Advertisement
ಹೌದು, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಂತ-1ರಲ್ಲಿ ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಗುರುತ್ವ ಕಾಲುವೆ ಮೂಲಕ ನೀರು ಹರಿಸಿದ ಬೆನ್ನಲ್ಲೇ ಹೀಗೆ ಎತ್ತಿದ ನೀರನ್ನು ದಶಕಗಳಿಂದ ಎದುರು ನೋಡುತ್ತಿರುವ ಜನರ ಮನೆಬಾಗಿಲಿಗೆ ಹರಿಸಲು ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿದ್ದು ಅಂದುಕೊಂಡಂತೆ ನಡೆದರೆ, ಒಂದೂವರೆ ವರ್ಷದಲ್ಲಿ ಈ ನಿಟ್ಟಿನಲ್ಲಿ ಪ್ರಯೋಗ ಕೂಡ ನಡೆಯಲಿದೆ.
Related Articles
Advertisement
ಮುಂದಿನ ಮುಂಗಾರಿಗೆ ತುಮಕೂರಿಗೆ ನೀರು?
ಸ್ವತಃ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದಂತೆ ಮುಂದಿನ 4 ತಿಂಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಆಗ ತುಮಕೂರಿಗೆ ನೀರು ಹರಿಸುವ ಕಾರ್ಯ ಸುಗಮವಾಗಲಿದೆ. ಅಂದಾಜು ಮುಂದಿನ ಮುಂಗಾರು ಹೊತ್ತಿಗೆ ಯೋಜನೆ ಅಡಿ ತುಮಕೂರಿಗೆ ನೀರು ಹರಿಸಲು ಸಾಧ್ಯವಾಗಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್‌ಎಲ್) ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮಾಹಿತಿ ನೀಡಿದರು. ಯೋಜನೆಯಡಿ ಮೊದಲು ತುಮಕೂರಿನ ವಿವಿಧ ಹಳ್ಳಿಗಳಿಗೆ ನೀರು ಹರಿಯಲಿದೆ. ಇದಕ್ಕಾಗಿ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 35-40 ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಅನಂತರದಲ್ಲಿ ಇತರ ಪ್ರದೇಶಗಳಲ್ಲೂ ಹಂತ-ಹಂತವಾಗಿ ಟೆಂಡರ್ ಕರೆಯಲಾಗುವುದು. ಯೋಜನೆ ಪ್ರಗತಿಗೆ ಅನುಗುಣವಾಗಿ ಇತ್ತ ನೀರನ್ನು ಮನೆಬಾಗಿಲಿಗೆ ಕೊಂಡೊಯ್ಯುವ ಕಾರ್ಯ ನಡೆಯಲಿದೆ. ಅದನ್ನು ಆಯಾ ಸ್ಥಳೀಯ ಸಂಸ್ಥೆಗಳು ಅಥವಾ ಸಣ್ಣ ನೀರಾವರಿ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜವಾಬ್ದಾರಿ ವಹಿಸಿಕೊಂಡಿವೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯ ಎಂಜಿನಿಯರೊಬ್ಬರು ಸ್ಪಷ್ಟಪಡಿಸಿದರು. ಹಂತ-1ರಲ್ಲಿ ಆಗಿದ್ದೇನು?
ಏತ ಕಾಮಗಾರಿಗಳು ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ (ವಿಯರ್-3ರ ವಿದ್ಯುತ್ ಕಾಮಗಾರಿ ಹೊರತುಪಡಿಸಿ)
ಹಂತ-2ರಲ್ಲಿ ಸ್ಥಿತಿಗತಿ
-ಒಟ್ಟು ಕಾಲುವೆ ಉದ್ದ 252.61 ಕಿ.ಮೀ.
– ಪೂರ್ಣಗೊಂಡಿದ್ದು 164.47 ಕಿ.ಮೀ.
– ಪ್ರಗತಿಯಲ್ಲಿರುವುದು 25.87 ಕಿ.ಮೀ. ಯೋಜನೆಯ ಅಂಕಿ-ಅಂಶ
– 24.01 ಟಿಎಂಸಿ ಯೋಜನೆ ಅಡಿ ದೊರೆಯಲಿರುವ ನೀರು
– 14.05 ಟಿಎಂಸಿ ಕುಡಿಯುವ ಉದ್ದೇಶಕ್ಕೆ
-9.95 ಟಿಎಂಸಿ ಕೆರೆಗಳನ್ನು ತುಂಬಿಸುವುದು (ಶೇ. 50ರಷ್ಟು ಮಾತ್ರ) ವಿಜಯಕುಮಾರ ಚಂದರಗಿ