Advertisement

ಶಾಲೆ ಸೇರುವಾಗಲೇ ಧರ್ಮ ಬದಲಾವಣೆ!

06:00 AM Oct 30, 2018 | |

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅವರ ಪೋಷಕರು ಇಷ್ಟ ಪಟ್ಟರೆ ಧರ್ಮದ ಕಾಲಂನಲ್ಲಿ “ಬೌದ್ಧ’ ಎಂದು ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕಲಬುರಗಿ ಶೈಕ್ಷಣಿಕ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಈ ಕುರಿತು ಉಪ ನಿರ್ದೇಶಕರುಗಳಿಗೆ ಹೊರಡಿಸಿರುವ ಸುತ್ತೋಲೆ “ಉದಯವಾಣಿ’ಗೆ ಲಭ್ಯವಾಗಿದೆ. “ಪರಿಶಿಷ್ಟ ಜಾತಿ ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆಯುವಾಗ ಧರ್ಮದ  ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಲು ಪಾಲಕರು ಇಷ್ಟಪಟ್ಟಲ್ಲಿ ಶಾಲಾ ಮುಖ್ಯ ಗುರುಗಳು ತಡೆಯಬಾರದು’ ಎನ್ನಲಾಗಿದೆ.

Advertisement

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್‌.ಮಹೇಶ್‌ ಅವರ ಆಪ್ತ ಕಾರ್ಯದರ್ಶಿ ಜೂನ್‌ 22 ರಂದು ಬರೆದಿದ್ದ ಪತ್ರ ಹಾಗೂ ಸೆಪ್ಟೆಂಬರ್‌ 14 ರಂದು ಬುದ್ಧಿಸ್ಟ್‌ ಸೊಸೈಟಿ ಆಫ್ ಕರ್ನಾಟಕ ಬರೆದಿದ್ದ ಪತ್ರದ ಆಧಾರದ ಮೇಲೆ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಅದರಂತೆ ಕ್ರಮ ವಹಿಸಲು ವಿಭಾಗದ ಎಲ್ಲ ಉಪ ನಿರ್ದೇಶಕರುಗಳಿಗೆ ಸೂಚಿಸಿದೆ ಎಂದು ಹೇಳಲಾಗಿದೆ. ಆದರೆ, ಪರಿಶಿಷ್ಟ ಜಾತಿಯ ಮಕ್ಕಳ ಪೋಷಕರು ಬಯಸಿದರೆ ಬೌದಟಛಿ ಧರ್ಮ ಎಂದು ನಮೂದಿಸಲು ಅವಕಾಶ ಕಲ್ಪಿಸಿರುವ ಈ ಕ್ರಮ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. 

ಪರಿಶಿಷ್ಟ ಜಾತಿ (ದಲಿತ) ಹಿಂದೂ ಧರ್ಮದ ಭಾಗವಾಗಿರುವುದರಿಂದ ಪ.ಜಾತಿಯ ಮಕ್ಕಳು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು  ನಮೂದಿಸಲು ಅಧಿಕಾರಿಗಳಿಗೆ ಗೊಂದಲ ಉಂಟಾಗುತ್ತದೆ. ಬೌದ್ಧ ಧರ್ಮ ಹಿಂದೂ ಧರ್ಮದಿಂದ ಪ್ರತ್ಯೇಕವಾಗಿರುವುದರಿಂದ ಪರಿಶಿಷ್ಠ ಜಾತಿಯ ಮಕ್ಕಳನ್ನು ಬೌದ್ಧ ಎಂದು ನಮೂದಿಸಿದರೆ, ಆ ಮಕ್ಕಳು ಪ.ಜಾತಿ ಯ
ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಬಹುದೆಂಬ ವಾದ ಶಿಕ್ಷಣ ಇಲಾಖೆ ಅಧಿಕಾರಿಗಳದು. ಪ್ರತಿ ವರ್ಷ ರಾಜ್ಯದಲ್ಲಿ ಪ್ರಾಥಮಿಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಸುಮಾರು 2 ಲಕ್ಷ ಪರಿಶಿಷ್ಟ ಜಾತಿಯ ಮಕ್ಕಳು  ಪ್ರವೇಶ ಪಡೆಯುತ್ತಾರೆ ಎಂದು ಹೇಳುತ್ತಾರೆ.

ಆದರೆ, ಪ. ಜಾತಿ ಮಕ್ಕಳನ್ನು ಪಾಲಕರು ಬಯಸಿದರೆ ಬೌದ್ಧ ಧರ್ಮ ಧರ್ಮ ಎಂದು ನಮೂದಿ ಸಲು ರಾಜ್ಯ ಸರ್ಕಾರದ 1990 ರ ಕಾಯ್ದೆಯಲ್ಲಿ ಯೇ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಪಾಲಕರು ಬೌದ್ಧ ಧರ್ಮ ಧರ್ಮವೆಂದು ನಮೂದಿಸಿದರೂ ಆ ಮಕ್ಕಳು ಪ.ಜಾತಿಯ ಸವಲತ್ತು ಪಡೆಯಲು ಅವಕಾಶವಿದೆ ಎಂದು ಬುದ್ಧಿಸ್ಟ್‌ ಸೊಸೈಟಿ ಆಫ್ ಕರ್ನಾಟಕ ಮುಖಂಡ ಶೆಳಗಿ ದೇವೇಂದ್ರಪ್ಪ ಹೇಳುತ್ತಾರೆ. ಪ.ಜಾತಿಯಲ್ಲಿ 101 ಉಪ ಜಾತಿಗಳಿದ್ದು ಕಾನೂನಿನ ಪ್ರಕಾರ ಮೀಸಲಾತಿಯಲ್ಲಿ ಶೇ. 15 ರಷ್ಟು ಪ.ಜಾತಿಗೆ ಮೀಸಲಿಡಲಾಗಿದೆ. ಬೌದ್ಧ ಧರ್ಮ ಅಲ್ಪಸಂಖ್ಯಾತ ಧರ್ಮವಾಗಿದ್ದು, ಅದರಡಿಯಲ್ಲಿ ಶೇ. 5 ರಷ್ಟು ಮೀಸಲಾತಿ ಪಡೆಯಲು ಅವಕಾಶವಿದೆ. ಜತೆಗೆ, ಯಾವುದೇ ಒಂದು ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಂವಿಧಾನದ 341 ನೇ ವಿಧಿ ಪ್ರಕಾರ ರಾಷ್ಟ್ರಪತಿಗೆ ಮಾತ್ರ ಅಧಿಕಾರ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಮಕ್ಕಳು ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿದರೆ ಅವರು ಪರಿಶಿಷ್ಟ ಜಾತಿಗೆ ಸಿಗುವ ಸವಲತ್ತು ಕಳೆದುಕೊಳ್ಳುತ್ತಾರೆ. ಎಸ್ಸಿ-ಎಸ್ಟಿ ಗೆ ವಿಶೇಷ ಸವಲತ್ತು ನೀಡಲು ಬೌದ್ಧ ಧರ್ಮದಲ್ಲಿ ಅವಕಾಶವಿಲ್ಲ. ಅವರು ಮತಾಂತರವಾದರೆ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಬಹುದು. 
 ಬಿ.ವಿ. ಆಚಾರ್ಯ, ಹಿರಿಯ ನ್ಯಾಯವಾದಿ

Advertisement

ಶಂಕರ ಪಗೋಜಿ

Advertisement

Udayavani is now on Telegram. Click here to join our channel and stay updated with the latest news.

Next