ನವ ದೆಹಲಿ : ವಿದ್ಯುಚ್ಛಕ್ತಿ ಶೇಖರಣಾ ಸಂಸ್ಥೆ ಅಂಬ್ರಿ ಇಂಕ್. ನೊಂದಿಗೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲು ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ ಮುಂದಾಗಿದೆ.
ತಾಂತ್ರಿಕ ಹೂಡಿಕೆದಾರರಾದ ಪಾಲ್ಸನ್ ಅಂಡ್ ಕೋ. ಇಂಕ್.ಅಮೆರಿಕದ ಮೆಸಾಚುಸೆಟ್ಸ್ ಮೂಲದ ವಿದ್ಯುಚ್ಛಕ್ತಿ ಶೇಖರಣಾ ಸಂಸ್ಥೆ ಅಂಬ್ರಿ ಇಂಕ್. ನೊಂದಿಗೆ ರಿಲಯನ್ಸ್ ಇಂಡಸ್ರ್ಟೀಸ್ ಲಿಮಿಟೆಡ್‌ನ (ಆರ್ ಐ ಎಲ್) ಸಂಪೂರ್ಣ ಒಡಡೆತನದ ಅಂಗ ಸಂಸ್ಥೆ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್ ಇಎಸ್ ಎಲ್) ನಲ್ಲಿ ಸಂಯುಕ್ತವಾಗಿ 144 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1,071 ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ತನ್ನ ಪ್ರಕಟಣೆಯಲ್ಲಿ ಘೋಷಣೆ ಮಾಡಿದೆ.
ಇದನ್ನೂ ಓದಿ : ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ? ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಆರ್ ಎನ್ ಇಎಸ್ ಎಲ್ ಬಿಲ್ ಗೇಟ್ಸ್ ಹಾಗೂ ಇತರೆ ಕೆಲವು ಸಂಸ್ಥೆಗಳೊಂದಿಗೆ ಜಂಟಿಯಾಗಿ ಈ ಬೃಹತ್ ಹೂಡಿಕೆಯನ್ನು ಮಾಡುತ್ತಿದ್ದು, ಸಂಸ್ಥೆಯನ್ನು ವಾಣಿಜ್ಯೀಕರಣಗೊಳಿಸುವ ಮತ್ತು ದೀರ್ಘಾವಧಿ ವಿದ್ಯುಚ್ಛಕ್ತಿ ಶೇಖರಣ ಸಾಧನ ಉದ್ಯಮದಲ್ಲಿ ಜಾಗತಿಕವಾಗಿ ಬೆಳೆಯಲು ಈ ಹೂಡಿಕೆ ನೆರವಾಗಲಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಅಂಬ್ರಿ ಸಂಸ್ಥೆಯೊಂದಿಗೆ ಭಾರತದಲ್ಲಿ ಬೃಹತ್ ಪ್ರಮಾಣದ ಬ್ಯಾಟರಿ ತಯಾರಿಕಾ ಘಟಕ ಸ್ಥಾಪಿಸುವ ಉದ್ದೇಶದಿಂದ ವಿಶೇಷ ಸಹಭಾಗಿತ್ವದ ಕುರಿತಾಗಿಯೂ ಆರ್ ಎನ್ ಇಎಸ್ ಎಲ್ ಚರ್ಎಚೆ ಮಾಡಿದೆ ಎನ್ನಲಾಗಿದ್ದು, ರಿಲಯನ್ಸ್ ನ ಗ್ರೀನ್ ಎನರ್ಜಿ ಉಪಕ್ರಮದ ಸಾಮರ್ಥ್ಯ ಹೆಚ್ಚಿಸುವ ಮತ್ತು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಾಥ್ ನೀಡಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಸಿಂಗ್ ಖಾತೆ ಬದಲಾವಣೆಯ ಬಗ್ಗೆ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ : ಬೊಮ್ಮಾಯಿ