Advertisement

ಬುರುಡೆ ರಾಮಯ್ಯನ ಸರಕಾರವನ್ನು ತೊಲಗಿಸಿ 

09:23 AM Nov 14, 2017 | |

ಉಪ್ಪುಂದ: ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 3,102 ಅತ್ಯಾಚಾರ ಪ್ರಕರಣ; 2,534 ಮಹಿಳೆಯರ ಹತ್ಯೆ, 426 ಮಹಿಳೆಯರ ಅಪಹರಣ ವಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪರಿಸ್ಥಿತಿ ಹೀಗಿದ್ದರೂ ಸುಳ್ಳು ಹೇಳುತ್ತ ಕಾಲ ಹರಣ ಮಾಡುತ್ತಿರುವ ಬುರುಡೆ ರಾಮಯ್ಯನ ಸರಕಾರವನ್ನು ತೊಲಗಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯ  ಅಂಗವಾಗಿ ಸೋಮವಾರ ನಾಗೂರಿನ ಸಂದೀಪನ್‌ ಆಂಗ್ಲ ಮಾಧ್ಯಮ ಶಾಲೆಯ ಎದುರಿನ ಮೈದಾನದಲ್ಲಿ  ಜರಗಿದ ಬಿಜೆಪಿ ಕಾರ್ಯ ಕರ್ತರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಕ್‌ ಔಷಧ ಯೋಜನೆಯಲ್ಲಿ 100 ರೂ. ಬೆಲೆಯ ಮಾತ್ರೆಯನ್ನು 10 ರೂ.ಗೆ ನೀಡುತ್ತಿದ್ದಾರೆ. ರೈತರಿಗೆ ಕಡಿಮೆ ಬೆಲೆಯಲ್ಲಿ ರಸಗೊಬ್ಬರ ನೀಡುತ್ತಿದ್ದಾರೆ. ದೇಶದ ಜನತೆಗೆ ದಿನದ 24 ಗಂಟೆ ವಿದ್ಯುತ್‌ ಕೊಡಲು ಪ್ರಧಾನಮಂತ್ರಿ ಶ್ರಮಿಸುತ್ತಿದ್ದಾರೆ. ಮಹಿಳೆಯರಿಗೆ ಬ್ಯಾಂಕಿನಲ್ಲಿ ಯಾವುದೇ ಜಾಮೀನು ಇಲ್ಲದೆ 1 ಲಕ್ಷದಿಂದ 30 ಲಕ್ಷ ರೂ. ಸಾಲ ನೀಡುವ ಮುದ್ರಾ ಯೋಜನೆ ಜಾರಿಗೊಳಿಸಿದ್ದಾರೆ. ಜನತೆ ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದರು.

ರಾಜ್ಯದ ಜನತೆ ಇನ್ನು ಮೂರ್‍ನಾಲ್ಕು ತಿಂಗಳು ತಾಳ್ಮೆ ವಹಿಸಬೇಕು. ಬಳಿಕ ಈಗಿರುವ ಭ್ರಷ್ಟ ಸರಕಾರ ತೊಲಗು ತ್ತದೆ. ರಾಜ್ಯದ ಬಗ್ಗೆ ನನ್ನದೇ ಆದ ಕನಸುಗಳಿವೆ. ಅದನ್ನು ಇವತ್ತು ಹೇಳಿದರೆ ಬುರುಡೆ ದಾಸಯ್ಯ ಸಿದ್ದರಾಮಯ್ಯ ನಾನೇ ಮಾಡುತ್ತೇನೆ ಎಂದು ಹೇಳು ತ್ತಾರೆ. ಬಿಜೆಪಿ ಸರಕಾರದಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತರ ಮತ್ತು ಪರಿಹಾರ ಕೊಡುತ್ತೇನೆ ಎಂದರು.

ತುಳಸಿ ನೀರು ಬಿಡಿ
ರಾವಣನ ಸರಕಾರವನ್ನು ಕೊನೆ ಗಾಣಿಸಿ ರಾಮರಾಜ್ಯವನ್ನಾಗಿಸಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಬೇಕು. ಯುದ್ಧ ಆರಂಭವಾಗಿದೆ ರಾಜ್ಯ ಸರಕಾರಕ್ಕೆ ತುಳಸಿ ನೀರು ಬಿಡುವ ಸಂದರ್ಭ ಬಂದಿದೆ ಓಟಿಗಾಗಿ ನಾಟಕ ಮಾಡುವ ಸಿದ್ದರಾಮಯ್ಯ ಸರಕಾರವನ್ನು ಮನೆಗೆ ಕಳುಹಿಸಲು ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಹೇಳಿದರು.

ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ, ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ್‌ ಶೆಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಭಾರತಿ ಶೆಟ್ಟಿ, ತೇಜಸ್ವಿನಿ ಗೌಡ, ಪ್ರಧಾನ ಕಾರ್ಯದರ್ಶಿ ದೀಪಕ್‌ ಕುಮಾರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಬೈಂದೂರು ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿದರು. ಬಾಲಚಂದ್ರ ಭಟ್‌ ನಿರ್ವಹಿಸಿದರು. ವಲಯ ಮಹಿಳಾ ಯುವ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next