Advertisement
ನದಿಗಳ ಉಗಮ ಸ್ಥಳ ಸಣ್ಣ ತೊರೆಯಿಂದ ಕೂಡಿರುತ್ತದೆ. ಬೃಹತ್ತಾಗಿ ಹರಿಯುತ್ತ ಸಾಗರವನ್ನು ಸೇರುತ್ತದೆ. ಮೂಲದಲ್ಲಿ ಅಶುದ್ಧತೆಗೆ ಅವಕಾಶವೇ ಇರುವುದಿಲ್ಲ, ಹರಿಯುತ್ತ ನಗರೀಕರಣದ ತ್ಯಾಜ್ಯಗಳು ಸೇರಿ ನದಿ ಮಾಲಿನ್ಯ ಉಂಟಾಗುತ್ತದೆ. ಮಾಲಿನ್ಯ ಶ್ರಮವಿಲ್ಲದೆ ನಡೆದರೆ, ಶುದ್ಧೀಕರಿಸಲು ಹೆಚ್ಚಿನ ಪರಿಶ್ರಮ ಬೇಕು.
ಕೇರಳದ ಕಾರ್ಯಕರ್ತರು ಬರುವಾಗ ಮನೆಗಳಿಂದಲೇ ಪ್ರತಿನಿಧಿಗಳಿಗೆ ಆಗುವಷ್ಟು ಆಹಾರದ ಪೊಟ್ಟಣ ತಂದು ವ್ಯವಸ್ಥೆ ಮಾಡಿದ್ದರು. ಸಾರ್ವಜನಿಕ ಸಭೆಗೆ 50,000 ಜನರು ಸೇರಿ ದಾಖಲೆ ನಿರ್ಮಾಣವಾಯಿತು. “ಮಾತೃಭೂಮಿ’ ಪತ್ರಿಕೆಯು “ಉತ್ತರದ ಗಂಗಾ ಪ್ರವಾಹ ದಾರಿತಪ್ಪಿ ದಕ್ಷಿಣಕ್ಕೆ ಬಂದ ಹಾಗಿತ್ತು’ ಎಂದು ಬಣ್ಣಿಸಿತ್ತು. 41 ದಿನದ ಅಧ್ಯಕ್ಷತೆ
ಇದು ನಡೆದದ್ದು 1967ರ ಡಿಸೆಂಬರ್‌ನಲ್ಲಿ, ಮುಂದಿನ ಫೆಬ್ರವರಿ 11ರ ರಾತ್ರಿ ಉತ್ತರ ಪ್ರದೇಶದ ಮೊಘಲ್‌ಸರಾಯ್ ರೈಲು ನಿಲ್ದಾಣ ದಲ್ಲಿ ಇವರ ಕಳೇಬರ ಸಿಕ್ಕಿತು. ಆಗ ಉಪಾಧ್ಯಾ ಯರು ಅಧ್ಯಕ್ಷರಾಗಿ 41 ದಿನ ಮಾತ್ರ ಕಳೆದಿತ್ತು.
Advertisement
ಬಹುಭಾಷಾ ಕೋವಿದರು ಅವರೆಂಥವರೆಂದರೆ ಕಲ್ಲಿಕೋಟೆಯ ಬಹಿರಂಗ ಅಧಿವೇಶನದಲ್ಲಿ ಅವರ ಮೆರವಣಿಗೆ ನಡೆಯಿತು. ಬಳಿಕ ಕಾರ್ಯಕರ್ತರ ಬಳಿ ಭಾರತೀಯ ಬೇರೆ ಭಾಷೆಗಳ ಲಿಪಿಗೂ ಮಲಯಾಳದ ಲಿಪಿಗೂ ಇರುವ ಸಂಬಂಧವನ್ನು ಹೇಳಿದರು. ಇದು ಹೇಗೆ ತಿಳಿಯಿತು ಎಂದಾಗ “ಮೆರವಣಿಗೆ ಹೋಗುವಾಗ ನನಗೆ ಇನ್ನೆಂಥ ಕೆಲಸ? ರಸ್ತೆ ಬದಿಯ ಮಲಯಾಳ ಭಾಷೆಯ ಫಲಕಗಳನ್ನು ನೋಡಿ ಅರಿತುಕೊಂಡೆ’ ಎಂದುತ್ತರಿಸಿದ್ದರು. ಬಹುಭಾಷಾ ಕೋವಿದರಾದ ಅವರ ಮನಸ್ಸು ಮೆರವಣಿಗೆಯಲ್ಲಿರಲೇ ಇಲ್ಲ. ಕೇವಲ ಇಷ್ಟೇ ಅಲ್ಲ, ಅವರು ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಪ್ರಖರ ವೈಚಾರಿಕರಾಗಿದ್ದರು. ಕಲ್ಲಿಕೋಟೆ ಅಧಿವೇಶನದಿಂದ ದೊಡ್ಡಬಳ್ಳಾಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತರುಣ ಶಿಬಿರಕ್ಕೆ ಭೇಟಿ ನೀಡಿ ಸರಸಂಘಚಾಲಕ್ ಗುರೂಜಿ ಗೋಳ್ವಲ್ಕರ್ ಕೋರಿಕೆಯಂತೆ ದಿಢೀರ್ ಬೌದ್ಧಿಕ್ ವರ್ಗ ನಡೆಸಿ ಮತ್ತೆ ಉತ್ತರ ಭಾರತಕ್ಕೆ ಹೋದವರು ಹಿಂದಿರುಗಲಿಲ್ಲ. ಕರಾವಳಿಯಲ್ಲಿ ನಂದಾದೀಪ
ದೀನದಯಾಳರು ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುವಾಗ ಪುತ್ತೂರಿನಲ್ಲಿ ನ್ಯಾಯವಾದಿಗಳಾಗಿದ್ದ ವೀರಸಿಂಹ ನಾಯಕ್ (ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ತಂದೆ) ಮನೆಯಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿದ್ದರು. ಪಕ್ಷದ ಚಟುವಟಿಕೆ ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿಯಲ್ಲಿ ಗರಿಗೆದರಲೂ ಕಲ್ಲಿಕೋಟೆ ಅಧಿವೇಶನ ಬೀಜವಾಯಿತು. “ನಾವೆಲ್ಲ ಕಲ್ಲಿಕೋಟೆಯ ದೀನದಯಾಳ್ ಉಪಾಧ್ಯಾಯರ ಭಾಷಣದಿಂದ ಪ್ರಭಾವಿತರಾದವರು’ ಎಂದು ರಾಜ್ಯದ ಗೃಹ ಸಚಿವರಾಗಿದ್ದ ಉಡುಪಿಯ ಡಾ|ವಿ.ಎಸ್.ಆಚಾರ್ಯ ಆಗಾಗ ನೆನಪಿಸಿಕೊಳ್ಳುತ್ತಿದ್ದರು. “ಯಾರನ್ನೋ ರೈಲ್ವೇ ಸ್ಟೇಶನ್‌ನಲ್ಲಿ ಕೊಂದರಂತೆ. ಆ ದಿನ ನಿನ್ನಪ್ಪ ಊಟವನ್ನೇ ಮಾಡಲಿಲ್ಲ’ ಎಂದು ಅಜ್ಜಿ ಕೃಷ್ಣವೇಣಿಯಮ್ಮ ಹೇಳುತ್ತಿದ್ದುದು ಮೊಮ್ಮಗ ಡಾ|ಕಿರಣ್ ಆಚಾರ್ಯರಿಗೆ ನೆನಪಿದೆ. ಕಲ್ಲಿಕೋಟೆಯಿಂದ ದೀನದಯಾಳರ ಏಕಾತ್ಮ ಮಾನವತಾವಾದದ (ಇಂಟೆಗ್ರಲ್ ಹ್ಯುಮ್ಯಾನಿಸಂ) ಪುಸ್ತಕವನ್ನು ಡಾ|ಆಚಾರ್ಯ ತಂದು ಓದುತ್ತಿದ್ದರು. ಇವರೊಂದಿಗೆ ಆಗ ಕಲ್ಲಿಕೋಟೆಗೆ ಹೋದವರು ಶಾಂತಾ ವಿ.ಎಸ್.ಆಚಾರ್ಯ, ಎಂ.ಸೋಮಶೇಖರ ಭಟ್, ಮುಂಡಾಶಿ ಹರಿದಾಸ ಪೈ, ರಾಮದಾಸ ಶೆಣೈ. ಮಂಗಳೂರಿನಿಂದ ಸಿ.ಜಿ.ಕಾಮತ್, ಶಾರದಾ ಆಚಾರ್, ಗೋಪಾಲಕೃಷ್ಣ ಪ್ರಭು, ಕೃಷ್ಣದೇವ ಕಾಮತ್, ರಮೇಶ ಪ್ರಭು, ಕರಂಬಳ್ಳಿ ಸಂಜೀವ ಶೆಟ್ಟಿ, ನಾರಾಯಣ ಶೆಟ್ಟಿ, ಮಾರಪ್ಪ ಶೆಟ್ಟಿ, ಪುತ್ತೂರಿನ ವೀರಸಿಂಹ ನಾಯಕ್, ಉರಿಮಜಲು ರಾಮ ಭಟ್, ಕೊಕ್ಕಡದ ಪೂವಾಜೆ ಗಣಪಯ್ಯ ಗೌಡ, ಕಾಸರಗೋಡಿನ ಉಜಿರೆ ಈಶ್ವರ ಭಟ್, ಸುಂದರ ರಾವ್, ಎಂ.ಎ.ಶೆಣೈ, ಟಿ.ಆರ್.ಕೆ.ಭಟ್, ಉಮಾನಾಥ ರಾವ್, ಕರ್ನಾಟಕದ ಬೇರೆ ಬೇರೆ ಭಾಗಗಳ ಕಾರ್ಯಕರ್ತರಿದ್ದರು. ಈ ಸಣ್ಣ ತೊರೆಯೇ ಈಗ ನದಿಯಾಗಿ ಹರಿಯುತ್ತಿದೆ. ಗೇಲಿಗೂ ಬಂದ ಮನ್ನಣೆ
ಸಾಮಾನ್ಯ ಮನೆತನದಲ್ಲಿ ಹುಟ್ಟಿದ್ದ ದೀನದಯಾಳ್ ಪರೀಕ್ಷೆಯಲ್ಲಿ ಮಾತ್ರ ಇವರು ಯಾವತ್ತೂ ಪ್ರಥಮವೇ. ಆದರೆ ಲಕ್ಷ್ಯವೆಲ್ಲ ಇದ್ದದ್ದು ಓದಿನಲ್ಲಿ ಹಿಂದುಳಿದವರ ಬಗೆಗೆ. ಓದಿನಲ್ಲಿ ಹಿಂದುಳಿದ ಗೆಳೆಯರು ಓದಿಗಾಗಿ ಬರುತ್ತಿದ್ದರು. ಆಗ ಹುಟ್ಟಿದ ಸಂಘಟನೆಯೇ “ಜೀರೋ ಅಸೋಸಿಯೇಶನ್’ (ಸೊನ್ನೆ ಸಂಘ). ತಾನೊಬ್ಬ ಬುದ್ಧಿವಂತನಾದರೆ ಸಾಲದು, ಜತೆಗಾರರೂ ಬುದ್ಧಿವಂತರಾಗಬೇಕು ಎನ್ನುವುದು ಒಳತುಡಿತವಾಗಿತ್ತು. ಬಾಲಬುದ್ಧಿಯಲ್ಲಿ ಕಂಡು ಬಂದ ನೈಜಸ್ವಭಾವವೇ ದೊಡ್ಡವರಾದ ಮೇಲೂ ಪ್ರವಹಿಸಿತು. ಓದಿನ ಅನಂತರ ಸರಕಾರಿ ಹುದ್ದೆಗೆ ಸಂದರ್ಶನ ನಡೆದಾಗ ಪಾಶ್ಚಾತ್ಯ ಉಡುಗೆ ಇಲ್ಲದ ದೀನದಯಾಳರು ಭಾರತೀಯ ಉಡುಗೆಯಿಂದ ಹೋದರು. ಆಗ ಅಲ್ಲಿ ನೆರೆದ ವಿದೇಶೀಯರು, ಪಾಶ್ಚಾತ್ಯ ಉಡುಗೆಯ ಭಾರತೀಯರು “ಪಂಡಿತ್‌ಜಿ’ ಎಂದು ಗೇಲಿ ಮಾಡಿದರು. ಸಂದರ್ಶನ ನಡೆಸಿದ ವಿದೇಶೀ ಅಧಿಕಾರಿ ದೀನದಯಾಳರನ್ನೇ ಆಯ್ಕೆ ಮಾಡಿದರೂ ಸರಕಾರಿ ನೌಕರಿಗೆ ಹೋಗಲಿಲ್ಲ. ಅವರ ಹೆಸರಿನ ಜತೆ “ಪಂಡಿತ್‌ಜಿ’ ಉಪನಾಮ ಸೇರಿಕೊಂಡಿತು. ವಿದೇಶೀ ಪತ್ರಿಕೆ ಮೆಚ್ಚುಗೆ
1963ರಲ್ಲಿ ಲಂಡನ್‌ನ “ದಿ ಮ್ಯಾಂಚೆಸ್ಟರ್ ಗಾರ್ಡಿಯನ್’ ಪತ್ರಿಕೆ “ಉಪಾಧ್ಯಾಯರು ಗಮನಿಸಲೇ ಬೇಕಾದ ವ್ಯಕ್ತಿ’ ಎಂದು ಬಣ್ಣಿಸಿತ್ತು. ಶಿಸ್ತಿನ ವಿಷಯದಲ್ಲಿ ಶಾಸಕರನ್ನೂ ವಜಾಗೊಳಿಸಿದ್ದರು. ನದಿ ಉಗಮದ “ನ್ಯಾಯ’ವನ್ನು ಹೋಲಿ ಸುವುದಾದರೆ ಬಿಜೆಪಿ ಶಾಸಕರು, ಸಂಸದರನ್ನು ಆರಿಸುವಲ್ಲಿ ಕೇರಳ ಅದೇ ರೀತಿ ಇದೆ. ಕಲ್ಲಿಕೋಟೆಯಲ್ಲಿ ಹುಟ್ಟಿದ ನದಿ ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಜುಳುಜುಳು ಹರಿಯುತ್ತಿದೆ, ನಗರೀಕರಣದ ತ್ಯಾಜ್ಯದಿಂದ ನೀರು ಕೊಳಕಾಗದೆ ಇರುತ್ತದೆಯೆ? ಶುದ್ಧೀ ಕರಣವೂ ಅತ್ಯಗತ್ಯವಾಗುತ್ತದೆ… ಶಿಕ್ಷಣದಲ್ಲಿ ಹಿಂದುಳಿದವರ
ಓದಿಗೆ ಸಹಕಾರ
ದೀನದಯಾಳ್ ಪರೀಕ್ಷೆಯಲ್ಲಿ ಮಾತ್ರ ಇವರು ಯಾವತ್ತೂ ಪ್ರಥಮವೇ. ಆದರೆ ಲಕ್ಷ್ಯವೆಲ್ಲ ಇದ್ದದ್ದು ಓದಿನಲ್ಲಿ ಹಿಂದುಳಿದವರ ಬಗೆಗೆ. ಓದಿನಲ್ಲಿ ಹಿಂದುಳಿದ ಗೆಳೆಯರು ಓದಿಗಾಗಿ ಬರುತ್ತಿದ್ದರು. ಆಗ ಹುಟ್ಟಿದ ಸಂಘಟನೆಯೇ “ಜೀರೋ ಅಸೋಸಿಯೇಶನ್’ (ಸೊನ್ನೆ ಸಂಘ). ತಾನೊಬ್ಬ ಬುದ್ಧಿವಂತನಾದರೆ ಸಾಲದು, ಜತೆಗಾರರೂ ಬುದ್ಧಿವಂತರಾಗಬೇಕು ಎನ್ನುವುದು ಒಳತುಡಿತವಾಗಿತ್ತು. ಬಾಲಬುದ್ಧಿಯಲ್ಲಿ ಕಂಡು ಬಂದ ನೈಜಸ್ವಭಾವವೇ ದೊಡ್ಡವರಾದ ಮೇಲೂ ಪ್ರವಹಿಸಿತು. -ಮಟಪಾಡಿ ಕುಮಾರಸ್ವಾಮಿ