Advertisement

ಗಲಭೆಕೋರರನ್ನು ಗಲ್ಲಿಗೇರಿಸುವುದು ಸೂಕ್ತ: ರೇಣುಕಾಚಾರ್ಯ

06:05 PM Aug 18, 2020 | Suhan S |

ಹೊನ್ನಾಳಿ: ಕೆ.ಜೆ. ಹಳ್ಳಿ-ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ಗಲಭೆಕೋರರನ್ನು ಬಂಧಿಸುವ ಬದಲು ಗಲ್ಲಿಗೇರಿಸುವುದೇ ಸೂಕ್ತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

Advertisement

ಪಟ್ಟಣದ ಕಲ್ಕರೆ, ಬಾಲರಾಜ್‌ ಘಾಟ್‌, ಕೊತ್ತುಂಬರಿ ಕೇರಿ, ಆರ್ಯರ ಕೇರಿ, ತುಂಗಭದ್ರಾ ಬಡಾವಣೆಯಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾದ 58 ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಕಿಟ್‌ ಹಾಗೂ ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ದಲಿತ ಶಾಸಕರ ಮನೆಯ ಮೇಲೆ ದೇಶದ್ರೋಹಿಗಳು ವ್ಯವಸ್ಥಿತ ಪಿತೂರಿ ನಡೆಸಿ ಹಣ, ಬಂಗಾರ ದೋಚಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇಂಥವರನ್ನು ಜಮೀರ್‌ ಅಹಮ್ಮದ್‌ ಹಾಗೂ ಕಾಂಗ್ರೆಸ್‌ ನ ಇತರ ನಾಯಕರು ಅಮಾಯಕರು ಎನ್ನುತ್ತಾರೆ. ಜಮೀರ್‌ ಅಹಮ್ಮದ್‌ ಹಾಗೂ ಮತ್ತಿತರ ದೇಶದ್ರೋಹಿಗಳ ಕುಮ್ಮಕ್ಕಿನಿಂದ ಈ ಗಲಭೆ ನಡೆದಿದೆ. ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ 350 ಜನರನ್ನು ಬಂಧಿಸಲಾಗಿದೆ. ಎಸ್‌ ಡಿಪಿಐ ಸೇರಿದಂತೆ ವಿವಿಧ ಸಂಘಟನೆಗಳು ದೇಶದ್ರೋಹದ ಕೆಲಸ ಮಾಡುತ್ತಿದ್ದು ಅವುಗಳನ್ನು ನಿಷೇಧ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ದೇಶದ್ರೋಹಕ್ಕೆ ಕುಮ್ಮಕ್ಕು ಹಾಗೂ ಪ್ರಚೋದನೆ ನೀಡುವವರನ್ನು ಯಾವತ್ತೂ ಕ್ಷಮಿಸಬಾರದು ಎಂದರು.

ಸಿದ್ದರಾಮಯ್ಯ, ಡಿಕೆಶಿ, ಜಮೀರ್‌ ಅಹಮ್ಮದ್‌ ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದನ್ನು ಬಿಟ್ಟು ಪೊಲೀಸರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು. ನ್ಯಾಮತಿ ತಾಪಂ ಅಧ್ಯಕ್ಷ ಎಸ್‌.ಪಿ. ರವಿಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next