲವು. ಆದರೆ, ನಮ್ಮೆಲ್ಲ ರನ್ನು ಬೆಸೆಯುವ ಸಂವಿಧಾನ ಮಾತ್ರ ಒಂದೇ ಆಗಿದೆ. 1947ರಲ್ಲಿ ಭಾರತ ಸ್ವತಂತ್ರ ವಾದ ನಂತರ ಸರ್ವ ಜನಾಂಗದ ಸರ್ವ ಪ್ರಾಂತಗಳ ಅಭಿವೃದ್ಧಿಯನ್ನು ಸಾಕಾರಗೊಳಿ ಸಲು ಪ್ರಬಲ ಸಂವಿಧಾನವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ನೇತೃತ್ವದ ರಚಿಸಲಾ ಯಿತು. ಅದನ್ನು 1950ರ ಜನವರಿ 26 ರಂದು ಜಾರಿಗೊಳಿಸಲಾಯಿತು. ಅಂದಿ ನಿಂದ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿರುವುದು ಹೆಮ್ಮೆಯ ವಿಚಾ ರವಾಗಿದೆ ಎಂದು ಹೇಳಿದರು.

ಕೃಷಿ ಪ್ರಧಾನ ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ 2007 ರಂದು ರಚನೆ ಯಾಗಿದ್ದರೂ, 2018 ರ ಅಕ್ಟೋಬರ್‌ ತಿಂಗ ಳವರೆಗೆ ಜಿಲ್ಲಾಡಳಿತ ಕಚೇರಿ ತನ್ನದೇ ಆದ ಕೇಂದ್ರ ಸ್ಥಾನವನ್ನು ಹೊಂದದೇ ಬೆಂಗಳೂರು ನಗರ ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿ ಗಳು ಕರ್ತವ್ಯ ನಿರ್ವಹಿಸುತ್ತಿದ್ದವು. 2018ರ ಅಕ್ಟೋಬರ್‌ನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ದೇವನಹಳ್ಳಿ ತಾಲೂಕಿನ ಚಪ್ಪ ರದಕಲ್ಲು ಬಳಿ ಸ್ಥಳಾಂತರಿಸಲಾಗಿದೆ. ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ನೀರಿನ ಅಭಾವವಿರುವ ಕಾರಣ ಅಂತರ್ಜಲ ಅಭಿ ವೃದ್ಧಿಗಾಗಿ 436 ಮಲ್ಟಿ ಆರ್ಚ್‌ ಚೆಕ್‌ ಡ್ಯಾಂ ಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿ ರುತ್ತದೆ ಎಂದು ಹೇಳಿದರು.

3,701 ಮನೆ ನಿರ್ಮಾಣ: ಗ್ರಾಮೀಣ ವಸತಿ ಯೋಜನೆಯಡಿ 2018-19ನೇ ಸಾಲಿನಲ್ಲಿ ಈವರೆಗೆ 3,701 ಮನೆಗಳನ್ನು ನಿರ್ಮಾಣ ಮಾಡುವ ಮೂಲಕ ಶೇ.60.57 ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಯಡಿಯಲ್ಲಿ ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸಲು 1,060 ಕಾಮ ಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 617 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆ ಒಟ್ಟು 19,695 ಕಾಮಗಾರಿಗಳನ್ನು ಪ್ರಾರಂಭಿಸಿ, 14,817 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಇದರಿಂದ 13.77 ಲಕ್ಷ ಮಾನವ ದಿನಗಳು ಉದ್ಯೋಗ ಸೃಜನ ಗೊಂಡಿವೆ. ದನದ ಕೊಟ್ಟಿಗೆ ನಿರ್ಮಾಣ ಅಭಿ ಯಾನದಲ್ಲಿ ಕಳೆದ 75 ದಿನಗಳಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು 10,450 ದನದ ಕೊಟ್ಟಿಗೆ ನಿರ್ಮಾಣ ಮಾಡಲಾಗಿದೆ ಎಂದುತಿಳಿಸಿದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ, ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಪರಿಹಾರಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿ ಕಾರ ರೈತರಿಗೆ 6-7 ಲಕ್ಷ ರೂ.ಮಾತ್ರ ನೀಡಿ ಭೂಮಿ ಸ್ವಾಧೀನಪಡಿಸಿಕೊಂಡಿದೆ.ಹಾಗಾಗಿ, ರೈತರು ಇಂದಿಗೂ ಸಂಕಷ್ಟ ಎದುರಿಸುತ್ತಿ ದ್ದಾರೆ. ವಸತಿ ಯೋಜನೆಯಲ್ಲಿ ಹೆಚ್ಚಿನ ಮನೆ ಗಳನ್ನು ನೀಡುವಂತಾಗಬೇಕು. ಎನ್‌.ಎಚ್. ವ್ಯಾಲಿ ಮೂಲಕ ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ಬಿಡುವಾಗ 3 ಬಾರಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಬಲಿಷ್ಠ ಒಕ್ಕೂಟ ಸರ್ಕಾರ: ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಿ ಈ ಭಾಗದ ಜನರಿಗೆ ನೀರಿನ ಸಮಸ್ಯೆ ನೀಗಿಸ ಬೇಕು. ಭಾರತರತ್ನ ಡಾ.ಅಂಬೇಡ್ಕರ್‌ ಚಿಂತ ನೆಯ ಫ‌ಲವಾಗಿ ರೂಪಿತವಾದ ಸಂವಿಧಾನ ರಾಷ್ಟ್ರದ ಏಕತೆ ಮತ್ತು ದುರ್ಬಲ ವರ್ಗದ ವರ ಏಳಿಗೆ, ಶೋಷಿತರ ರಕ್ಷಣೆ ಮತ್ತು ಬಲಿಷ್ಠ ಒಕ್ಕೂಟ ಸರ್ಕಾರವನ್ನು ನಿರ್ಮಿಸುವ ಮಾದರಿ ಸಂವಿಧಾನವಾಗಿದೆ. ಗಣರಾಜ್ಯ ವೆಂದರೆ ಜನರ ರಾಜ್ಯ ಎಂದರ್ಥ. ಜನರಿ ಗಾಗಿ ಜನಪ್ರತಿನಿಧಿಯ ಮೂಲಕ ರಾಜ್ಯ ನಡೆಸುವ ವಿಧಾನವೇ ಗಣರಾಜ್ಯ ವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಜಿಲ್ಲಾಧಿಕಾರಿ ಸಿ.ಎಸ್‌.ಕರಿಗೌಡ, ಜಿಪಂ ಸಿಇಒ ಆರ್‌.ಲತಾ, ಎಸ್ಪಿ ಶಿವ ಕುಮಾರ್‌, ಪುರಸಭಾಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಆಶಾರಾಣಿ, ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಸದ ಸ್ಯರಾದ ಕೆ.ಸಿ.ಮಂಜುನಾಥ್‌, ಲಕ್ಷ್ಮೀನಾರಾ ಯಣ್‌, ಅನಂತಕುಮಾರಿ, ರಾಧಮ್ಮ, ತಾಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ತಹಶೀಲ್ದಾರ್‌ ರಾಜಣ್ಣ, ತಾಪಂ ಇಒ ಮುರುಡಯ್ಯ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ಡಿಡಿಪಿಐ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಯೋಗೇಶ್‌ಗೌಡ, ಬಿಇಒ ಗಾಯತ್ರಿದೇವಿ ಮತ್ತಿತರರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದ ವರೆಗೆ ಮೆರವಣಿಗೆ, ಗೌರವ ರಕ್ಷೆ, ಶಾಲಾ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next