Advertisement

Chennai: ಅಣ್ಣಾಮಲೈ ನಿವಾಸದೆದುರಿನ ಬಿಜೆಪಿ ಧ್ವಜಸ್ತಂಭ ತೆರವು

10:30 PM Oct 21, 2023 | Team Udayavani |

ಚೆನ್ನೈ: ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥ ಕೆ.ಅಣ್ಣಾಮಲೈ ನಿವಾಸದ ಎದುರಗಿದ್ದ ಬಿಜೆಪಿ ಧ್ವಜಸ್ತಂಭವನ್ನು ಸ್ಥಳೀಯ ಆಡಳಿತ ತೆರವುಗೊಳಿಸಿದೆ. ಈ ಸಂದರ್ಭದಲ್ಲಿ ಡಿಎಂಕೆ ಕಾರ್ಯಕರ್ಕರು ಎನ್ನಲಾದ ಕೆಲವರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಕ್ರುದ್ಧಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ತಡೆಯಲು ಹೋದ ಪೊಲೀಸರ ಜತೆಗೆ ಕೂಡ ಕಾರ್ಯಕರ್ತರು ಹೊಡಿದಾಡಿದ್ದಾರೆ.

Advertisement

ಪೊಲೀಸರ ಪ್ರಕಾರ 45 ಅಡಿ ಎತ್ತರದ ಧ್ವಜಸ್ತಂಭ ಸ್ಥಾಪನೆಗೂ ಮುನ್ನ ಪಾಲಿಕೆಯಿಂದ ಅನುಮತಿ ಪಡೆಯಬೇಕಿತ್ತು. ಸ್ತಂಭವು ವಿದ್ಯುತ್‌ ಲೈನ್‌ಗಳನ್ನು ಸ್ಪರ್ಶಿಸುತ್ತಿದ್ದ ಕಾರಣ ಅದನ್ನು ತೆರವುಗೊಳಿಸಿದ್ದೇವೆ ಎಂದಿದ್ದಾರೆ.

ಪುನ ಸ್ಥಾಪಿಸುತ್ತೇವೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಇದು ಡಿಎಂಕೆಯ ದಾಷ್ಟ್ರéದ ಉದಾಹರಣೆ. ನ.1ರ ವರೆಗೆ ಪ್ರತಿ ದಿನ 100 ಧ್ವಜಸ್ತಂಭಗಳನ್ನು ಸ್ಥಾಪಿಸುತ್ತೇವೆ. ಆ ಮೂಲಕ ನೀವು ತೆರವು ಮಾಡಿದ ಒಂದರ ಬದಲು ಸಾವಿರ ಧ್ವಜಗಳು ರಾರಾಜಿಸುತ್ತವೆ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಮರ್‌ ಪ್ರಸಾದ್‌ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಲಾಠಿ ಚಾರ್ಜ್‌ ಘಟನೆಯನ್ನು ಮಾಜಿ ಶಾಸಕ ಸಿ.ಟಿ. ರವಿ ಸೇರಿದಂತೆ ಪ್ರಮುಖರು ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next