Advertisement

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

06:43 PM Apr 23, 2024 | Team Udayavani |

ಮುಂಬೈ,: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಅಂಗಸಂಸ್ಥೆ ರಿಲಯನ್ಸ್‌ ಜಿಯೊ ಇನ್ಫೊಕಾಮ್‌ ಲಿಮಿಟೆಡ್‌ನ ಲಾಭವು 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 13.16ರಷ್ಟು ಹೆಚ್ಚಳವಾಗಿದೆ.

Advertisement

ಕಂಪನಿಯು 2022-23ನೇ ಹಣಕಾಸು ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ ₹ 4,716 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ 2023-24ನೇ ಹಣಕಾಸು ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ ನಿವ್ವಳ ಲಾಭ ಶೇಕಡ 13.16ರಷ್ಟು ಹೆಚ್ಚಾಗಿ ₹ 5,337 ಕೋಟಿಗೆ ಏರಿಕೆ ಆಗಿದೆ.

2023-24ನೇ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭ ಶೇ 12.4ರಷ್ಟು ಹೆಚ್ಚಾಗಿ ₹ 20,607 ಕೋಟಿಗೆ ತಲುಪಿದೆ. 2022-23ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ₹ 18,299 ಕೋಟಿಯಷ್ಟು ಇತ್ತು.

ಕಂಪನಿಯ ವರಮಾನ 2022-23ನೇ ಹಣಕಾಸು ವರ್ಷದಲ್ಲಿ ₹ 91,373 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ 2023-24ನೇ ಹಣಕಾಸು ವರ್ಷದಲ್ಲಿ ಶೇ  10ರಷ್ಟು ಹೆಚ್ಚಾಗಿ ₹ 1,00,891 ಕೋಟಿಗೆ ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next