ಅಂಶಗಳನ್ನಿಟ್ಟುಕೊಂಡು ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಕಾಣೆಯಾಗಿದ್ದಾರೆ’. ಇದು ಕೂಡಾ ಹಳೆಯ ಬಂಗಲೆಯೊಂದರಲ್ಲಿ ನಡೆಯುವ ಕಥೆ. ಬಂಗಲೆ ಮತ್ತು ಟೈಟಲ್ ಅನ್ನು ನೀವು
ಹೊಂದಿಸಿಕೊಂಡರೆ ಮುಂದೇನಾಗುತ್ತದೆ ಎಂಬುದನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ಅಂದಹಾಗೆ, “ಕಾಣೆಯಾಗಿದ್ದಾರೆ’ ಚಿತ್ರವನ್ನು ಕ್ರಿಶ್ ನಿರ್ದೇಶಿಸುತ್ತಿದ್ದಾರೆ. ಇವರ ಮೂಲ ಹೆಸರು ಕೃಷ್ಣ. ಈ ಹಿಂದೆ “ಜಾಸ್ಮಿನ್.5′ ಎಂಬ ಸಿನಿಮಾ ಮಾಡಿದ್ದರು. ಈಗ
“ಕಾಣೆಯಾಗಿದ್ದಾರೆ’ ಮಾಡುತ್ತಿದ್ದಾರೆ.
Advertisement
ಕೃಷ್ಣ ಹೇಳುವಂತೆ “ಕಾಣೆಯಾಗಿದ್ದಾರೆ’ ಕೇವಲ ಹಾರರ್ ಸಿನಿಮಾವಲ್ಲ. ಕಥೆ ಎರಡು ಟ್ರ್ಯಾಕ್‌ನಲ್ಲಿ ಸಾಗುತ್ತದೆಯಂತೆ. ಒಬ್ಬ ಸಹಾಯಕ ನಿರ್ದೇಶಕ, ತಾನು ನಿರ್ದೇಶಕ ಆಗಬೇಕೆಂಬ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಎಷ್ಟು ಕಷ್ಟಪಡುತ್ತಾನೆ, ಆತನಿಗೆ ಎದುರಾಗುವ ಎಡರು ತೊಡರುಗಳೇನು ಎಂಬುದು ಒಂದು ಅಂಶವಾದರೆ, ಬಂಗಲೆಯೊಂದರಲ್ಲಿ ಎದುರಾಗುವ ದುಷ್ಟಶಕ್ತಿಯ ಕಾಟ ಮತ್ತೂಂದು ಅಂಶವಂತೆ. ಮನುಷ್ಯ ಅತಿಯಾಸೆ ಪಟ್ಟರೆ ಏನಾಗುತ್ತದೆ ಎಂಬ ಒಂದು ಸಣ್ಣ ಸಂದೇಶವನ್ನೂ ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರಂತೆ ಕ್ರಿಶ್. ಸವಣೂರು ಬಳಿಯ 100 ಬಾಗಿಲು ಹಾಗೂ 150 ಕಿಟಕಿಗಳಿರುವ ಹಳೆಯ ಬಂಗಲೆಯೊಂದರಲ್ಲಿಚಿತ್ರೀಕರಣ ನಡೆಯಲಿದ್ದು, ಐದು ಮಂದಿಯ ತಂಡ ಆ ಬಂಗಲೆಯೊಳಗೆ ಹೋದಾಗ ಏನಾಗುತ್ತದೆ ಎಂಬುದು ಕುತೂಹಲಕರ
ಅಂಶವಂತೆ. ಚಿತ್ರದಲ್ಲಿ ಸ್ವತಂತ್ರ್ಯಪೂರ್ವದ ಅಂಶಗಳು ಕೂಡಾ ಬರಲಿದ್ದು, ಅವೆಲ್ಲವನ್ನು ಸೆಟ್ ಹಾಕಿ ಚಿತ್ರೀಕರಿಸುವ ಉದ್ದೇಶ ನಿರ್ದೇಶಕರಿಗಿದೆ.