Advertisement
ತ್ತೈಮಾಸಿಕ ಫಲಿತಾಂಶ: ಲಾಭ ಶೇ.39ರಷ್ಟು ಕುಸಿತ ರಿಲಯನ್ಸ್‌ನ ಬಹು ನಿರೀಕ್ಷಿತ ಮೊದಲ ತ್ತೈಮಾಸಿಕ ಫಲಿತಾಂಶ ಪ್ರಕಟವಾಗಿದೆ. 2020ರ ಜನವರಿಯಿಂದ ಮಾರ್ಚ್‌ವರೆಗಿನ ಮೊದಲ ತ್ತೈಮಾಸಿಕ ಫಲಿತಾಂಶದಲ್ಲಿ ನಷ್ಟವೇ ಪ್ರಮುಖ ಸಂಗತಿಯಾಗಿದೆ. ತೈಲ ಬೆಲೆ ಕುಸಿದಿರುವುದರಿಂದ, ಅದರ ತೈಲ ಸಂಸ್ಕರಣ ಘಟಕಗಳು ಭಾರೀ ನಷ್ಟ ದಾಖಲಿಸಿವೆ. ನಿವ್ವಳ ಲಾಭ ಶೇ.39ರಷ್ಟು ಕುಸಿದು, 6348 ಕೋಟಿ ರೂ.ಗೆ ಮುಟ್ಟಿದೆ. ಕಳೆದವರ್ಷ ಇದೇ ಅವಧಿಯಲ್ಲಿ ಕಂಪನಿ, 10,362 ಕೋಟಿ ರೂ. ಲಾಭ ದಾಖಲಿಸಿತ್ತು. ದೂರಸಂಪರ್ಕದಿಂದ ಹಿಡಿದು ತೈಲದವರೆಗೆ ರಿಲಯನ್ಸ್ ಒಟ್ಟಾರೆ ಆದಾಯ, 1,39,283 ಕೋಟಿ ರೂ.ಗೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,42,565 ಕೋಟಿ ರೂ. ಆದಾಯವಿತ್ತು. ಇದೇ ವೇಳೆ ಕಂಪನಿ 53,125 ಕೋಟಿ ರೂ. ಹಣ ಸಂಗ್ರಹಿಸುವ ಮಹತ್ವದ ಯೋಜನೆಗೆ ಒಪ್ಪಿಗೆ ನೀಡಿದೆ.
ಮುಂಬೈ: ಕೋವಿಡ್ ಪರಿಣಾಮ ಗ್ರಾಹಕರು ಒತ್ತಡಕ್ಕೊಳಗಾಗಿದ್ದಾರೆ. ಅವರಿಗೆ ವಿವಿಧ ಕಂಪನಿಗಳು ಬೇರೆ ಬೇರೆ ರೀತಿಯಲ್ಲಿ ನೆರವಿಗೆ ಬರುತ್ತಿವೆ. ಈ ಪೈಕಿ ಮೊಬೈಲ್ ಕಂಪನಿಗಳು ಗ್ರಾಹಕರಿಗೆ ವಾರಂಟಿ ಅವಧಿಯನ್ನು ಉಚಿತವಾಗಿ ಹೆಚ್ಚಿಸಿ ಬೆಂಬಲಕ್ಕೆ ನಿಂತಿವೆ. ಮಾರ್ಚ್ 20ರಿಂದ ಏ.30ರ ನಡುವೆ ಯಾರ್ಯಾರ ವಾರಂಟಿ ಅವಧಿ ಮುಗಿಯುತ್ತದೋ, ಅದು ತನ್ನಷ್ಟಕ್ಕೆ ತಾನೇ ಮೇ 31ರವರೆಗೆ ವಿಸ್ತೃತಗೊಳ್ಳಲಿದೆ. ಸ್ಯಾಮ್ಸಂಗ್, ಎಲ್‌ಜಿ, ರಿಯಲ್ ಮಿ, ಒಪ್ಪೊ, ವಿವೊ, ಒನ್‌ಪ್ಲಸ್‌ನಂತಹ ಕಂಪನಿಗಳು ವಾರಂಟಿ ವಿಸ್ತರಿಸಿವೆ.