Advertisement

Sambhal; ಮತ್ತೆ ತೆರೆದ ದೇವಾಲಯ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ: ಸಿಎಂ ಯೋಗಿ

06:29 PM Dec 15, 2024 | Team Udayavani |

ಲಕ್ನೋ: ಕೋಮು ಗಲಭೆಗಳ ನಂತರ 1978 ರಿಂದ ಬೀಗ ಹಾಕಲಾಗಿದ್ದ ಸಂಭಾಲ್‌ನಲ್ಲಿರುವ ಐತಿಹಾಸಿಕ ದೇವಾಲಯವನ್ನು ರವಿವಾರ(ಡಿ15)ಅಧಿಕಾರಿಗಳು ಪುನಃ ತೆರೆದಿದ್ದು, ಪೂಜೆ ಸಲ್ಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ದೇವಾಲಯವು ರಾತ್ರೋರಾತ್ರಿ ಮತ್ತೆ ಕಾಣಿಸಿಕೊಂಡಿಲ್ಲ. ಇದು ನಮ್ಮ ನಿರಂತರ ಪರಂಪರೆ, ನಮ್ಮ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

Advertisement

ಕುಂಭಮೇಳದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಯೋಗಿ ”46 ವರ್ಷಗಳ ಹಿಂದೆ ಸಂಭಾಲ್‌ನಲ್ಲಿ “ಅನಾಗರಿಕ ಹಿಂಸಾಚಾರ” ದಿಂದ ಅಮಾಯಕರು ಪ್ರಾಣ ಕಳೆದುಕೊಂಡ ದುರಂತ ಘಟನೆಗಳನ್ನು ಉಲ್ಲೇಖಿಸಿದರು.

“ಹ*ತ್ಯಾಕಾಂಡದ ಅಪರಾಧಿಗಳನ್ನು ದಶಕಗಳ ನಂತರವೂ ಏಕೆ ನ್ಯಾಯಾಂಗಕ್ಕೆ ತರಲಾಗಿಲ್ಲ?” ಕುಂಭದಂತಹ ಸತ್ಯವನ್ನು ನಿಗ್ರಹಿಸಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳಂಕಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಸತ್ಯದ ಧ್ವನಿಗಳು ಆಗಾಗ್ಗೆ ಬೆದರಿಕೆಗಳನ್ನು ಮತ್ತು ಅವುಗಳನ್ನು ಮೌನಗೊಳಿಸಲು ಪ್ರಯತ್ನಗಳನ್ನು ಎದುರಿಸುತ್ತವೆ ಎಂದರು.

ಇದನ್ನೂ ಓದಿ: Sambhal :ಉದ್ವಿಗ್ನತೆಯ ನಡುವೆ ಮಸೀದಿ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ

ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಪ್ರಯಾಗರಾಜ್ ಮಹಾಕುಂಭದಲ್ಲಿ 40 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ, 100 ಕೋಟಿ ಜನರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂ ಯೋಗಿ ಘೋಷಿಸಿದರು.

Advertisement

ಜನವರಿ 29 ರಂದು ಮೌನಿ ಅಮಾವಾಸ್ಯೆಯ ಮುಖ್ಯ ಮುಹೂರ್ತದಲ್ಲಿ, ಅಂದಾಜು ಆರು ಕೋಟಿ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ, ಆದರೆ 10 ಕೋಟಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next