ನವ ದೆಹಲಿ : ರಿಲಯನ್ಸ್ ಹೋಮ್ ಫೈನಾನ್ಸ್ ಸಂಸ್ಥೆ 2020-21 ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಮತ್ತೆ ನಷ್ಟ ಅನುಭವಿಸಿದೆ.
ನಿವ್ವಳ ನಷ್ಟವು 2020-21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ರಿಲಯನ್ಸ್ ಹೋಮ್ ಫೈನಾನ್ಸ್ ಸಂಸ್ಥೆ 446.62 ಕೋಟಿ ರೂಪಾಯಿ ಅಷ್ಟಾಗಿದೆ.
ಓದಿ : ಮನೆಯಿಂದ ಹೊರಗೆ ಬರದಂತೆ ಪೋಲಿಸ್ ಅಧಿಕಾರಿಗಳಿಂದ ಕೈಮುಗಿದು ಮನವಿ
ರಿಲಯನ್ಸ್ ಹೋಮ್ ಫೈನಾನ್ಸ್ ಸಂಸ್ಥೆ 2019-20ರ ಆರ್ಥಿಕ ವರ್ಷದಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿ 238.37 ಕೋಟಿ ರೂಪಾಯಿಗಳಷ್ಟು ನಿವ್ವಳ ನಷ್ಟವನ್ನು ಅನುಭವಿಸಿತ್ತು.
ಹಿಂದಿನ ಆರ್ಥಿಕ ವರ್ಷಕ್ಕಿಂತ ಈ ಆರ್ಥಿಕ ವರ್ಷಕ್ಕೆ 2020 -21 ನೇ ಸಾಲಿನ ಆರ್ಥಿಕ ವರ್ಷದ ನಷ್ಟವನ್ನು ಹೋಲಿಸಿದರೆ, ಹಿಂದಿನ ಆರ್ಥಿಕ ವರ್ಷಕ್ಕಿಂತ ಈ ಆರ್ಥಿಕ ವರ್ಷದಲ್ಲಿ ದುಪ್ಪಟ್ಟು ನಿವ್ವಳ ಆದಾಯದಲ್ಲಿ ನಷ್ಟವಾಗಿರುವುದು ಗಮನಿಸಬಹುದಾಗಿದೆ. ಅಂದರೆ 2019-20ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟವು 238.37 ಕೋಟಿ ರೂಪಾಯಿಗಳಷ್ಟಿತ್ತು. ಆದಾಯವು 281 ಕೋಟಿಗಳಿಂದ 162 ಕೋಟಿ ರೂಪಾಯಿಗೆ ಇಳಿದಿದೆ. ಈ ಮೂಲಕ ಆದಾಯವು ಶೇಕಡಾ 42ರಷ್ಟು ಕುಸಿತ ಅನುಭವಿಸಿದೆ.
ಇನ್ನು, ರಿಲಯನ್ಸ್ ಕ್ಯಾಪಿಟಲ್ ನ ಅಂಗಸಂಸ್ಥೆಯಾದ ರಿಲಯನ್ಸ್ ಹೋಮ್ ಫೈನಾನ್ಸ್ ನ ನಿವ್ವಳ ನಷ್ಟವು 375 ಕೋಟಿ ರೂಪಾಯಿಗಳಿಂದ 1,519 ಕೋಟಿ ರೂಪಾಯಿಗೆ ತಲುಪಿದ್ದು, ಒಟ್ಟಾರೆ ವರಮಾನ 1,602 ಕೋಟಿಗಳಿಂದ 840 ಕೋಟಿಗಳಿಗೆ ಕುಸಿದಿದೆ.
ಓದಿ : ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕನ ಬೈಕ್ ಸೀಜ್