Advertisement

ಮದ್ಯಪಾನದಿಂದ ದೂರ ಉಳಿದ್ರೆ ಬದುಕಲ್ಲಿ ನೆಮ್ಮದಿ

12:14 PM Jul 29, 2017 | |

ಕೂಡ್ಲಿಗಿ: ಮದ್ಯಪಾನ ಎಂಬುವುದು ತನ್ನನ್ನು ಹಾಳು ಮಾಡುವುದಲ್ಲದೆ ಜೊತೆಗೆ ಇಡೀ ಕುಟುಂಬದ ಸುಖ ನೆಮ್ಮದಿ ಹಾಳು ಮಾಡುತ್ತದೆ. ಆದ್ದರಿಂದ ಎಲ್ಲಾ  ದುಶ್ಚಟಗಳಿಂದ ದೂರ ಉಳಿದರೆ ಮಾತ್ರ ನೆಮ್ಮದಿ ಬದುಕು ಸಾಧ್ಯ ಎಂದು ಯೋಗಿರಾಜೇಂದ್ರ ಶಿವಾಚಾರ್ಯ  ಸ್ವಾಮೀಜಿಗಳು ಹೇಳಿದರು ತಾಲೂಕಿನ ಹೊಸಹಳ್ಳಿಯ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು, ದುಶ್ಚಟಗಳಿಂದ ಮನುಷ್ಯ ತನ್ನ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದು, ಸಮಾಜದಲ್ಲಿ ತನ್ನ ವ್ಯಕ್ತಿತ್ವ ಕಳೆದುಕೊಳ್ಳುತ್ತಾನೆ. ಯುವಕರು ಇಂದು ದುಶ್ಚಟಗಳ ದಾಸರಾಗುತ್ತಿರುವುದು ವಿಪರ್ಯಾಸ ಎಂದರು. 

Advertisement

ಹೊಸಹಳ್ಳಿ ಜಿಪಂ ಸದಸ್ಯೆ ಆಶಾ ತಿಪ್ಪೇಸ್ವಾಮಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ನಮ್ಮ ಹೊಸಹಳ್ಳಿಯಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಿರುವುದರಿಂದ ಈ ಭಾಗದ ಬಡ ಜನರಿಗೆ ಮದ್ಯಪಾನ ಬಿಡಿಸುವ ಮೂಲಕ ಅವರ ಬದುಕಿಗೆ ಆಶಾಕಿರಣವಾಗಿದೆ. ಶಿಬಿರದಲ್ಲಿರುವ ಎಲ್ಲ ಶಿಬಿರಾರ್ಥಿಗಳು ಇದರಿಂದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಿಬಿರಾಧಿಕಾರಿ ರಾಘವೇಂದ್ರ ಮಾತನಾಡಿ, ಈ ಮದ್ಯವರ್ಜನ ಶಿಬಿರ ಎಂಟು ದಿನಗಳ ಕಾಲ ನಡೆಯಲಿದ್ದು ಇದರಲ್ಲಿ ಶಿಬಿರಾರ್ಥಿಗಳಿಗೆ ಬೋಧನೆ ಜೊತೆಗೆ ಆಟ, ಪಾಠ, ಯೋಗ ಇತ್ಯಾದಿ ಇರುತ್ತದೆ. ಮಾನವನಾದ ಮೇಲೆ ತಪ್ಪು ಮಾಡುವುದು ಸಹಜ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ
ಜಿಲ್ಲಾ ನಿರ್ದೇಶಕ ವಿನಯಕುಮಾರ್‌, ತಾಲೂಕು ಯೋಜನಾಧಿಕಾರಿ ಸಂತೋಷ್‌, ನಟರಾಜ್‌ ಬಾದಾಮಿ, ಬಿಡಿಸಿಸಿ ನಿರ್ದೇಶಕ ಗುಂಡುಮುಣುಗು ತಿಪ್ಪೇಸ್ವಾಮಿ, ಸಿದ್ದೇಶ, ಎ.ಚನ್ನಬಸಪ್ಪ, ಟಿ.ಓಂಕಾರಪ್ಪ, ಕೆ.ಎಸ್‌.ವಿಶ್ವನಾಥ, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ರಾಘವೇಂದ್ರ, ಸುವರ್ಣಮ್ಮ, ಮಂಜುನಾಥ ಸ್ವಾಮಿ, ಚಿದಾನಂದಯ್ಯ, ಹಾರಕಭಾವಿ ಶೇಖರಪ್ಪ, ಪರಸನಗೌಡ ಪಾಟೀಲ್‌, ಸುಲೇಮಾನ್‌, ಹುಲಿಕೆರೆಯ ವೀರನಗೌಡ, ಮರುಸ್ವಾಮಿ, ಹೆರೇಹಳ್ಳಿ ಮಂಜುನಾಥ, ಪೂಜಾರಹಳ್ಳಿ ಬಸಪ್ಪ, ಆಲೂರು ಲೋಕೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next