Advertisement
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್ ಹಾಗೂ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ರೇಣುಕಾಚಾರ್ಯ ವಿರುದ್ದ ಟೀಕಾ ಪ್ರಹಾರ ನಡೆಸಿದರು.
Related Articles
Advertisement
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 66 ಸ್ಥಾನ ಬರಲು ರೇಣುಕಾಚಾರ್ಯರೇ ಕಾರಣ. ಅವರು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ತಮ್ಮ ಕುಟುಂಬ ಸದಸ್ಯರಿಗೆ ಬೇಡಜಂಗಮ ಪ್ರಮಾಣ ಪತ್ರದೊಂದಿಗೆ ಸ್ಪರ್ಧಿಸುವಂತೆ ಮಾಡಿದರು. ಬಳಿಕ ಸ್ಪರ್ಧೆಯಿಂದ ಹಿಂದಕ್ಕೆ ಸರಿಸಿದಾದರೂ ಈ ವಿಚಾರ ಕೂಡ ರಾಜ್ಯದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾಯಿತು ಎಂದರು.
ರೇಣುಕಾಚಾರ್ಯ ಅವರಿಗೆ ಪ್ರಚಾರದಗೀಳಿದೆ. ಅವರೊಬ್ಬ ಟಿಆರ್‌ಪಿ ರಾಜಕಾರಣಿ. ಮೊಣಕಾಲಷ್ಟು ನೀರಿಲ್ಲದ ಹೊಳೆಯಲ್ಲಿ ತೆಪ್ಪ ಸಾಗಿಸಿ, ನಗೆಪಾಟಲಿಗೀಡಾದವರು. ಏನಾದಾರೂ ಮಾತನಾಡಿ ಸದಾ ಸುದ್ದಿಯಲ್ಲಿರಬೇಕು ಎಂಬ ದುರ್ಬುದ್ಧಿ ಅವರದ್ದಾಗಿದೆ. ಬಿಎಸ್ ವೈ ಮುಖ್ಯಮಂತ್ರಿಯಾಗಿದ್ದಾಗ ರೆಸಾರ್ಟ್ ರಾಜಕಾರಣ ಮಾಡಿ ಅವರಿಗೆ ಧಮಕಿ ಹಾಕಿದವರು. ಅವರು ಪಕ್ಷದ ಯಾವ ನಾಯಕರನ್ನೂ ಬಿಟ್ಟಿಲ್ಲ ಎಲ್ಲರ ವಿರುದ್ಧವೂ ಮಾತನಾಡಿದ್ದಾರೆ; ಎಲ್ಲರಿಗೂ ಕಿರುಕುಳ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ವೇಳೆಯಲ್ಲಿ ಗೃಹ ಸಚಿವ ಅಮಿತ್ ಶಾ ಸ್ವತಃ ಕೈಮುಗಿದು ಭಿನ್ನಾಭಿಪ್ರಾಯ ಬಿಟ್ಟು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಸಹಕರಿಸಿ ಎಂದು ಕೇಳಿಕೊಂಡಿದ್ದರು. ಆದರೂ ರೇಣುಕಾಚಾರ್ಯ ನೇತೃತ್ವದ ಲಗಾನ್ ತಂಡ ಅವರ ಮಾತಿಗೆ ಮನ್ನಣೆ ಕೊಟ್ಟಿಲ್ಲ ಎಂದು ಆರೋಪಿಸಿದರು.