Advertisement
ರಾಷ್ಟ್ರೀಯ ಹಬ್ಬಗಳ ಸಮಿತಿ ಸೋಮವಾರ ಏರ್ಪಡಿಸಿದ್ದ ಪಪಂ ಎದುರು 75 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಸಂದೇಶ ನೀಡಿದರು.
.ಪ್ರಕಾಶ್, ಪಪಂ ಸದಸ್ಯರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತೊರೆಹಡ್ಲು ಸರಕಾರಿ ಪ್ರೌಢಶಾಲೆ: ಬೇಗಾನೆ ಕಾಡಪ್ಪಗೌಡ ಧ್ವಜಾರೋಹಣ ಮಾಡಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗಾನಂದ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಸೇವೆಯಲ್ಲಿದ್ದ ನಾಕಪ್ಪನಾಯ್ಕ ಬಿಲಗದ್ದೆ, ಉಳುವೆ ಗೋಪಾಲರಾವ್, ಬೇಗಾನೆ ಧರ್ಮಪ್ಪಗೌಡರನ್ನು ಗೌರವಿಸಿದರು. ಮುಖ್ಯ ಶಿಕ್ಷಕ ದತ್ತಾತ್ರೇಯಯಾಜಿ ಸ್ವಾಗತಿಸಿದರು. ಗುರುಮೂರ್ತಿ ನಿರೂಪಿಸಿದರು.
Related Articles
Advertisement
ಜೆಸಿಬಿಎಂ ಕಾಲೇಜು: ಪ್ರಾಂಶುಪಾಲ ಡಾ| ಸ್ವಾಮಿ ಧ್ವಜಾರೋಹಣ ಮಾಡಿದರು.ಪಿಯು ಕಾಲೇಜಿನ ಉಪ ಪ್ರಾಂಶುಪಾಲ ಎ.ಜಿ. ಪ್ರಶಾಂತ್, ಎನ್‌ಸಿಸಿ ಕುಮಾರಸ್ವಾಮಿ ಉಡುಪ ಇದ್ದರು.
ಹಾಲಂದೂರು ಪಿಎಸಿಎಸ್: ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಶೇಖರ್ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಎಂ.ಸಿ.ಅಶೋಕ್, ಸಿಇಒ ರಜನಿ ಇದ್ದರು.
ಬೇಗಾರ್ ಕರ್ನಾಟಕ ಪಬ್ಲಿಕ್ ಸ್ಕೂಲ್: ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಧ್ವಜಾರೋಹಣ ಮಾಡಿದರು. ಪ್ರಾಂಶುಪಾಲ ಶಿವರಾಂ, ಬೇಗಾರ್ ಗ್ರಾಪಂ ಅಧ್ಯಕ್ಷ ಲಕ್ಷ್ಮೀಶ, ಸದಸ್ಯರು ಭಾಗವಹಿಸಿದ್ದರು.
ಮೆಣಸೆ ಗ್ರಾಪಂ: ಗ್ರಾಪಂ ಅಧ್ಯಕ್ಷ ನವೀನ್ ಆರ್. ಕಲ್ಕಟ್ಟೆ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷೆ ಜಯಲಕ್ಷ್ಮೀ, ಅಭಿವೃದ್ಧಿ ಅಧಿ ಕಾರಿ ನಾಗಭೂಷಣ್, ಸದಸ್ಯರು ಇದ್ದರು.
ಸರಕಾರಿ ಪ್ರೌಢಶಾಲೆ ಶೃಂಗೇರಿ: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾನಂದ ಧ್ವಜಾರೋಹಣ ಮಾಡಿದರು. ಹಳೇ ವಿದ್ಯಾರ್ಥಿ ಸಂಘದ ವಿಜಯಕುಮಾರ್, ಶೃಂಗೇರಿ ಸುಬ್ಬಣ್ಣ, ಉಪ ಪ್ರಾಂಶುಪಾಲ ಶಶಿಧರ್ ಇದ್ದರು.
ಇನ್ನರ್‌ವ್ಹೀಲ್ ಕ್ಲಬ್: ರೋಟರಿ ಭವನದಲ್ಲಿ ನಿವೃತ್ತ ಪ್ರಾಂಶುಪಾಲ ಜನಾರ್ಧನ ಶ್ಯಾನುಭೋಗ್ ಧ್ವಜಾರೋಹಣ ಮಾಡಿದರು. ಕ್ಲಬ್ ಅಧ್ಯಕ್ಷೆ ಪ್ರಿಯದರ್ಶಿನಿ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅ ಧಿಕಾರಿ ಕೆ.ನಾಗೇಂದ್ರ, ಶತಮಾನ ಕಂಡ ಸಂಪೆಕೊಳಲಿನ ಬೆಳ್ಳಜ್ಜಿಯವರನ್ನು ಗೌರವಿಸಲಾಯಿತು.
ಮ್ಯಾಮೊಸ್: ಮ್ಯಾಮೊಸ್ ನಿರ್ದೇಶಕ ಅಂಬ್ಲೂರು ಸುರೇಶ್ಚಂದ್ರ ಧ್ವಜಾರೋಹಣ ಮಾಡಿದರು. ನಿರ್ದೇಶಕ ಟಿ.ಕೆ.ಪರಾಶರ, ವ್ಯವಸ್ಥಾಪಕ ಮಹೇಶ್ವರಪ್ಪ ಇದ್ದರು.