Advertisement

ಆಲೂಗಡ್ಡೆ ಬೆಳೆಗಾರರಿಗೆ ಪರಿಹಾರದ ಪರಿಶೀಲನೆ

06:27 AM Jun 23, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ 8,337 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬೆಳೆಯಲಾಗಿದ್ದು, ಈ ಪೈಕಿ 1,501 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಈ ಸಂಬಂಧ ನಷ್ಟ ಅನುಭವಿಸಿರುವ ಬೆಳೆಗಾರರಿಗೆ  ಪರಿಹಾರ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ತೋಟಗಾರಿಕಾ ಸಚಿವ ನಾರಾಯಣಗೌಡ ಅವರು ಬೆಂಗಳೂರಿನಲ್ಲಿ ಸೋಮವಾರ ನಡೆದ ಅಧಿಕಾರಿಗಳ ಪರಿಶೀಲನೆ ನಡೆಸಿದರು.

Advertisement

ಬಿತ್ತನೆ ಮಾಡಿದ್ದ ಆಲೂಗಡ್ಡೆ ಮೊಳಕೆ ಯೊಡೆಯದೇ ಭೂಮಿಯಲ್ಲಿಯೇ ಕೊಳೆತು ಹೋಗಿದೆ. ಇದುವರೆಗೂ ನಡೆಸಿರುವ ಸಮೀಕ್ಷೆ ಪ್ರಕಾರ 1,501 ಎಕರೆಯಲ್ಲಿ ನಾಶವಾಗಿದ್ದು, 2,584 ಹೆಕ್ಟೇರ್‌ನಲ್ಲಿ ಇನ್ನೂ ಸಮೀಕ್ಷೆ ಮಂದುವರಿದಿದೆ ಎಂದು  ಜಿಲ್ಲಾಧಿಕಾರಿ ಆರ್‌.ಗಿರೀಶ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ಅವರು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದರು ಎಂದು ಮಾಹಿತಿ ಲಭ್ಯವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಹೂವು  ಮಾರಾಟಮಾಡಲಾಗದೇ ನಷ್ಟ ಅನು ಭವಿಸಿರುವ ರೈತರ ಹೆಚ್ಚುವರಿ ಸಮೀಕ್ಷೆ ನಡೆಸಿದ್ದು, 1,042 ರೈತರು ಅರ್ಜಿ ಸಲ್ಲಿಸಿ ದ್ದಾರೆ. ಈ ಹಿಂದೆ ಸಲ್ಲಿಸಿದ ಪ್ರಸ್ತಾವನೆ ಜೊತೆಗೆ ಹೆಚ್ಚುವರಿಯಾಗಿ 88 ಲಕ್ಷ ರೂ. ಅಗತ್ಯವಿದೆ ಎಂದು ಅಧಿಕಾರಿಗಳು  ಸಭೆಗೆ ಮಾಹಿತಿ ನೀಡಿದರು. ತರಕಾರಿ ಬೆಳೆ ನಷ್ಟವಾಗಿದೆ ಎಂದು 16,007 ಬೆಳೆಗಾರರೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು, ಪರಿಹಾರಕ್ಕೆ 8.44 ಕೋಟಿ ರೂ. ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಗೆ ವಿವರ ಸಲ್ಲಿಸಿದ್ದಾರೆ.

ಹಣ್ಣಿನ ಬೆಳೆಗಾರು ನಷ್ಟ ಅನುಭವಿಸಿದ್ದು,  1,042 ಬೆಳೆಗಾರರಿಗೆ 88 ಲಕ್ಷ ರೂ. ಪರಿಹಾರದ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಅಧಿಕಾರಿಗಳು ಸಚಿವರ ಸಭೆಗೆ ಮಾಹಿತಿ ನೀಡಿದರು ಎಂದು ಹೇಳಲಾಗಿದೆ. ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಪಂ ಸಿಇಒ ಬಿ.ಎ.ಪರಮೇಶ್‌, ತೋಟ ಗಾರಿಕೆ ಇಲಾಖೆ  ಉಪ ನಿರ್ದೇಶಕ ಮಂಜುನಾಥ್‌, ಜಂಟಿ ನಿರ್ದೇಶಕ ಮಧುಸೂದನ್‌ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next