Advertisement

ಜಿಯೋ ಮುಡಿಗೆ ಮೂರು “ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿ” ಗರಿ

09:13 AM May 10, 2019 | Nagendra Trasi |

ಮುಂಬೈ: ಡಿಜಿಟಲ್ ಸೇವೆಗಳನ್ನು ನೀಡುತ್ತಿರುವ  ಜಿಯೋ ಬ್ರಾಂಡ್ ಎಲ್ಲರನ್ನು ಮತ್ತು ಎಲ್ಲವನ್ನು ಸಂಪರ್ಕಿಸಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಯಲ್ಲಿ ಮೂರು ಅಗ್ರ ಪ್ರಶಸ್ತಿಗಳನ್ನು ಜಿಯೋ ಪಡೆದುಕೊಂಡಿದೆ. ಭಾರತೀಯರಿಗೆ ಡಿಜಿಟಲ್ ಜೀವನದ ಅನನ್ಯ ಮತ್ತು ಅರ್ಥಪೂರ್ಣ ಲಾಭಗಳನ್ನು ತಲುಪಿಸುವಲ್ಲಿ ಜಿಯೋ ಮತ್ತು ಅದರ ಪ್ರವರ್ತಕಗಳು ಮಾಡುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Advertisement

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (‘ಜಿಯೋ’) ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಆಗಿದ್ದು ಸುಮಾರು 300 ದಶಲಕ್ಷ ಭಾರತೀಯರನ್ನು ಸಂಪರ್ಕಿಸುತ್ತಿದೆ. ಈ ಹಿನ್ನಲೆಯಲ್ಲಿ ‘ಮಾರುಕಟ್ಟೆ ನಾಯಕತ್ವ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಜಿಯೋ  4G LTE ತಂತ್ರಜ್ಞಾನದೊಂದಿಗೆ ಜಾಗತಿಕ ದರ್ಜೆಯ ಆಲ್ ಐಪಿ ಡೇಟಾ ನೆಟ್ವರ್ಕ್ ನೀಡುತ್ತಿದೆ. ಜಿಯೋ ಇಂದು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್ವರ್ಕ್ ಮತ್ತು ಭಾರತದ ಅತಿದೊಡ್ಡ ವೈರ್ಲೆಸ್ ಬ್ರಾಡ್ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ಕಂಪನಿಯಾಗಿದೆ. ರಿಲಯನ್ಸ್ ಜಿಯೋ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತೀಯ ಡಿಜಿಟಲ್ ಸೇವೆಗಳಲ್ಲಿ ರೂಪಾಂತರದ ಬದಲಾವಣೆಗೆ ಕಾರಣವಾಗಿದೆ ಮತ್ತು ಭಾರತವನ್ನು ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಜಾಗತಿಕ ನಾಯಕತ್ವವನ್ನು ದೊರೆಯುವಂತೆ ಮಾಡಿದೆ.

ಅತ್ಯುತ್ತಮ ಕ್ಯಾಂಪೇನ್ – ಆಡ್ವರ್ಟೈಸಿಂಗ್ ಇನ್  ಮೊಬೈಲ್ ಗೇಮಿಂಗ್ ಎನ್ವಿರಾನ್ಮೆಂಟ್ ಪ್ರಶಸ್ತಿಯನ್ನು ಜಿಯೊ ಕ್ರಿಕೆಟ್ ಪ್ಲೇ ಅಲಾಂಗ್ (ಜೆಸಿಪಿಎ) ಪಡೆದುಕೊಂಡಿದೆ. ದೇಶದಲ್ಲಿ ಹೆಚ್ಚು ಜನಪ್ರಿಯ ಕ್ರೀಡಾಕೂಟವನ್ನು ಆಚರಿಸಲು ಜನರನ್ನು ಒಂದೆಡೆ ಸೇರಿಸಿದ ಕಾರಣಕ್ಕೆ ಈ ಪ್ರಶಸ್ತಿ ದೊರೆತಿದೆ. ಅಪರಿಚಿತರನ್ನು ಒಂದು ಮಾಡುವ ಮೂಲಕ, ಭಾರತೀಯರನ್ನು ಇನ್ನಷ್ಟು ಕ್ರಿಕೆಟ್‌ಗೆ ಹತ್ತಿರ ತರುವ ಮತ್ತು ಅವರ ನೆಚ್ಚಿನ ತಂಡಗಳು ಮತ್ತು ಆಟಗಾರರೊಂದಿಗೆ ಸಮಯ ಕಳೆಯುವ ಅವಕಾಶವನ್ನು ಇದು ಮಾಡಿಕೊಟ್ಟಿತ್ತು.

ಬಳಕೆದಾರರು ಟಿವಿಯಲ್ಲಿ ಕ್ರಿಕೆಟ್ ನೋಡುವುದರ ಜೊತೆಗೆ ತಮ್ಮ ಮೊಬೈಲ್ ನಲ್ಲಿ ಜಿಯೋ ಕ್ರಿಕೆಟ್ ಪ್ಲೇ ಆಡಬಹುದಾಗಿತ್ತು. ಈ ಪರಿಕಲ್ಪನೆಯು ವೀಕ್ಷಕರಿಗೆ ತಮ್ಮ ನೆಚ್ಚಿನ ತಂಡದ ಆಟವನ್ನು ನೋಡುವುದು ಮಾತ್ರವಲ್ಲದೇ ತಾವು ಆ ಆಟದಲ್ಲಿ ಭಾಗಿಯಾಗುವಂತೆ ಮಾಡಲು ಯಶಸ್ವಿಯಾಗಿತ್ತು. ಇದು ನೇರ ಪಂದ್ಯದ ಫಲಿತಾಂಶವನ್ನು ವೀಕ್ಷಿಸುವ ಅವಕಾಶವನ್ನು ಮಾಡಿಕೊಟ್ಟಿತ್ತು. ಜಿಯೋ ಮತ್ತು ಜಿಯೋ ಬಳಸದ ಚಂದಾದಾರರಿಗೂ ಈ ಆಟವು ಲಭ್ಯವಿದೆ.

ಬೆಸ್ಟ್‌ ಮೊಬೈಲ್ ಸ್ಟ್ರಾಟಜಿ ಪ್ರಶಸ್ತಿಗೆ ಭಾರತದ ಮೊಬೈಲ್ ಜಗತ್ತಿನಲ್ಲಿ ಹೊಸ ಚಾಪು ಮೂಡಿಸಿದ ಭಾರತದ ಸ್ಮಾರ್ಟ್ ಫೋನ್ ‘ಜಿಯೋಫೋನ್’ಪಾತ್ರವಾಗಿದೆ. ಡಿಜಿಟಲ್ ಸೇವೆಗಳ ಶಕ್ತಿಯನ್ನು ಪ್ರತಿ ಭಾರತೀಯರಿಗೆ ವರ್ಗಾಯಿಸುವ ಉದ್ದೇಶದಿಂದ ಜಿಯೋಫೋನ್ ಅನ್ನು ಪ್ರಾರಂಭಿಸಲಾಯಿತು, ಅದರಲ್ಲೂ ವಿಶೇಷವಾಗಿ ಸ್ಮಾರ್ಟ್ ಫೋನ್ ಖರೀದಿಸಲು ಸಾಧ್ಯವಾಗದವರಿಗೆ ಜಿಯೋ ಪೋನ್ ವರದಾನವಾಯಿತು. ಇದರಿಂದಾಗಿ ಭಾರತದಲ್ಲಿದ್ದ ಲಕ್ಷಾಂತರ ಫೀಚರ್ ಫೋನ್ ಬಳಕೆದಾರರು ಜಿಯೋ ಡಿಜಿಟಲ್ ಲೈಫ್ ಗೆ ಪರಿವರ್ತನೆ ಹೊಂದಿ, ಡೇಟಾ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜಿಯೋಫೋನ್ ಒಂದು ಸಮೃದ್ಧ ಡಿಜಿಟಲ್ ಲೈಫ್ ಪರಿಸರ ವ್ಯವಸ್ಥೆಯನ್ನು ನೀಡುವ ಮೂಲಕ ಬಳಕೆದಾರರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿತು.

Advertisement

ಈ ವರ್ಷ ಪ್ರಮುಖ ಜಾಗತಿಕ ಬ್ರಾಂಡ್‌ಗಳು ಪ್ರಶಸ್ತಿ ಸ್ಪರ್ಧೆಯಲ್ಲಿದ್ದವು, ಆದರೂ ಈ ಮೂರು ವಿಭಾಗಗಳಲ್ಲಿ ಜಿಯೋ ಪ್ರಶಸ್ತಿ ಪಡೆದುಕೊಂಡಿದೆ. ಮಲೇಶಿಯಾದ ಕೌಲಾಲಂಪುರ್ ನಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಗೋಲ್ಡನ್ ಗ್ಲೋಬ್ ಟೈಗರ್ ಪ್ರಶಸ್ತಿಗಳು 2019 ಅನ್ನು ವಿಜೇತರಿಗೆ ನೀಡಲಾಯಿತು.

ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿಗಳು  ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಸಿಎಸ್ಆರ್ ಮತ್ತು ಸಾಮಾಜಿಕ ನಾವೀನ್ಯತೆ, ಶಿಕ್ಷಣ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ಮತ್ತು ಸಂಘಟನೆಗಳ ನಡುವೆ “ಟೈಗರ್ಸ್” ಅನ್ನು ಗುರುತಿಸುವ ಗುರಿ ಹೊಂದಿದೆ ಗೋಲ್ಡನ್ ಗ್ಲೋಬ್ ಟೈಗರ್ಸ್ ಪ್ರಶಸ್ತಿಗಳು ಮಲ್ಟಿ ಫಂಕ್ಷನಲ್ ಆಗಿದೆ. ವಿಭಾಗಗಳು ಮತ್ತು ಕೈಗಾರಿಕಾ ಕೇಂದ್ರೀಕೃತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next