Advertisement

ಕಯಾಕಿಂಗ್‌ ದೋಣಿ ಬಳಸಿ ದುರಸ್ತಿ: ನೀರಿನ ನಡುವೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ

12:00 AM Jul 18, 2023 | Team Udayavani |

ಕೋಟ: ಕೋಟ ಬೆಟ್ಲಕ್ಕಿ ಹಡೋಲಿನಲ್ಲಿ ತುಂಬಿದ ನೀರಿನ ನಡುವೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ಕೋಟ ಮೆಸ್ಕಾಂ ಸಿಬಂದಿ ಕಯಾಕಿಂಗ್‌ನ ದೋಣಿ ಬಳಸಿ ದುರಸ್ತಿಗೊಳಿಸಿದ ಘಟನೆ ಜು. 17ರಂದು ನಡೆದಿದೆ.

Advertisement

ಪೊದೆಗೆ ತಾಗುತ್ತಿದ್ದ ಕಾರಣ ವಿದ್ಯುತ್‌ ತಂತಿ ಕಡಿದು ಬಿದ್ದಿತ್ತು. ಸುತ್ತ ನೀರು ತುಂಬಿದ್ದರಿಂದ ದುರಸ್ತಿ ಸುಲಭಸಾಧ್ಯವಾಗಿರಲಿಲ್ಲ. ಆಗ ಪಾರಂಪಳ್ಳಿಯ ದಯಾನಂದ ಸಾಲಿಯಾನ್‌ ಅವರ ಕಯಾಕಿಂಗ್‌ ಪಾಯಿಂಟ್‌ನಿಂದ 4 ದೋಣಿಗಳನ್ನು ತರಿಸಿಕೊಂಡು ಅದರ ಮೂಲಕ ನಾಲ್ಕೈದು ಮಂದಿ ಸಿಬಂದಿ ತಂತಿ ಕಡಿದುಬಿದ್ದಿದ್ದ ಸ್ಥಳಕ್ಕೆ ತೆರಳಿ ಅದರಲ್ಲೇ ನಿಂತುಕೊಂಡು ದುರಸ್ತಿ ನಡೆಸಿದರು. ಮೆಸ್ಕಾಂ ಸಿಬಂದಿಯ ಪರಿಶ್ರಮಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.

ಮೆಸ್ಕಾಂ ಸಹಾಯಕ ಎಂಜಿನಿಯರ್‌ ಪ್ರಶಾಂತ್‌ ಶೆಟ್ಟಿ, ಸಿಬಂದಿ ಚಂದ್ರಶೇಖರ್‌, ಹರೀಶ್‌, ಅರುಣ್‌, ಉಮರ್‌, ಸಂತೋಷ್‌, ಮೆಹಬೂಬ್‌ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next