Advertisement

ಐಟಿಐ ಹೆಚ್ಚಿನ ಸೀಟಿಗೆ ಮನವಿ

02:53 PM Jul 12, 2018 | Team Udayavani |

ದೊಡ್ಡಬಳ್ಳಾಪುರ: ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳಿಗಾಗಿ ಸಂಸದ ವೀರಪ್ಪ ಮೊಯ್ಲಿ ಅವರ ಅನುದಾನ ದಿಂದ 10 ಲಕ್ಷ ರೂ., ಹಾಗೂ ಇತರೆ ಅನುದಾನ ಪಡೆದು ಕೊಠಡಿಗಳ ನಿರ್ಮಾಣ ಮಾಡಲಿದ್ದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಹೆಚ್ಚುವರಿ ಸೀಟು ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

Advertisement

ನಗರದ ಮಾದಗೊಂಡನಹಳ್ಳಿ ರಸ್ತೆ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸ ವದಲ್ಲಿ ಮಾತನಾಡಿದರು. ಕಳೆದ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ 26 ಸಾವಿರ ಕೋಟಿ ರೂ., ಮೀಸಲಿರಿಸಿ, ಶಿಕ್ಷಣಕ್ಕೆ ಒತ್ತು ನೀಡಿತ್ತು. ಉನ್ನತ ಹುದ್ದೆಯಲ್ಲಿರುವವರು ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳಲ್ಲಿಯೇ ವ್ಯಾಸಂಗ ಮಾಡಿದ್ದು, ಸರ್ಕಾರಿ ಶಾಲೆ ಕಾಲೇಜು ಎನ್ನುವ ಕೀಳರಿಮೆ ಬಿಡಬೇಕೆಂದರು.

ಅಗತ್ಯ ಸಾರಿಗೆ ವ್ಯವಸ್ಥೆ: ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಬಸ್‌ ವ್ಯವಸ್ಥೆ ಕಲ್ಪಿಸ
ಲಾಗುವುದು. ರಸ್ತೆ ಹಾಗೂ ಕಾಲೇಜಿನ ಕಾಂಪೌಂಡ್‌ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಸದ್ಯಕ್ಕೆ ಕೊಠಡಿ ಕೊರತೆ ನೀಗಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವಕಾಶ ಮಾಡಲಾಗುವುದು ಎಂದರು.

ಅಪ್ರಾಪ್ತರು ವಾಹನ ಚಲಾಯಿಸಬೇಡಿ: ಗ್ರಾಮಾಂತರ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ರಾಜು, ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ಅಪರಾಧ. ಕಾಲೇಜು ದೂರ ಎನ್ನುವ ಕಾರಣಕ್ಕೆ ಪರವಾನಗಿ ಇಲ್ಲದೇ ವಾಹನ ಚಲಾಯಿಸಿ ಬಂದರೆ ಮುಂದಿನ ಅನಾಹುತಗಳಿಗೆ ವಿದ್ಯಾರ್ಥಿಗಳು, ಪೋಷಕರು ಹೊಣೆಗಾರರಾಗಿ ಶಿಕ್ಷೆ ಅನುಭವಿಸಬೇಕಾ ಗುತ್ತದೆ. ಬೀಟ್‌ ವ್ಯವಸ್ಥೆ ಚುರುಕುಗೊಳಿಸಲಾಗಿದೆ. ವಿದ್ಯಾರ್ಥಿ ಗಳು ಸುರಕ್ಷತೆ ಕುರಿತಂತೆ ಯಾವುದೇ ಸಮಸ್ಯೆ ಗಳಿದ್ದರೂ ತಮ್ಮ ಗಮನಕ್ಕೆ ತರಬಹುದಾಗಿದೆ ಎಂದರು.

ಹೆಚ್ಚುವರಿ ಕೊಠಡಿ ಕಲ್ಪಿಸಿ: ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎ.ಆರ್‌. ಶಿವಕುಮಾರ್‌, ಪದವಿ ಪೂರ್ವ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದು ಸಂತಸವಾಗಿದ್ದು, ಶಾಸಕರಿಗೆ ಹಾಗೂ ಕೊಠಡಿ
ನಿರ್ಮಿಸಿಕೊಟ್ಟ ಟಾಫೆ ಕಂಪನಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಆದರೆ ಪ್ರಸ್ತುತ ಹೊಸ ಕಟ್ಟಡದಲ್ಲಿ ಪ್ರಯೋಗಾಲಯ ಹೊರತು ಪಡಿಸಿ 5 ಕೊಠಡಿ ಮಾತ್ರ ಬೋಧನಾ ತರಗತಿಗಳಿಗೆ ಲಭ್ಯವಿದೆ. ಹೀಗಾಗಿಹಳೆಯ ಕಟ್ಟಡದಲ್ಲಿ 10 ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದು, ಕೂಡಲೇ ಹೆಚ್ಚುವರಿ ಕೊಠಡಿಗಳಿಗೆ ಅನುದಾನ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕಲಾವತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ.ಜಿ.ಹೇಮಂತರಾಜು, ಆದಿಲ್‌ ಪಾಷಾ, ಟಾಫೆ ಕಂಪನಿ ವ್ಯವಸ್ಥಾಪಕರಾದ ಪಳನಿಯಪ್ಪನ್‌, ಸತೀಶ್‌ ಸಿಂಗ್‌, ನಿವೃತ್ತ ಸಬ್‌ ಇನ್ಸ್‌ಪೆಕ್ಟರ್‌ ನಾಗರಾಜ್‌, ಮುಖಂಡರಾದ ತಿ.ರಂಗರಾಜು, ಡಿ.ವಿ.ಅಶ್ವತ್ಥಪ್ಪ, ದರ್ಗಾಜೋ ಗಿಹಳ್ಳಿ ಗ್ರಾಮಪಂಚಾಯ್ತಿಅಧ್ಯಕ್ಷ ನಾಗೇಶ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್‌.ಪಿ.ರಾಜಣ್ಣ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎನ್‌.ಡಿ.ಸುರೇಶ್‌, ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಸುಧೀಂದ್ರನಾಥ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next