Advertisement

ಧರ್ಮ ಸಂಘರ್ಷ ಸಲ್ಲದು: ಡಾ|ವೀರೇಂದ್ರ ಹೆಗ್ಗಡೆ

01:08 PM Feb 22, 2018 | Team Udayavani |

ಬ್ರಹ್ಮಾವರ: ಧರ್ಮ ಸಹಜ ಜೀವನದ ಭಾಗ. ನ್ಯಾಯ, ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ಬಾರಕೂರು ಶ್ರೀ ಏಕನಾಥೇ ಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ನೈತಿಕ ಶಿಕ್ಷಣ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಮಾತನಾಡಿ, ಶ್ರದ್ಧೆ, ನಂಬಿಕೆ, ಸಂಸ್ಕಾರ ನಮ್ಮ ಜೀವನದಲ್ಲಿ ಅಳವಡಿಸಬೇಕು. ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದರು. ಮೊಲಿ ಅವರು ದೇಗುಲಕ್ಕೆ ಸರಕಾರದಿಂದ 2 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದರು.

ಮಣಿಪಾಲ ಮಾಹೆ ವಿಶ್ವಸ್ತ ಟಿ. ಅಶೋಕ್‌ ಪೈ, ಮಾಲತಿ ವಿ. ಮೊಲಿ ಬೆಂಗಳೂರು, ಶಾಸಕರಾದ ಗೋಪಾಲ ಪೂಜಾರಿ, ವಿನಯ ಕುಮಾರ್‌ ಸೊರಕೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅದಾನಿ ಸಮೂಹ ಸಂಸ್ಥೆ ಜತೆ ಆಡಳಿತ ನಿರ್ದೇಶಕ ಕಿಶೋರ್‌ ಆಳ್ವ, ಉದ್ಯಮಿ ಅನಿಲ್‌ ಜೈನ್‌, ದೇವಸ್ಥಾನ ನಿರ್ಮಾಣ ಸಮಿತಿ ಗೌರ ವಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್‌, ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ, ಕೋಶಾಧಿಕಾರಿ ಬಿ. ಜನಾರ್ದನ ದೇವಾಡಿಗ, ಮುಖ್ಯ ಸಂಚಾಲಕ ಹಿರಿಯಡ್ಕ ಮೋಹನ್‌ದಾಸ್‌, ವಿಶ್ವಸ್ತರಾದ ಸುರೇಶ ಡಿ. ಪಡುಕೋಣೆ, ಹರೀಶ್‌ ಶೇರಿಗಾರ್‌, ನಾರಾಯಣ ಎಂ. ದೇವಾಡಿಗ, ದಿನೇಶ್‌ ಸಿ. ದೇವಾಡಿಗ, ಜನಾರ್ದನ ಎಸ್‌. ದೇವಾಡಿಗ ಎನ್‌. ರಘುರಾಮ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಡಾ| ದೇವರಾಜ್‌ ಕೆ. ಸ್ವಾಗತಿಸಿ, ಮೋಹನದಾಸ್‌ ಹಿರಿಯಡ್ಕ ಸಮ್ಮಾನಿತರನ್ನು ಪರಿಚಯಿಸಿದರು. ವಿಜೇಶ್‌ ದೇವಾಡಿಗ, ನಾರಾಯಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಇಂದು ಬ್ರಹ್ಮಕುಂಭಾಭಿಷೇಕ
ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾ ಪನೆ ಪ್ರಯುಕ್ತ ಫೆ. 22ರಂದು ಬೆಳಗ್ಗೆ ಬ್ರಹ್ಮಕುಂಭಾ ಭಿಷೇಕ ನಡೆಯಲಿದೆ. ಮಧ್ಯಾಹ್ನ ದೇವಾಡಿಗ ಸಮಾಜೋತ್ಸವ ಜರಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next