Advertisement

15ರ ನಂತರ ಶಿಶುಮರಣದ ವರದಿ ಸಲ್ಲಿಕೆ: ಸುರೇಶಕುಮಾರ

04:27 PM Sep 01, 2017 | Team Udayavani |

ಯಾದಗಿರಿ: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಶಿಶು ಮರಣದ ವರದಿಯನ್ನು ಸೆ. 15ರ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸುವುದಾಗಿ ಎಂದು ಶಾಸಕ, ಮಾಜಿ ಸಚಿವ ಸುರೇಶಕುಮಾರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಶಿಶು ಮರಣದ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಾಸ್ತವ ಸ್ಥಿತಿ ಅರಿಯಲು ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಈಗಾಗಲೇ ಕೋಲಾರ, ಕಲಬುರಗಿಗೆ ಭೇಟಿ ನೀಡಿದ್ದು, ಈಗ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ದಾವಣಗೆರೆ, ರಾಯಚೂರು, ಕೊಪ್ಪಳ ಸೇರಿದಂತೆ ಇತರೆ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿಯ ವಾಸ್ತವಾಂಶವನ್ನು ರಾಜ್ಯಾಧ್ಯಕ್ಷರಿಗೆ ನೀಡಲಾಗುತ್ತದೆ. ನಂತರ ಪಕ್ಷದ ವೈದ್ಯಕೀಯ
ಪ್ರಕೋಷ್ಠದ ತಜ್ಞ ವೈದ್ಯರು ಅಧ್ಯಯನ ಮಾಡಿ ಸರಕಾರದ ಮೇಲೆ ಒತ್ತಡ ಹೇರುವ ಕುರಿತು
ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಈ ಮೂರೂ ಜಿಲ್ಲೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ, ಐಸಿಯುನಲ್ಲಿ ಒಂದು ಹಾಸಿಗೆಯಲ್ಲಿ
ಇಬ್ಬರು ಮಕ್ಕಳನ್ನು ಮಲಗಿಸಿರುವುದನ್ನು ಕಂಡಿದ್ದೇವೆ. ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು ಹರಡುತ್ತದೆ. ಈ ಬಗ್ಗೆ ವೈದ್ಯರನ್ನು ಕೇಳಿದರೆ ಸ್ಥಳದ ಅಭಾವವೆಂದು
ಹೇಳುತ್ತಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳಿಲ್ಲ. ಈ ಎಲ್ಲ ಸಮಸ್ಯೆಗಳನ್ನು ರಾಜ್ಯ ಸರಕಾರ
ಬಗೆಹರಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಶಿಶು ಮರಣದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಾಸಕ ಸುರೇಶಕುಮಾರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದ್ದು, ಒಂಭತ್ತು ಜಿಲ್ಲೆಗಳ ಪೈಕಿ ಮೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದೇವೆ ಎಂದರು.

ಕೋಲಾರ, ಕಲಬುರಗಿಯಲ್ಲಿ ಶಿಶು ಮರಣದ ಸಂಖ್ಯೆ ಹೆಚ್ಚಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕೇವಲ ಮೂರು ಮಗು ಮರಣ ಹೊಂದಿವೆ ಎಂದು ವೈದ್ಯರು ತಿಳಿಸಿದ್ದು, ಈ ಬಗ್ಗೆ ತಂಡ ಪರಿಶೀಲನೆ ನಡೆಸಲಿದೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ, ಆಕ್ಸಿಜನ್‌ ಸಿಲಿಂಡರ್‌ ಇಲ್ಲ. ತಾಲೂಕು
ಆಸ್ಪತ್ರೆಗೆಯಾಗಿದ್ದು, ಇನ್ನೂ ಮೇಲ್ದರ್ಜೆಗೇರಿಲ್ಲ ಎಂದರು.

Advertisement

ಪ್ರಾಮಾಣಿಕತೆ ಕೊರತೆ: ಪ್ರಾಮಾಣಿಕತೆ-ನಿಯತ್ತಿನ ಕೊರತೆಯಿಂದ ಕಾಂಗ್ರೆಸ್‌ ಮಹಿಳಾ
ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಹೇಳಿಕೆ ನೀಡಿದ್ದಾರೆ. ರಾಜ್ಯದ ಎಲ್ಲ ಸೌಲಭ್ಯ ಪಡೆದು
ಪಕ್ಕದ ರಾಜ್ಯಕ್ಕೆ ಜೈಕಾರ ಹಾಕಿರುವುದು ಅವರ ನಿಯತ್ತು ತೋರಿಸುತ್ತದೆ. ಇದರಲ್ಲೂ ರಾಜಕಾರಣ
ಕಂಡು ಬರುತ್ತಿದೆ ಎಂದು ಆಪಾದಿಸಿದರು. ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಜಿಲ್ಲಾಧ್ಯಕ್ಷ
ಚಂದ್ರಶೇಖರಗೌಡ ಮಾಗನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next