Advertisement

ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಆಡುವುದು ಅನುಮಾನ

06:41 PM Aug 30, 2020 | sudhir |

ಹೊಸದಿಲ್ಲಿ: ಬಹು ನಿರೀಕ್ಷೆಯ ಐಪಿಎಲ್‌ ಈಗ ಕೋವಿಡ್ ನಿಂದ ತತ್ತರಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವೊಂದರಲ್ಲೇ 13 ಪಾಸಿಟಿವ್‌ ಕೇಸ್‌ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಈ ತಂಡದ ಆಟಗಾರರಾದ ದೀಪಕ್‌ ಚಹರ್‌ ಮತ್ತು ಋತುರಾಜ್‌ ಗಾಯಕ್ವಾಡ್‌ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಸುರೇಶ್‌ ರೈನಾ ಕೂಡ ಸುರಕ್ಷತೆಯ ಕಾರಣದಿಂದ ಐಪಿಎಲ್‌ ತೊರೆದು ಭಾರತಕ್ಕೆ ಮರಳಲಿದ್ದಾರೆ. ತಂಡದ ಕ್ವಾರಂಟೈನ್‌ ಅವಧಿಯನ್ನು ಹೆಚ್ಚಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ ಆಡುವುದು ಅನುಮಾನ ಎನ್ನಲಾಗಿದೆ.

ಸಂಭಾವ್ಯ ವೇಳಾಪಟ್ಟಿ ಪ್ರಕಾರ ಐಪಿಎಲ್‌ನ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಸೆ. 19ರಂದು ಆರಂಭಿಕ ಪಂದ್ಯ ನಡೆಯಬೇಕಿದೆ. ಆದರೆ ಬಿಸಿಸಿಐ ಈಗ ಕೋವಿಡ್ ಕಂಟಕಕ್ಕೆ ಸಿಲುಕಿರುವ ಚೆನ್ನೈ ತಂಡದ ಚೇತರಿಕೆಗೆ ಹೆಚ್ಚಿನ ಕಾಲಾವವಕಾಶ ನೀಡಲು ನಿರ್ಧರಿಸಿದೆ. ಇದು ಕೂಟದ ವೇಳಾಪಟ್ಟಿಯನ್ನೇ ಅಸ್ತವ್ಯಸ್ತಗೊಳಿಸಲಿದ್ದು, ಇದರ ಪ್ರಕಟನೆಗೆ ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ಭಾವಿಸಲಾಗಿದೆ.

“ಯೆಲ್ಲೋ ಆರ್ಮಿ’ ಖ್ಯಾತಿಯ ಧೋನಿ ಪಡೆಯ ಕ್ವಾರಂಟೈನ್‌ ಅವಧಿ ಮುಂದಿನ 6 ದಿನಗಳಿಗೆ ವಿಸ್ತರಿಸಲ್ಪಟ್ಟಿದೆ. ಪಾಸಿಟಿವ್‌ ಫ‌ಲಿತಾಂಶ ದಾಖಲಿಸಿದವರೆಲ್ಲ 14 ದಿನಗಳ ಐಸೊಲೇಶನ್‌ಗೆ ಒಳಗಾಗಲಿದ್ದಾರೆ. ಈ ಅವಧಿಯಲ್ಲಿ ನೆಗೆಟಿವ್‌ ಫ‌ಲಿತಾಂಶ ಬಂದರಷ್ಟೇ ಇವರು ಜೈವಿಕ ಸುರಕ್ಷಾ ವಲಯ ಪ್ರವೇಶಿಸಲಿದ್ದಾರೆ. ಈ ಎಲ್ಲ ಕಾರಣಗಳಿಂದ ಚೆನ್ನೈ ತಂಡದ ಅಭ್ಯಾಸ ವಿಳಂಬಗೊಳ್ಳಲಿದೆ. ಹೀಗಾಗಿ ಧೋನಿ ಪಡೆಗೆ ಆರಂಭಿಕ ಪಂದ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು “ಇನ್‌ಸೈಡ್‌ ನ್ಪೋರ್ಟ್‌’ಗೆ ತಿಳಿಸಿದ್ದಾರೆ.

 ಉಳಿದ ತಂಡಗಳ ಪಾಡೇನು?
ಈವರೆಗೆ ಕೇವಲ ಚೆನ್ನೈ ತಂಡವೊಂದರಲ್ಲೇ 13 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿರುವುದು ಐಪಿಎಲ್‌ಗೆ ದೊಡ್ಡ ಹಿನ್ನಡೆ ಎಂಬುದರಲ್ಲಿ ಅನುಮಾನವಿಲ್ಲ. ಈ ಸಂದರ್ಭದಲ್ಲಿ ಉಳಿದ ತಂಡಗಳ ಪಾಡೇನು ಎಂಬ ಪ್ರಶ್ನೆ ಕಾಡುತ್ತಿದೆ. ಈ ತಂಡಗಳ ಕೋವಿಡ್‌-19 ಟೆಸ್ಟ್‌ ಫ‌ಲಿತಾಂಶದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಕಸ್ಮಾತ್‌ ಈ ತಂಡಗಳಲ್ಲಿಯೂ ಪಾಸಿಟಿವ್‌ ಕಂಡುಬಂದರೆ ಆಗ ಐಪಿಎಲ್‌ಗೆ ದೊಡ್ಡ ಗಂಡಾಂತರ ಎದುರಾಗುವುದು ಖಂಡಿತ.

Advertisement
Advertisement

Udayavani is now on Telegram. Click here to join our channel and stay updated with the latest news.

Next