ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಅವರಿಗೆ ಅದೃಷ್ಟ ಚೆನ್ನಾಗಿದೆ. ಶುಕ್ರವಾರ ಜಿಪಂ ಸಭಾಂಗಣದಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಉಪಾಧ್ಯಕ್ಷೆ ನಿರ್ಮಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಸಭೆ ಕರೆಯಲಾಗಿತ್ತು. ಚುನಾವಣಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್‌ಹೈಕೋರ್ಟ್‌ನಿಂದ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸದೆ ವಾಪಸ್ಸು ತೆರಳಿದರು. ಇದರಿಂದ ಉಪಾಧ್ಯಕ್ಷೆ ನಿರ್ಮಲಾ ಅವರು ಬೀಸೋ ದೊಣ್ಣೆಯಿಂದ ಪಾರಾಗಿದ್ದು, ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವಂತಾಗಿದೆ.
ಹಿಂದಿರುಗಿದರು: ಜಿಪಂ ಅಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು (ಇಬ್ಬರು ಸದಸ್ಯರು ಹೊರತುಪಡಿಸಿ) ಸಭೆಯಲ್ಲಿ ಭಾಗವಹಿಸಿದ್ದರು. ಜಿಪಂ ಸಿಬ್ಬಂದಿ ಸಭೆಯಲ್ಲಿ ಹಾಜರಾದ ಸದಸ್ಯರ ಮಾಹಿತಿ ಕಲೆ ಹಾಕುತ್ತಿದ್ದರು. ಈ ಮಧ್ಯೆ ಹೈಕೋರ್ಟ್ ನಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ತಡೆಯಾಜ್ಞೆ ಬಂದಿದೆಯೆಂದು ಚುನಾಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ವಾಪಸ್ಸು ತೆರಳಿದರು.ಈ ವಿಚಾರವನ್ನು ಜಿಪಂ ಸಿಇಒ ಅವರು ಸಭೆಯಲ್ಲಿ ತಿಳಿಸಿದ್ದರಿಂದ ಜಿಪಂ ಸದಸ್ಯರು ಬಂದಿದ್ದ ಕೆಲವರು ಸುಂಕವಿಲ್ಲದೆ ವಾಪಸ್ಸು ತೆರಳುವಂತಾಯಿತು.
ಒಟ್ಟು 28 ಮಂದಿ ಸದಸ್ಯರಲ್ಲಿ 27 ಮಂದಿ ಸದಸ್ಯರು ಅವರ ವಿರುದ್ಧ ಸಹಿ ಸಂಗ್ರಹಿಸಿ ಅವಿಶ್ವಾಸ ಮಂಡನೆಗೆ ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಿಗೆ ಮನವಿಸಲ್ಲಿಸಿದ್ದರ ಮೇರೆಗೆ ಶುಕ್ರವಾರ ಜಿಪಂ ಸಭಾಂಗಣದಲ್ಲಿ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನಾ ಸಭೆ ನಿಗದಿಯಾಗಿತ್ತು.
ಸ್ವಪಕ್ಷೀಯರಿಂದ ಅವಿಶ್ವಾಸ : ಜಿಪಂನಲ್ಲಿ ಆಡಳಿತರೂಢ ಕಾಂಗ್ರೆಸ್ ಸ್ಪಷ್ಟ ಬಹುಮತ ಇದ್ದರೂ ಜಿಲ್ಲೆಯ ಕಾಂಗ್ರೆಸ್‌ನ ಹಾಲಿ, ಮಾಜಿ ಶಾಸಕರ, ನಾಯಕರ ವೈಮನಸ್ಸು, ಆಂತರಿಕಕಚ್ಚಾಟದ ಪರಿಣಾಮ ಈಗಾಗಲೇ ಮೂವರು ಅಧ್ಯಕ್ಷರನ್ನುಕಂಡಿರುವ ಜಿಪಂ ಇದೀಗ ಉಪಾಧ್ಯಕ್ಷೆ ವಿರುದ್ಧ ಸ್ವಪಕ್ಷೀಯರೆ ಅವಿಶ್ವಾಸ ಮಂಡನೆಗೆಮುಂದಾಗಿದ್ದರಿಂದ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.