Advertisement

ಕಿಲ್ಲೆ ಮೈದಾನದ ಐತಿಹಾಸಿಕ ಧ್ವಜಸ್ತಂಭ ನವೀಕರಣ

01:21 PM Jul 30, 2018 | Team Udayavani |

ನಗರ: ಕಿಲ್ಲೆ ಮೈದಾನದ ಬಳಿ ಇರುವ ಧ್ವಜಸ್ತಂಭ ಹಾಗೂ ಅದರ ಆವರಣವನ್ನು ನವೀಕರಿಸುವ ಕಾಮಗಾರಿ ಆರಂಭವಾಗಿದ್ದು, ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಹಾಗೂ ಸದಸ್ಯರು ವೀಕ್ಷಿಸಿದರು. ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿ, ನಮ್ಮ ಕೋರಿಕೆಯಂತೆ ಅಂಬಿಕಾ ಸಮೂಹ ಸಂಸ್ಥೆಯ ಮುಖ್ಯಸ್ಥ ಸುಬ್ರಹ್ಮಣ್ಯ ನಟ್ಟೋಜ ಅವರು ತಮ್ಮ ಸ್ವಂತ 3 ಲಕ್ಷ ರೂ. ವೆಚ್ಚದಲ್ಲಿ ಧ್ವಜ ಸ್ತಂಭ ನವೀಕರಣ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಈ ಸಂಸ್ಥೆಯವರು ಯೋಧರ ಸ್ಮಾರಕವನ್ನು ನಿರ್ಮಾಣ ಮಾಡಿ ಇದೀಗ ಧ್ವಜಸ್ತಂಭವನ್ನು ನವೀಕರಿಸಲು ಮುಂದಾಗಿರುವುದು ಅವರ ರಾಷ್ಟ್ರ ಪ್ರೇಮವನ್ನು ತೋರಿಸುತ್ತದೆ. ನಗರ ಸಭೆ, ಪುತ್ತೂರು ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು.

Advertisement

ಯೋಧರ ಸ್ಮಾರಕ ಮತ್ತು ಧ್ವಜಸ್ತಂಭದ ಪಕ್ಕದಲ್ಲಿರುವ ಜಾಗವನ್ನು ಉತ್ತಮವಾಗಿ ಅಭಿವೃದ್ಧಿಪಡಿಸುವ, ಅಲ್ಲಿರುವ ರೇಡೀಯೋ ಕೇಂದ್ರ ಮತ್ತು ಸೈರನ್‌ ಅನ್ನು ನವೀಕರಿಸುವ, ಕಿಲ್ಲೆ ಮೈದಾನ, ಪುರಭವನವನ್ನು ಅಭಿವೃದ್ಧಿಪಡಿಸುವ ಕಾರ್ಯಗಳು 2 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿವೆ ಎಂದು ಹೇಳಿದರು. ನಗರಸಭಾ ಸದಸ್ಯ ಎಚ್‌. ಮಹಮ್ಮದ್‌ ಆಲಿ, ನಗರಸಭಾ ಕಿರಿಯ ಅಭಿಯಂತರ ಶ್ರೀಧರ್‌ ನಾಯ್ಕ. ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್‌, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next