Advertisement

ಸಿಎಂಗೆ ಭತ್ತದ ಬೆಳೆ ನಷ್ಟದ ವರದಿ ಸಲ್ಲಿಕೆ: ಶೀಘ್ರದಲ್ಲೇ ರೈತರ ಖಾತೆಗೆ ಪರಿಹಾರದ ಹಣ ಜಮಾ

11:48 AM Apr 13, 2020 | keerthan |

ಗಂಗಾವತಿ: ಭತ್ತದ ಬೆಳೆ ಕಳೆದುಕೊಂಡು ನಷ್ಟದಲ್ಲಿರುವ ರೈತರಿಗೆ ಶೀಘ್ರವೇ ಪರಿಹಾರ ಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ಸೋಮವಾರ ಬೆಂಗಳೂರಿನಲ್ಲಿ ಭೇಟಿಯಾದ ಕೊಪ್ಪಳ ಜಿಲ್ಲಾದ ನಿಯೋಗಕ್ಕೆ ಭರವಸೆ ನೀಡಿ‌ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ ನಂತರ ಬಿಎಸ್ ವೈ ಹೇಳಿದರು.

ಕಳೆದ ಮಂಗಳವಾರ ಅಕಾಲಿಕ ಆಲಿಕಲ್ಲು ಮಳೆ ಗಾಳಿಗೆ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಸುಮಾರು 75 ಸಾವಿರ ಎಕರೆ ಪ್ರದೇಶದಲ್ಲಿದ್ದ ಭತ್ತ ಬೆಳೆ ನಷ್ಟವಾಗಿದ್ದು ಕಂದಾಯ ಮತ್ತು ಕೃಷಿ ಇಲಾಖೆಯಿಂದ ಸರ್ವೆ ನಡೆಸಿ ಸಿದ್ದಪಡಿಸಿದ ವರದಿಯನ್ನು ಸೋಮವಾರ ಬೆಳ್ಳಿಗ್ಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಬಿ ಸಿ ಪಾಟೀಲ್ ನೇತೃತ್ವದಲ್ಲಿ ನಿಯೋಗವು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಮನವಿಯನ್ನು ಸಲ್ಲಿಸಲಾಯಿತು.

ನಿಯೋಗದಲ್ಲಿ ಸಂಸದ ಕರಡಿ ಸಂಗಣ್ಣ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು,ಹಾಲಪ್ಪ ಆಚಾರ್ ಮಾಜಿ ಶಾಸಕ ಜಿ.ವೀರಪ್ಪ  ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹಣಮನಗೌಡ ಬೆಳಗುರ್ಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next