Advertisement

ಜಸ್ಟ್‌ ಡಯಲ್‌ ಕಂಪನಿಯನ್ನು ಸ್ವಾದೀನಪಡಿಸಿಕೊಳ್ಳಲಿರುವ ರಿಲಯನ್ಸ್

01:53 PM Jul 18, 2021 | |

ನವ ದೆಹಲಿ : ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ ಆರ್‌ ವಿ ಎಲ್‌) ಜಸ್ಟ್‌ ಡಯಲ್‌ ಕಂಪನಿಯ ಶೇಕಡ 40.95ರಷ್ಟು ಷೇರುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಜಸ್ಟ್ ಡಯಲ್ ಕಂಪೆನಿಯನ್ನು ಸುಮಾರು, 3, 497 ಕೋಟಿಗೆ ಸ್ವಾದೀನ ಪಡಿಸಿಕೊಳ್ಳುವುದಕ್ಕೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ ಆರ್‌ ವಿ ಎಲ್‌) ಮುಂದಾಗಿದ್ದು, ಸದ್ಯದಲ್ಲೇ ತನ್ನ ತೆಕ್ಕೆಗೆ ಜಸ್ಟ್ ಡಯಲ್ ಸಂಸ್ಥೆಯನ್ನು  ಸೇರಿಸಿಕೊಳ್ಳಲಿದೆ.

ಇದನ್ನೂ ಓದಿ : ವಿಡಿಯೋ: ಗಾಯಗೊಂಡ ಆಟಗಾರನನ್ನು ಔಟ್ ಮಾಡದೆ ಕ್ರೀಡಾ ಸ್ಪೂರ್ತಿ ಮೆರೆದ ಜೋ ರೂಟ್ ಪಡೆ

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವು ಡಿಜಿಟಲ್ ಜಗತ್ತಿನಲ್ಲಿ ತನ್ನ ಜಾಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮುಂದಾಗಿದೆ.

ಇದಲ್ಲದೇ, ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ ಆರ್‌ ವಿ ಎಲ್‌) ನೆಟ್‌ಮೆಡ್ಸ್‌, ಅರ್ಬನ್‌ ಲ್ಯಾಡರ್‌ ನಂತಹ ಸಂಸ್ಥೆಗಳಲ್ಲಿಯೂ ಹೂಡಿಕೆ ಮಾಡಿದೆ.

Advertisement

ಇದನ್ನೂ ಓದಿ : ಚಿತ್ರರಂಗದ ವಿಚಾರ ಬೀದಿ ಚರ್ಚೆಗೆ ವಿಷಯವಾಗುವಂತೆ ಮಾಡಬೇಡಿ : ಮಾಧ್ಯಮಗಳಿಗೆ ಜಗ್ಗೇಶ ಮನವಿ

Advertisement

Udayavani is now on Telegram. Click here to join our channel and stay updated with the latest news.

Next