Advertisement

ಸಮುದ್ರದಾಳದಲ್ಲಿ ಅಮೆರಿಕನ್‌ ಸಮರ ನೌಕೆಯ ಮಾನವ ಅವಶೇಷ ಪತ್ತೆ

06:56 PM Aug 22, 2017 | udayavani editorial |

ಸಿಂಗಾಪುರ : ಸಿಂಗಾಪುರ ದೂರ ಸಮುದ್ರದಲ್ಲಿ ಟ್ಯಾಂಕರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅವಘಡದಲ್ಲಿ ನಾಪತ್ತೆಯಾದ 10 ಅಮೆರಿಕನ್‌ ನಾವಿಕರ ಮಾನವ ಅವಶೇಷಗಳನ್ನು ಮುಳುಗು ತಜ್ಞರು ಪತ್ತೆ ಹಚ್ಚಿರುವುದಾಗಿ ಅಮೆರಿಕದ ಎಡ್ಮಿರಲ್‌ ತಿಳಿಸಿದ್ದಾರೆ.

Advertisement

ಕ್ಷಿಪಣಿ ನಾಶಕ ಯುಎಸ್‌ಎಸ್‌ ಜಾನ್‌ ಎಸ್‌ ಮೆಕೇನ್‌ ಸಮರ ನೌಕೆಯು ವ್ಯಾಪಾರೀ ಹಡಗಿಗೆ ಢಿಕ್ಕಿ ಹೊಡೆದ ಪ್ರಕರಣದ ಜಾಗತಿಕ ತನಿಖೆಗೆ ಅಮೆರಿಕದ ನೌಕಾ ಪಡೆ ಆದೇಶಿಸಿದೆ. 

ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಅಮೆರಿಕದ ಕ್ಷಿಪಣಿ ನಾಶಕ ಸಮರ ನೌಕೆಯ ಹಲ್‌ ತೀವ್ರವಾಗಿ ಹಾನಿಗೊಂಡಿತ್ತು. ಅಂತಹ ಸ್ಥಿತಿಯಲ್ಲೂ ನೌಕೆಯನ್ನು ರಕ್ಷಿಸಿ ಅಮೂಲ್ಯ ಜೀವಗಳನ್ನು ಉಳಿಸಿದ, ಅವಘಡದಲ್ಲಿ ಬದುಕುಳಿದ ಅಮೆರಿಕನ್‌ ನಾವಿಕರ ಸಾಹಸವನ್ನು ಅಡ್ಮಿರಲ್‌ ಸ್ಕಾಟ್‌ ಸ್ವಿಫ್ಟ್ ಬಹುವಾಗಿ ಪ್ರಶಂಸಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next