Advertisement

Rabkavi Banhatti ನವಜಾತ ಶಿಶುವಿಗೆ 12 ಕಾಲ್ಬೆರಳು, 13 ಕೈ ಬೆರಳುಗಳು..!

10:01 PM Jul 19, 2024 | Team Udayavani |

ರಬಕವಿ-ಬನಹಟ್ಟಿ: 12 ಕಾಲ್ಬೆರಳುಗಳು ಮತ್ತು 13 ಕೈ ಬೆರಳುಗಳ ನವಜಾತ ಶಿಶುವೊಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಜನಿಸಿದೆ.

Advertisement

ಮಗುವಿಗೆ ಬಲಗೈಗೆ 6, ಎಡಗೈಗೆ 7 ಮತ್ತು ಪ್ರತಿ ಕಾಲಿನಲ್ಲಿ 6 ಬೆರಳುಗಳಿವೆ. ತಾಯಿ ಭಾರತಿ ಮತ್ತು ಮಗು ಆರೋಗ್ಯವಾಗಿದ್ದಾರೆ. ನನ್ನ ಪತ್ನಿ ಪ್ರತಿ ವಾರ ಬೀಳಗಿ ತಾಲೂಕಿನ ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಬೇಡಿಕೊಂಡಿದ್ದಳು. ದೇವಿಯ ಕೃಪಾಶೀರ್ವಾದದಿಂದ ನಮಗೆ ಗಂಡು ಮಗು ಜನಿಸಿದೆ ಎಂದು ತಂದೆ ಗುರಪ್ಪ ಕೊಣ್ಣೂರ ಸಂತಸ ವ್ಯಕ್ತಪಡಿಸಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿದ ಪ್ರಸೂತಿ ತಜ್ಞೆ ಡಾ|ಪಾರ್ವತಿ ಹಿರೇಮಠ ಮಾತನಾಡಿ, ಕ್ರೋಮೋಸೋಮ್‌ಗಳಿಂದ ಇಂತಹ ಮಗುವಿನ ಜನನವಾಗುತ್ತದೆ. 25 ಬೆರಳು ಹೊಂದಿದ ಗಂಡು ಮಗುವಿನೊಂದಿಗೆ ತಾಯಿಯೂ ಕ್ಷೇಮವಾಗಿದ್ದಾಳೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next