Advertisement

ಫಲಿಸಿದ ಹರಕೆ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪತ್ರಕರ್ತನ ಪತ್ನಿಗೆ ಗೆಲುವು

03:39 PM Dec 31, 2020 | sudhir |

ಮುದ್ದೇಬಿಹಾಳ: ಕುಂಟೋಜಿ ಗ್ರಾಮ ಪಂಚಾಯತ್ ನ ಕುಂಟೋಜಿಯ 3ನೇ ವಾರ್ಡ್‌ ಹಿಂದುಳಿದ ಅ ವರ್ಗದ ಮಹಿಳೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಪತ್ರಕರ್ತ ಬಸವರಾಜ ಹುಲಗಣ್ಣಿಯವರ ಪತ್ನಿ ಮಂಜುಳಾ ಹುಲಗಣ್ಣಿ 227 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಈ ಸ್ಥಾನಕ್ಕೆ ಕುಂಟೋಜಿ ಗ್ರಾಪಂನ ನಿಕಟಪೂರ್ವ ಉಪಾಧ್ಯಕ್ಷೆ ಗೌರಮ್ಮ ಆರೇಶಂಕರ, ಮಾಜಿ ಅಧ್ಯಕ್ಷೆ ಲಕ್ಕಮ್ಮ ಅಂದೇಲಿಯವರ ಸೊಸೆ ರೇಣುಕಾ, ನಿಕಟಪೂರ್ವ ಸದಸ್ಯೆ ಮಹಾದೇವಿ ಯರಝರಿ ಪ್ರತಿಸ್ಪರ್ಧಿಗಳಾಗಿದ್ದರು. ಇಂಥ ಘಟಾನುಘಟಿಗಳ ಪೈಪೋಟಿ ಮಧ್ಯೆಯೂ ಮಂಜುಳಾಗೆ ವಿಜಯಲಕ್ಷ್ಮೀ ಒಲಿದಿರುವುದು ಆ ವಾರ್ಡ್‌ ಬಹುತೇಕರ ಹರ್ಷಕ್ಕೆ
ಕಾರಣವಾಗಿದೆ. ಇದೇ ವಾರ್ಡ್‌ನಲ್ಲೇ ಎಣಿಕೆ ಸಂದರ್ಭ ಒಂದು ಮತ ಮಿಸ್‌ ಆಗಿ ಗೊಂದಲ ಸೃಷ್ಟಿಸಿತ್ತು.

Advertisement

ಇದನ್ನೂ ಓದಿ:ಶಹಾಪುರ: ಮತ ಎಣಿಕೆ ಕೇಂದ್ರಕ್ಕೆ ಪಂಚ್‌- ಚಾಕು ತಂದ ಅಭ್ಯರ್ಥಿ ಮಗ

ಹರಕೆ ಹೊತ್ತಿದ್ದ ಪತಿ: ತನ್ನ ಪತ್ನಿಗೆ ಗೆಲುವಾಗಲಿ ಎಂದು ಬಸವರಾಜ ಅವರು ಮನೆದೇವರು ನಿಡಗುಂದಿ ತಾಲೂಕಿನ ಕೃಷ್ಣಾ ನದಿ ತಟಲ್ಲಿರುವ ಯಲ್ಲಮ್ಮನ ಬೂದಿಹಾಳದ ಯಲ್ಲಮ್ಮದೇವಿಗೆ ಹರಕೆ ಹೊತ್ತು ಕೊಂಡಿದ್ದರು. ಮತದಾನದ ಮುನ್ನಾದಿನ
ಮಂಗಳವಾರ ಕಾಲ್ನಡಿಗೆಯಲ್ಲೇ ಕುಂಟೋಜಿಯಿಂದ ಯಲ್ಲಮ್ಮನ ಬೂದಿಹಾಳಕ್ಕೆ ತೆರಳಿ, ಕೃಷ್ಣೆಯಲ್ಲಿ ಮಿಂದು, ದೇವಿಯ ದರ್ಶನ ಪಡೆದುಕೊಂಡಿದ್ದರು. ನನ್ನ ಹರಕೆ ಫಲಿಸಿದೆ. ದೇವಿ ನಮ್ಮನ್ನು ಆಶೀರ್ವದಿಸಿದ್ದಾಳೆ. ದೇವಿ ಮಹಿಳೆ ದೊಡ್ಡದು ಎಂದು ಬಸವರಾಜ ಸುದ್ದಿಗಾರರಿಗೆ ಹೇಳಿಕೊಂಡು ಸಂಭ್ರಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next