Advertisement

ದುರಸ್ತಿಗೆ ಕಾಯುತ್ತಿದೆ ಚಾಪಳ್ಳ –ಆರೆಲ್ತಡಿ ರಸ್ತೆ

02:50 AM Jul 02, 2018 | Team Udayavani |

ಸವಣೂರು: ಬೆಳಂದೂರು ಜಿ.ಪಂ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸವಣೂರು ಗ್ರಾಮದ ಚಾಪಳ್ಳ – ಆರೇಲ್ತಡಿ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದ್ದು, ದುರಸ್ತಿಗೆ ಕಾಯುತ್ತಿದೆ. ಆರೇಲ್ತಡಿ ಶಾಲೆ, ಅಂಗನವಾಡಿ, ಆರೇಲ್ತಡಿ ದೈವಸ್ಥಾನ ಹಾಗೂ ಇಲ್ಲಿನ ಜನವಸತಿ ಪ್ರದೇಶಗಳಿಗೆ ಈ ರಸ್ತೆಯ ಮೂಲಕವೇ ಸಂಚರಿಸಬೇಕು. ರಸ್ತೆಯಲ್ಲಿ ಹೊಂಡಗಳೇ ಗೋಚರಿಸುತ್ತಿದ್ದು, ಅದರಲ್ಲಿ ನೀರು ತುಂಬಿಕೊಂಡು ಪಾದಚಾರಿಗಳಿಗೂ ಕೆಸರಿನ ಸಿಂಚನವಾಗುತ್ತಿದೆ. ವಾಹನ ಸವಾರರಿಗೂ ಹೊಂಡಗಳ ಗಾತ್ರದ ಅರಿವಾಗದೆ ಪರದಾಡುತ್ತಿದ್ದಾರೆ. ಈ ರಸ್ತೆಗೆ ಸುಳ್ಯ ಶಾಸಕ ಎಸ್‌. ಅಂಗಾರ ಹಾಗೂ ಈ ಹಿಂದಿನ ಜಿ.ಪಂ. ಸದಸ್ಯರ ಅನುದಾನದಲ್ಲಿ ಒಟ್ಟು 35 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಹಾಗೂ ಡಾಮರು ಕಾಮಗಾರಿ ನಡೆದಿದೆ. ಉಳಿದ ಭಾಗ ಡಾಮರು ಕಾಮಗಾರಿಗಾಗಿ ಕಾಯುತ್ತಿದೆ.

Advertisement

ರಸ್ತೆ ದುರಸ್ತಿ ಮಾಡಿ
ನಿತ್ಯ ನೂರಾರು ಜನರು ಈ ರಸ್ತೆಯನ್ನೇ ಅವಲಂಬಿಸಿದ್ದರೂ, ಅವ್ಯವಸ್ಥೆಯಿಂದ ಮುಕ್ತಿ ಸಿಕ್ಕಿಲ್ಲ. ಈ ರಸ್ತೆಯ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತಾಗಿ ಗಮನ ಹರಿಸಿ, ತಾತ್ಕಾಲಿಕವಾಗಿ ಮರಳಿನ ಚರಳುಗಳನ್ನಾದರೂ ಹಾಕಿ, ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಈ ಮಳೆಗಾಲದಲ್ಲಿ ಸಂಚರಿಸುವುದೇ ಅಸಾಧ್ಯವಾದೀತು.
– ಪುಷ್ಪರಾಜ ಆರೇಲ್ತಡಿ, ಸ್ಥಳೀಯ

ಮನವಿ ಮಾಡಲಾಗಿದೆ
ಈ ರಸ್ತೆಯ ಅಭಿವೃದ್ಧಿಗಾಗಿ ಸುಳ್ಯ ಶಾಸಕರು, ಜಿ.ಪಂ. ಸದಸ್ಯರ 35 ಲಕ್ಷ ರೂ.ಗಳ ಅನುದಾನದಲ್ಲಿ ಡಾಮರು, ಕಾಂಕ್ರಿಟ್‌ ಕಾಮಗಾರಿ ನಿರ್ವಹಿಸಲಾಗಿದೆ. ಅಲ್ಲದೆ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಊರವರೊಂದಿಗೆ ಶ್ರಮದಾನದಿಂದ ಕೆಲಸ ಮಾಡಲಾಗಿದೆ. ಈ ರಸ್ತೆಗೆ ಅನುದಾನ ನೀಡುವಂತೆ ಶಾಸಕರಲ್ಲಿ, ಸಂಸದರಲ್ಲಿ ಮನವಿ ಮಾಡಲಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.
– ರಾಕೇಶ್‌ ರೈ ಕೆಡೆಂಜಿ, ಮಾಜಿ ಉಪಾಧ್ಯಕ್ಷರು, ಸವಣೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next