Advertisement

ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ

05:38 PM Jan 27, 2018 | Team Udayavani |

ಯಾದಗಿರಿ: ನಗರದ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ 69ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಜೆ. ಮಂಜುನಾಥ ನೆರವೇರಿಸಿದರು.

Advertisement

ನಂತರ ಮಾತನಾಡಿದ ಅವರು, ದೇಶದ ಸಂವಿಧಾನದ ಪೂರ್ವ ಪೀಠಿಕೆಯಲ್ಲಿರುವ ಆಶಯದಂತೆ, ನಾವು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಅರಿತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ದೇಶದ ಪ್ರಗತಿಗೆ
ಪೂರಕವಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಇದ್ದರು.

ನಗರದ ವಿವಿಧಡೆ 69ನೇ ಗಣರಾಜ್ಯೋತ್ಸವವನ್ನು ನಗರದ ನಗರಸಭೆ ಸೇರಿದಂತೆ ವಿವಿಧೆಡೆ ಸಂಭ್ರಮದಿಂದ
ಆಚರಿಸಲಾಯಿತು.  ನಗರಸಭೆ ಕಚೇರಿಯಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಧ್ವಜಾರೋಹಣ ನೆರವೇರಿಸಿದರು. ಪೌರಾಯುಕ್ತ ಸಂಗಪ್ಪ ಉಪಾಸೆ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಎಲ್‌ಕೆಇ ಕಾಲೇಜು: ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಮಹಾ ವಿದ್ಯಾಲಯ ಮತ್ತು
ಮಹಿಳಾ ಮಹಾವಿದ್ಯಾಲಯದ ಎನ್‌.ಎಸ್‌. ಎಸ್‌ ಘಟಕ ಹಾಗೂ ವಿದ್ಯಾರ್ಥಿನಿಯರ ಕ್ಷೇಮ ಪಾಲನಾ ಸಂಘಗಳ ಆಶ್ರಯದಲ್ಲಿ 69ನೇ ಗಣರಾಜೋತ್ಸವ ಆಚರಿಸಲಾಯಿತು. ಸಂಸ್ಥೆಯ ಪ್ರಾಚಾರ್ಯ ಗು.ಮೋ. ವಿಶ್ವಕರ್ಮ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಉಪನ್ಯಾಸಕರಾದ ಡಾ| ಜ್ಯೋತಿಲತಾ, ಅಂಬಿಕಾ, ಸಂತೋಷಿ ಜೋಶಿ, ಮಂಗಳಾ, ಶಿಲ್ಪಾ, ಸುಧಾ, ಬಸಲಿಂಗಪ್ಪ ಇದ್ದರು. 

ದಯಾನಂದ ಶಾಲೆ: ದಯಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 69ನೇ ಗಣರಾಜ್ಯೋತ್ಸವ ಸಂಭ್ರಮದಿಂದ
ಆಚರಿಸಲಾಯಿತು. ಮುಖ್ಯಗುರು ಗೀತಾ ದೊಡ್ಡಮನಿ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಮುಖ್ಯ
ಗುರು ಅಯ್ಯಣ್ಣ ಹುಂಡೇಕಾರ, ಸಂಸ್ಥೆ ಕಾರ್ಯದರ್ಶಿ ಓಂ ಪ್ರಕಾಶ ಭಟ್ಟಡವರು ಅಧ್ಯಕ್ಷತೆ ವಹಿಸಿದ್ದರು.

Advertisement

ವೀರನಿಕೇತನ: ವೀರನಿಕೇತನ ಶಾಲೆಯಲ್ಲಿ ಮಾಜಿ ಶಾಸಕ ಡಾ| ವೀರಬಸಂತರಡ್ಡಿ ಮುದ್ನಾಳ ಧ್ವಜಾರೋಹಣ ನೆರವೇರಿಸಿದರು. ವೆಂಕಟರಡ್ಡಿ ಮುದ್ನಾಳ, ಅಧ್ಯಕ್ಷತೆ ವಹಿಸಿದರು. ಖಂಡಪ್ಪ ದಾಸನ, ಮೋಹನ ಬಾಬು,
ಅಯ್ಯಣ್ಣ ಹುಂಡೇಕಾರ, ನಾಗಪ್ಪ ಬೇನಕಲ್ಲ, ಹಣಮಂತ ಇಟಗಿ, ಸಿದ್ದಪ್ಪ ಹೊಟ್ಟಿ, ಬಸವಂತರಾಯಗೌಡ ಮಾಲಿಪಾಟೀಲ, ನೀಲಕಂಠ ಶೀಲವಂತ, ಸೈಯದ ಪಾರೂಖ, ಶಿವಣ್ಣ ವಿಶ್ವಕರ್ಮ , ಸ್ವಾಮಿದೇವ ದಾಸನಕೇರಿ,
ರಮೇಶ ಕೋಟಿಮನಿ, ಪೀರ ಅಹ್ಮದ, ಅನೀಲ ಗೂರುಜಿ ಪಾಲ್ಗೊಂಡಿದರು.

ಕಸಾಪ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಸಡಗರದೊಂದಿಗೆ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಧ್ವಜಾರೋಹಣ ನೇರವೆರಿಸಿದರು. ಕೇಂದ್ರ ಸರ್ಕಾರ ಆಹಾರ ನಿಗಮದ ಸದಸ್ಯ ಖಂಡಪ್ಪ ದಾಸನ್‌ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಕುರಕುಂಬಳ ಮಹಾದೇವಪ್ಪ, ಸ್ವಾಮಿದೇವದಾಸನ ಚನ್ನಪ್ಪ ಠಾಣಗುಂದಿ, ನಾಗಪ್ಪ ಸಜ್ಜನ, ಬಸವರಾಜ ಸಜ್ಜನ, ಸೂಗಪ್ಪ ಪಾಟೀಲ ಪಾಲ್ಗೊಂಡಿದರು. 

ಜೆಡಿಎಸ್‌ ಕಚೇರಿ: ನಗರದ ಜೆಡಿಎಸ್‌ ಕಾರ್ಯಾಲಯದಲ್ಲಿ 69ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಜೆಡಿಎಸ್‌ ಹಿರಿಯ ಮುಖಂಡ ಚೆನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಶಿರವಾರ, ಅಬ್ದುಲ್‌ ಖಯ್ಯುಮ್‌, ಸೋಮನಾಥ ಅತ್ತುತ್ತಿ, ಬೋಜನಗೌಡ, ನಿಜಾಮ ನಾಗರಾಳ, ಫರೀದ್‌ ಮಿಯಾ, ಮೂರ್ತಿ ಅನಪುರ, ಬಾಲಮಿತ್ರ, ಇಮಾನ್ಯುವೆಲ್‌, ಸಂಗಣ್ಣ ಕಲಶೆಟ್ಟಿ, ಶರಣಪ್ಪ, ಬಸವರಾಜ, ಅಯ್ಯಪ್ಪ ಹೆಡಗಿಮದ್ರಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next