Advertisement

Report Info; ಮಳೆಯಾದರೂ ಡ್ಯಾಂಗಳ ನೀರಿನ ಸಂಗ್ರಹ ಹೆಚ್ಚಾಗಿಲ್ಲ!:ಕೇಂದ್ರದ ಜಲ ಆಯೋಗ

12:36 AM Aug 05, 2024 | Team Udayavani |

ಹೊಸದಿಲ್ಲಿ: ಕರ್ನಾಟಕ, ಕೇರಳ ಸೇರಿ ದೇಶದ ಹೆಚ್ಚಿನ ಭಾಗಗಳಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದರೂ, ದೇಶದ 150 ಪ್ರಮುಖ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆಯೇ ಇದೆ. ಹೀಗೆಂದು ಕೇಂದ್ರ ಜಲ ಆಯೋಗದ ವರದಿ ಹೇಳಿದೆ. 150 ಜಲಾಶಯಗಳಲ್ಲಿ 178.784 ಶತಕೋಟಿ ಕ್ಯೂಬಿಕ್‌ ಮೀಟರ್‌ ನೀರು ಸಂಗ್ರಹ ಸಾಮರ್ಥ್ಯ ಇದೆ. ಈಗ 91.496 ಶತಕೋಟಿ ಕ್ಯೂಬಿಕ್‌ ಮೀಟರ್‌ ನೀರು ಸಂಗ್ರಹ. ಶೇ.51ರಷ್ಟು ನೀರು ಸಂಗ್ರಹವಾಗಿದೆ.

Advertisement

ಕಳೆದ ವರ್ಷ ಲೈವ್‌ ಸ್ಟೋರೇಜ್‌ 83.987 ಶತಕೋಟಿ ಕ್ಯೂ. ಮೀ.ಇತ್ತು. ಸಾಮಾನ್ಯ ನೀರಿನ ಸಂಗ್ರಹ ಪ್ರಮಾಣ 72.411 ಬಿಸಿಎಂ ನೀರು ಇತ್ತು ಎಂದು ವರದಿ ತಿಳಿಸಿದೆ. ಹಿಮಾಚಲ ಪ್ರದೇಶ, ಪಂಜಾಬ್‌,  ರಾಜಸ್ಥಾನಗಳಲ್ಲಿ ಇರುವ 10 ಜಲಾಶಯಗಳಲ್ಲಿ 19.663 ಶತ ಕೋಟಿ ಕ್ಯೂ. ಮೀ. ಸಂಗ್ರಹವಾಗಿದೆ.

ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ಒಳಗೊಂಡ ದಕ್ಷಿಣ ವಲಯದಲ್ಲಿ ಇರುವ 42 ಜಲಾಶಯಗಳಲ್ಲಿ 53.334 ಬಿಸಿಎಂ ನೀರು ಸಂಗ್ರಹ ಸಾಮರ್ಥ್ಯವಿದೆ. ಸದ್ಯ ಅಲ್ಲಿ 35.010 ಬಿಸಿಎಂ ನೀರು ಸಂಗ್ರಹವಾಗಿದೆ. ಅಂದರೆ ಶೇ.66ರಷ್ಟು ನೀರು ಇದೆ.

Advertisement

Udayavani is now on Telegram. Click here to join our channel and stay updated with the latest news.

Next