Advertisement
ಜುಲೈ ನಲ್ಲಿ ಸಂಸ್ಥೆ ಬೇಡಿಕೆ ಹೆಚ್ಚಳವಾದ ಕಾರಣ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಮಾಡಿತ್ತು. ಆದರೇ, ಮತ್ತೆ ಈಗ ರಿಯಾಯಿತಿ ದರದಲ್ಲಿ ಸಂಸ್ಥೆ ಗ್ರಾಹಕರಿಗೆ ನೀಡುತ್ತಿದೆ.
Related Articles
Advertisement
ಇನ್ನು, ಬಳಕೆದಾರರು 7000 ರೂ. ಮೌಲ್ಯದ ಜಿಯೋ ರೀಚಾರ್ಜ್ ಯೋಜನೆಗಳನ್ನು ಮತ್ತು ನೋ ಕಾಸ್ಟ್ ಇಎಂಐ ಪ್ರಯೋಜನಗಳನ್ನು ಸಹ ಪಡೆಯಬಹುದು.
OPPO A15 ಪ್ಲಾಸ್ಟಿಕ್ ಬಿಲ್ಡ್ ಮತ್ತು 6.52-ಇಂಚಿನ HD+ LCD ಪ್ಯಾನೆಲ್ ನನ್ನು ಒಳಗೊಂಡಿದ್ದು, ಮೀಡಿಯಾ ಟೆಕ್ ಹೆಲಿಯೋ P35 SoC ಜೊತೆಗೆ LPDDR4x RAM ನೊಂದಿಗೆ ಚಾಲಿತವಾಗಿದೆ.
ಫೋನ್ 13MP ಪ್ರೈಮರಿ ಸೆನ್ಸಾರ್, 2MP ಮ್ಯಾಕ್ರೋ ಶೂಟರ್ ಮತ್ತು 2MP ಡೆಪ್ತ್ ಸೆನ್ಸಾರ್ ನನ್ನು ಹೊಂದಿರುವ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನಿಂದ ಆಕರ್ಷಕವಾಗಿದೆ. ಇನ್ನು, 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಫಿಂಗರ್ ಪ್ರಿಂಟ್ ಸೆನ್ಸರ್, ಡ್ಯುಯಲ್-ಸಿಮ್, 4 ಜಿ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಜಿಎನ್‌ಎಸ್‌ಎಸ್, 3.5 ಎಂಎಂ ಹೆಡ್ ಫೋನ್ ಜ್ಯಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಮೈಕ್ರೋ ಯುಎಸ್ ಬಿ ಪೋರ್ಟ್ ಸೇರಿವೆ. 4,230mAh ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ : ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಿಸಿ: ಜನತೆಯಲ್ಲಿ ಮನವಿ ಮಾಡಿದ ಸಿಎಂ ಬೊಮ್ಮಾಯಿ