Advertisement

ಇಂದು ಪ್ರಶಸ್ತಿ ಸ್ವೀಕಾರದ ಸಂಭ್ರಮದಲ್ಲಿದ್ದ ‘ದ್ರೋಣಾಚಾರ್ಯ’ ಪುರುಷೋತ್ತಮ ರೈ ನಿಧನ!

12:49 AM Aug 29, 2020 | Hari Prasad |

ಬೆಂಗಳೂರು: ದೇಶ ಕಂಡ ಖ್ಯಾತ ಅಥ್ಲೆಟಿಕ್ಸ್‌ ತರಬೇತುದಾರ ಪುರುಷೋತ್ತಮ ರೈ ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

Advertisement

ಶುಕ್ರವಾರ ರಾತ್ರಿ 7.30ಕ್ಕೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತ ಹೊಂದಿದ ಪರಿಣಾಮ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಶನಿವಾರ ಆನ್‌ಲೈನ್‌ ಮೂಲಕ ದ್ರೋಣಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸುವ ಸಂಭ್ರಮದಲ್ಲಿದ್ದ ಅವರು, ಹಿಂದಿನ ದಿನವಾದ ಶುಕ್ರವಾರ ನಿಧನ ಹೊಂದಿರುವುದು ನೋವಿನ ಸಂಗತಿಯಾಗಿದೆ.

ದ್ರೋಣಾಚಾರ್ಯ ಭಾರತೀಯ ಕ್ರೀಡಾ ತರಬೇತುದಾರರಿಗೆ ನೀಡುವ ಸರ್ವೋಚ್ಚ ಪ್ರಶಸ್ತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಪುರುಷೋತ್ತಮ ರೈ ಅವರು, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ನಿವೃತ್ತರಾಗಿದ್ದರು.

ಅವರಿಗೆ ಹತ್ತಾರುವರ್ಷಗಳ ಹಿಂದೆಯೇ ಸಿಗಬೇಕಾಗಿದ್ದ ದ್ರೋಣಾಚಾರ್ಯ, ತಡವಾಗಿಯಾದರೂ ಸಿಕ್ಕಿತ್ತು. ಸ್ವತಃ ರೈಯವರು ಈ ಪ್ರಶಸ್ತಿ ತನಗೆ 20 ವರ್ಷಗಳ ಹಿಂದೆಯೇ ಬರಬೇಕಿತ್ತೆಂದು ಹೇಳಿದ್ದರು. ಪ್ರಸ್ತುತ ತರಬೇತುದಾರರಾಗಿ ಅವರು ಮಾಡಿದ ಆಜೀವ ಸಾಧನೆಗೆ ದ್ರೋಣಾಚಾರ್ಯ ಲಭಿಸಿದೆ.

Advertisement

ಪುರುಷೋತ್ತಮ ಅವರು, 1974ರಿಂದಲೇ ತರಬೇತುದಾರಿಕೆಯನ್ನು ಆರಂಭಿಸಿದರು. ಹಲವಾರು ಏಷ್ಯನ್‌ ಗೇಮ್ಸ್‌ಗಳು, ಸ್ಯಾಫ್ ಗೇಮ್ಸ್‌ಗಳು, ಏಷ್ಯಾಮಟ್ಟದ ಇತರೆ ಕೂಟಗಳಿಗಾಗಿ ಅವರು ಅಥ್ಲೀಟ್‌ಗಳನ್ನು ತಯಾರು ಮಾಡಿದ್ದರು.

1987ರಲ್ಲಿ ಇಟಲಿಯ ರೋಮ್‌ನಲ್ಲಿ ವಿಶ್ವ ಅಥ್ಲೆಟಿಕ್‌ ಕೂಟಕ್ಕೆ ಭಾರತೀಯ ತಂಡದ ತರಬೇತುದಾರರಾಗಿ ತೆರಳಿದ್ದರು.

ಇವರ ಗರಡಿಯಲ್ಲಿ ತಯಾರಾಗಿದ್ದ ಖ್ಯಾತ ಕ್ರೀಡಾಪಟುಗಳು: ಪುರುಷೋತ್ತಮ ಅವರ ಗರಡಿಯಲ್ಲಿ ಹಲವಾರು ಕ್ರೀಡಾರತ್ನಗಳು ಸಿದ್ಧವಾಗಿವೆ ಅಚರಲ್ಲಿ ಪ್ರಮುಖರೆಂದರೆ, ಮುರಳಿಕುಟ್ಟನ್‌, ಅಶ್ವಿ‌ನಿ ನಾಚಪ್ಪ, ಎಸ್‌.ಡಿ.ಈಶನ್‌, ರೋಸಾ ಕುಟ್ಟಿ, ಜಿ.ಜಿ.ಪ್ರಮೀಳಾ, ಎಂ.ಕೆ.ಆಶಾ, ಇ.ಬಿ.ಶೈಲಾ, ಜೈಸಿ ಥಾಮಸ್‌ ಇವರಿಂದ ತರಬೇತಾದ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next