Advertisement

ರಾಮಾಯಣ : ಸಚಿವ ರಿಜಿಜು ವಿರುದ್ಧ ರೇಣುಕಾ ಹಕ್ಕು ಚ್ಯುತಿ

11:40 AM Feb 09, 2018 | Team Udayavani |

ಹೊಸದಿಲ್ಲಿ : ರಾಜ್ಯಸಭೆಯಲ್ಲಿ ನಿನ್ನೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ  ಭಾಷಣಕಾರನನ್ನು ಅವಮಾನಿಸುವ ರೀತಿಯಲ್ಲಿ ದೊಡ್ಡ ಸ್ವರದಲ್ಲಿ ನಕ್ಕು ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದುಕೊಂಡ ರೇಣುಕಾ ಚೌಧರಿ ಅವರು ತನ್ನ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟಿಂಗ್‌ ಹಾಕಿರುವ ಸಹಾಯಕ ಗೃಹ ಸಚಿವ ಕಿರಣ್‌ ರಿಜಿಜು ಅವರ ವಿರುದ್ಧ ಹಕ್ಯುಚ್ಯುತಿ ಗೊತ್ತುವಳಿಯನ್ನು ದಾಖಲಿಸಿದ್ದಾರೆ.

Advertisement

ರೇಣುಕಾ ಚೌಧರಿ ಅವರು ಸದನದಲ್ಲಿ ದೊಡ್ಡದಾಗಿ ನಕ್ಕಾಗ ಭಾಷಣಕಾರ ಪ್ರಧಾನಿ ಮೋದಿ ಅವರು ರಾಮಾಯಣ ಟಿವಿ ಸೀರಿಯಲ್‌ ಉಲ್ಲೇಖೀಸಿದ್ದರು. ಮೋದಿ ಅವರ ಈ ಉಲ್ಲೇಖದ ವಿಡಿಯೋವನ್ನು  ಸಚಿವ ರಿಜಿಜು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದರು. ಇದರಿಂದ ತನಗೆ ಅವಮಾನವಾಗಿದೆ; ಸಚಿವರು ಸದನ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ರೇಣುಕಾ ಹಕ್ಕುಚ್ಯುತಿ ಗೊತ್ತುವಳಿ ಮಂಡಿಸಿದ್ದಾರೆ.

ಆದರೆ ಸಚಿವ ರಿಜಿಜು ಅವರು ತಾನು ಮೋದಿ ವಿಡಿಯೋ ಹಾಕುವ ಮೂಲಕ ಯಾವುದೇ ತಪ್ಪೆಸಗಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. “ರೇಣುಕಾಜೀ ಅವರೇ, ನಾನು ಮಹಿಳೆಯರ ಘನತೆಯನ್ನು ಯಾವ ರೀತಿಯಲ್ಲಿ ಅವಮಾನಿಸಿದ್ದೇನೆ ಎಂಬುದು ನನಗೆ ಅರ್ಥವಾಗುವುದಿಲ್ಲ. ನಾನು ಕೇವಲ ಪ್ರಧಾನಿಯವರನ್ನು ಉಲ್ಲೇಖಸಿ ಅವರ ವಿಡಿಯೋ ತುಣುಕನ್ನು ಹಾಕಿದ್ದೇನೆ’ ಎಂದು ರಿಜಿಜು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next