Advertisement

Aagra: 3 ದಿನ ಸತತ ಮಳೆ: ತಾಜ್‌ ಮಹಲಿನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

01:52 AM Sep 15, 2024 | Team Udayavani |

ಲಕ್ನೋ: ಆಗ್ರಾದಲ್ಲಿ ಸತತ 3 ದಿನಗಳಿಂದ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ತಾಜ್‌ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗಿದ್ದು, ಆವರಣದ ಉದ್ಯಾನವ­ನದ ಒಂದು ಭಾಗವೂ ಮುಳುಗಡೆ­ಯಾಗಿದ್ದು, ವೀಡಿಯೋ ವೈರಲ್‌ ಆಗಿದೆ.

Advertisement

ನೀರು ಸೋರಿಕೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಇಲಾಖೆಯ ಆಗ್ರಾ ವಲಯದ ಹಿರಿಯ ಅಧಿಕಾರಿ ರಾಜ್‌ಕುಮಾರ್‌ ಪಟೇಲ್‌ ಮಾಹಿತಿ ನೀಡಿ ಗುಮ್ಮಟ್ಟದಲ್ಲಿನ ತೇವಾಂಶ ಹೆಚ್ಚಾಗಿ ನೀರು ಒಸರುವಿಕೆ ಶುರುವಾಗಿದೆ. ಆದರೆ ಯಾವುದೇ ರೀತಿಯ ಬಿರುಕು ಕಂಡುಬಂದಿಲ್ಲ. ಡ್ರೋನ್‌ ಕೆಮರಾ ಬಳಸಿ ಗುಮ್ಮಟದ ಸ್ಥಿತಿ ಪರಿಶೀಲಿಸಿದ್ದೇವೆ ಎಂದಿದ್ದಾರೆ. ಇನ್ನು ಮಳೆಯ ಪ್ರಮಾಣ ಹೆಚ್ಚಿದ್ದ ಕಾರಣ ಉದ್ಯಾನದ ಒಳಗೆ ನೀರು ನುಗ್ಗಿದೆ ಅದರ ಬಗ್ಗೆ ಈಗಾಗಲೇ ಕಾಳಜಿ ವಹಿಸಿ ಸರಿಪಡಿಸಲಾಗಿದೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next