Advertisement
ನಗರದ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಸ ಸ್ಥಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತನಾಡಿದರು. ಧರ್ಮ ಶ್ರದ್ಧೆಯು ವೈಜ್ಞಾನಿಕತೆಯ ವೈರುಧ್ಯವೇನಲ್ಲ, ಆತ್ಮಶಕ್ತಿ ಹೆಚ್ಚಿಸಿಕೊಳ್ಳಲು ಧಾರ್ಮಿಕ ಶ್ರದ್ಧೆಯಿಂದ ಸಾಧ್ಯವಾಗಬಹುದಾದರೆ ಅನುಸರಿಸಬಹುದು.
Related Articles
Advertisement
ಸಮಾಜ ಸರಿದಾರಿಯಲ್ಲಿ ಕೊಂಡೊಯ್ಯಲು ಇಂತಹ ಮಹಾತ್ಮರು ಹಾಕಿಕೊಟ್ಟ ಮಾರ್ಗ ಸಹಕಾರಿಯಾಗಿದೆ. ಇಂತಹವರ ತ್ಯಾಗ, ಶಕ್ತಿ ದೇಶಕ್ಕೆ ದೊರೆತ ದೊಡ್ಡ ಕೊಡುಗೆ. ರಮಣ ಮಹರ್ಷಿಗಳ ಬಗ್ಗೆ ಚಿಂತನೆ ಮಾಡುವವರು ಕೋಟ್ಯಂತರ ಜನರಿದ್ದಾರೆ. ರಮಣ ಮಹರ್ಷಿಗಳ ಬಗ್ಗೆ ಗ್ರಂಥ ರಚಿಸಿದ ಟಿ.ಎಸ್.ಅನಂತಮೂರ್ತಿ ಮಹರ್ಷಿಗಳ ಮಾರ್ಗದಲ್ಲಿ ಸಾಗಿ ಸ್ವತಃ ಸಾಧಕರಾಗಿದ್ದಾರೆ ಎಂದರು.
ಶ್ರೀ ದುರ್ಗಾಂಬಿಕಾ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಡಾ.ಎಂ.ಆರ್.ಹುಲಿನಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಎಸ್.ನಾಗಣ್ಣ, ನಿವೃತ್ತ ಐ.ಎ.ಎಸ್. ಅಧಿಕಾರಿ ಡಿ.ಸತ್ಯಮೂರ್ತಿ, ರಾಷ್ಟ್ರೀಯ ಖ್ಯಾತಿ ಶಿಲ್ಪಿ ಶ್ರೀ ಸಾರಾಲು ವೆಂಕಟರಮಣ ಭಟ್ಟ, ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶಾಂತಾ ದುರ್ಗಾದೇವಿ ಹುಲಿನಾಯ್ಕರ್, ಡಾ.ರಮಣ್ ಆರ್.ಹುಲಿನಾಯ್ಕರ್,
ಡಾ. ಎಂ.ಎಚ್.ಮನೋನ್ಮಣಿ, ಡಾ.ಪಿ.ಲಾವಣ್ಯ, ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಎಂ.ಎಚ್.ಅಂಬಿಕಾ, ಶ್ರೀದೇವಿ ವೈದ್ಯಕೀಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಾಲಿನಿ, ಡಾ.ಕೆ.ಆರ್.ಕಮಲೇಶ್, ಎಂ.ಕೆ.ಶಿವಶಂಕರ್, ಸಿ.ಪುಟ್ಟರಾಜು ಇತರರಿದ್ದರು.
ವಿವಿಧ ಧಾರ್ಮಿಕ ಕಾರ್ಯ: ನಗರದ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಸ ಸ್ಥಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಬ್ರಹ್ಮ ಕುಂಭಾಭಿಷೇಕ, ಚಂಡಿಕಾಹೋಮ, ಮಹಾಪೂಜೆ ನಡೆದವು. ನೂರಾರು ಭಕ್ತರು ಭಾಗವಹಿಸಿ ದೇವಿ ದರ್ಶನ ಪಡೆದರು. ಕಾರ್ಯಕ್ರಮದ ನಂತರ ಗಾಯಕಿ ಸಂಗೀತಾ ಕಟ್ಟೆ ಕುಲಕರ್ಣಿ ಅವರಿಂದ ಶ್ರೀ ದೇವಿ ಕೀರ್ತನೆಗಳ ಗಾಯನ ಹಾಗೂ ಬಾಲವಿಶ್ವನಥ್ ನೇತೃತ್ವದ ನೀಲಾಲಯ ತಂಡದಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.
ರಮಣ ಮಹರ್ಷಿ ಹಾಗೂ ಸತ್ ಉಪಾಸಿ ಸಾಧನೆ ಮೂಲಕವೇ ಇಂತಹ ಸ್ಥಾನ ಪಡೆದರು. ಅವರು ಸಮಾಜಕ್ಕೆ ನೀಡದ ಮಾರ್ಗದರ್ಶನ ಅನುಸರಿಸಿದರೆ ಸಾರ್ಥಕ ಬದುಕು ನಮ್ಮದಾಗುತ್ತದೆ. ದೇವರೆಲ್ಲಿದ್ದಾನೆ, ದೇವರೇ ಇಲ್ಲ ಎನ್ನುವವರಿದ್ದಾರೆ. ದೇವರು ಎಲ್ಲರಲ್ಲೂ ಇದ್ದಾನೆ. ನೋಡುವ ಒಳಗಣ್ಣು ಇರಬೇಕಷ್ಟೇ. ಅಂತರಂಗದ ದೃಢ ನಂಬಿಕೆಯೇ ದೇವರು. ನಂಬಿಕೆಯೇ ದೈವಶಕ್ತಿ. ಆ ಶಕ್ತಿ ಏನನ್ನಾದರೂ ಸಾಧಿಸಲು ಪ್ರೇರಣೆಯಾಗುತ್ತದೆ. ರಮಣ ಮಹರ್ಷಿ ಹಾಗೂ ಸತ್ ಉಪಾಸಿಯವರು ಸಕಲ ಜೀವಸಂಕುಲದ ಒಳಿತಿಗಾಗಿ ಬದುಕು ಮುಡುಪಿಟ್ಟರು.-ವೀಣಾ ಬನ್ನಂಜೆ, ಧಾರ್ಮಿಕ ಚಿಂತಕಿ