Advertisement

“ದೊಂಬರಾಟ’ಪದ ಬಳಸಿ ಸಮುದಾಯಕ್ಕೆ ಅಪಮಾನ

06:25 PM Dec 07, 2021 | Team Udayavani |

ಕನಕಪುರ: ದೊಂಬರಾಟ ಎಂಬ ಪದವನ್ನು ಬಳಸಿ ನಮ್ಮ ಸಮುದಾಯಕ್ಕೆ ಅವಮಾನ ಮಾಡಬೇಡಿ ಎಂದು ದೊಂಬರ ಸಮುದಾಯದ ಮುಖಂಡ ಮುತ್ತುರಾಜು ಮನವಿ ಮಾಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಲವಾರು ರಾಜಕಾರಣಿ ಗಳು ದೊಂಬರಾಟ ಎಂಬ ಪದ ಬಳಕೆ ಮಾಡುತ್ತಿದ್ದಾರೆ.

Advertisement

ದೊಂಬರಾಟ ಎಂಬುದನ್ನು ಬಳಸಬಾರದು ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಈ ಹಿಂದೆ ಅಸೆಂಬ್ಲಿಯಲ್ಲಿ ಸೂಚನೆ ನೀಡಿದ್ದರು. ಆದರೂ, ಕೆಲ ರಾಜಕಾರಣಿಗಳು ದೊಂಬರಾಟ ಎಂಬ ಪದವನ್ನು ಪುನರುಚ್ಚಾರ ಮಾಡಿ ನಮ್ಮ ಸಮುದಾಯಕ್ಕೆ ಮುಜುಗರ ಹಾಗೂ ಅವಮಾನ ಮಾಡುತ್ತಿ¨ದ್ದಾರೆಂದು ವಿಷಾದಿಸಿದರು.

ಆಕ್ಷೇಪ: ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಹಲವಾರು ರಾಜಕಾರಣಿಗಳು ಈ ಪದ ಬಳಸಿ ಮುಂದೆ ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ದೊಂಬರಾಟ ಎಂಬ ಪದ ಬಳಸಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿ ಸಿದರು. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್‌ ಪುನರುಚ್ಚಾರ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದರು.

 ಎಚ್ಚರಿಕೆ ವಹಿಸಿ: ದೊಂಬರಾಟ ಎಂಬುದು ಹಾಡು ಭಾಷೆಯಾದರೂ ನಮ್ಮ ಸಮುದಾಯಕ್ಕೆ ಅಗೌರವ ತೋರಿಸಿದಂತೆ ಕೆಲವು ಮಾಧ್ಯಮಗಳೂ ಇಂತಹ ಪದ ಬಳಸಿಕೊಳ್ಳುತ್ತಿದ್ದಾರೆ. ದೊಂಬರಾಟ ಎಂಬುದು ಒಂದು ಸಾಹಸ ಮತ್ತು ಕಲೆ ಹಾಗೂ ಮನರಂಜನೆಗೆ ಹೆಸರು ವಾಸಿಯಾದ ಪದ. ಇಂದಿನ ಚಲನಚಿತ್ರಗಳಲ್ಲಿ ಗ್ರಾಫಿಕ್ಸ್‌ ಮತ್ತು ಡ್ನೂಪ್‌ ಹಾಕಿ ಸಾಹಸ ದೃಶ್ಯ ಚಿತ್ರೀಕರಿಸುತ್ತಾರೆ.

ಆದರೆ ನಮ್ಮ ಸಮುದಾಯ ಪ್ರಾಣ ಪಣಕ್ಕಿಟ್ಟು ಸಾಹಸ ಮಾಡಿ ಜನರಿಗೆ ಮನರಂಜನೆ ನೀಡುತ್ತಿದ್ದರು. ಅಂತಹ ಸಮುದಾಯವನ್ನು ನಾನಾ ಕಾರಣಗಳಿಗೆ ದೊಂಬರಾಟ ಎಂಬ ಪದ ಬಳಸಿ ಅವಮಾನ ಮಾಡಬೇಡಿ. ನಮ್ಮ ಸಮುದಾಯದ ರಾಜ್ಯ ಮುಖಂಡರು ಹಿಂದೆಯೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಅದಕ್ಕೆ ಕಡಿಮೆಯಾಗಿಲ್ಲ. ಹಾಗಾಗಿ ಮತ್ತೂಮ್ಮೆ ಪ್ರಸ್ತುತ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

Advertisement

ಸರ್ಕಾರವೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಂವಿಧಾನದಲ್ಲಿ ಅವಕಾಶವಿದ್ದರೆ ನಮಗೆ ಸಾಹಸಿ ಜನಾಂಗ ಎಂದು ನಮ್ಮ ಜನಾಂಗಕ್ಕೆ ಮರು ನಾಮಕರಣ ಮಾಡಿ ಎಂದು ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ದೊಂಬರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌, ಖಜಾಂಚಿ ಕುಮಾರ್‌, ಸಂಘಟನಾ ಕಾರ್ಯದರ್ಶಿ ಸರೋಜಮ್ಮ, ರಾಜೇಶ್‌, ಮಂಜುನಾಥ್‌, ಎಸ್ಸಿ, ಎಸ್ಟಿ ಮತ್ತು ಅಲೆಮಾರಿ ಆಯ್ಕೆ ಸಮಿತಿ ಸದಸ್ಯೆ ರಾಣಿ, ಮುಖಂಡರಾದ ಶ್ರೀನಿವಾಸ್‌, ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next