ದಾವಣಗೆರೆ: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಐಷಾರಾಮಿ ಯಾತ್ರೆಯಾಗಿದ್ದು ದಿನಕ್ಕೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಈಗ ಇಷ್ಟೊಂದು ಹಣ ಖರ್ಚು ಮಾಡುತ್ತಿರುವ ರಾಹುಲ್ ಗಾಂಧಿ ಕೋವಿಡ್ ಸಂದರ್ಭದಲ್ಲಿ ಎಲ್ಲಿದ್ದರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದರು.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದು ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆ. ಕಾಶ್ಮೀರ ದಿಂದ ಕನ್ಯಾ ಕುಮಾರಿವರೆಗೂ ಜನರು ಗೋ ಬ್ಯಾಕ್ ಎಂದು ಅವರನ್ಮು ಓಡಿಸುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಜನರು ಬರುತ್ತಿಲ್ಲ. ಹಣ ಕೊಟ್ಟು ಕರೆತರುತ್ತಿದ್ದಾರೆ ಎಂದರು.
ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿಯವರು ಇದ್ದ ಕಾಂಗ್ರೆಸ್ ದೇಶ ಭಕ್ತಿಯ ಕಾಂಗ್ರೆಸ್. ಈಗಿನದು ನಕಲಿ ಕಾಂಗ್ರೆಸ್. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲು ಯಾರೂ ಸಿದ್ದರಿಲ್ಲ. ರಾಹುಲ್ ಗಾಂಧಿ ಅಧ್ಯಕ್ಷರಾದರೆ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎನ್ನುವುದು ಅವರಿಗೂ ಗೊತ್ತಿದೆ. ಅದ್ದರಿಂದ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡುತ್ತಿದ್ದಾರೆ. ಖರ್ಗೆಯವರ ಮೇಲೆ ಅಪಾರವಾದ ಗೌರವ ಇದೆ. ಈ ವಿಚಾರದಲ್ಲಿ ಅವರನ್ನು ಬಲಿ ಪಶು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ: ವಿಚಾರಣೆ ಡಿಸೆಂಬರ್ 3 ಕ್ಕೆ ಮುಂದೂಡಿಕೆ
ಪ್ರಧಾನಿ ನರೇಂದ್ರ ಮೋದಿ ಒಂದು ದೈತ್ಯ ಬಂಡೆ. ಅ ಬಂಡೆಯ ವಿರುದ್ದ ರಾಹುಲ್ ಹೋಗುತ್ತಿದ್ದಾರಲ್ಲ ಇದು ಬಾಲಿಶ ವರ್ತನೆ. ರಾಹುಲ್ ಗಾಂಧಿ ಅವರಿಗೆ ರಾಜಕೀಯ ಪ್ರಬುದ್ದತೆ ಇಲ್ಲ. ರಾಹುಲ್ ಗಾಂಧಿ ಫನ್ನಿಬಾಯ್ ಆಗಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮೋತ್ಸವ ದಲ್ಲಿ ಡಿಕೆಶಿಹಾಗೂ ಸಿದ್ದರಾಮಯ್ಯ ಬಲವಂತರದ ಅಪ್ಪುಗೆ ಮಾಡಿಹೋಗಿದ್ದಾರೆ. ಬೆಂಗಳೂರಿಗೆ ಹೋದ ನಂತರ ನಾನೊಂದು ತೀರಾ ನೀನೊಂದು ತೀರಾ ಆಗಿದ್ದಾರೆ ಎಂದರು.