Advertisement

ಪಶು ಪಾಲನೆಯಿಂದ ಆರ್ಥಿಕ ಸದೃಢತೆ: ಡಾ|ಪಾಟೀಲ

05:57 PM Feb 21, 2021 | Team Udayavani |

ಬೀದರ: ಗ್ರಾಮೀಣ ಭಾಗಗಳಲ್ಲಿ ವ್ಯವಸಾಯವು ಮುಖ್ಯವಾಗಿ ಪಶು ಸಂಪತ್ತನ್ನು  ಅವಲಂಭಿಸಿರುವುದರಿಂದ ರೈತರ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಪಾತ್ರ ವಹಿಸಿದೆ ಎಂದು ಜಾನುವಾರು ಸಂಶೋಧನಾ ಹಾಗೂ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ| ವಿವೇಕ ಪಾಟೀಲ ನುಡಿದರು.

Advertisement

ಜಿಲ್ಲೆಯ ಕಟ್ಟಿತುಗಾಂವ್‌ ದೇವಣಿ ಫಾರ್ಮನಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿದ್ದ 2020-21ನೇ ಸಾಲಿನ ವಿಸ್ತರಣಾ ಚಟುವಟಿಕೆಗಳು ಬಲಪಡಿಸುವಿಕೆ ಯೋಜನೆಯಲ್ಲಿ ಜಿಲ್ಲಾಮಟ್ಟದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಇಲಾಖೆ ಚಟುವಟಿಕೆಗಳು ಮೊದಲು ಕೇವಲ ಜಾನುವಾರುಗಳ ರಕ್ಷಣೆಗೆ ಮಾತ್ರ ಸೀಮೀತವಾಗಿತ್ತು. ಈಗ ರೈತರಿಗೆ ಹೈನುಗಾರಿಕೆ ಬಗ್ಗೆ, ಜಾನುವಾರುಗಳ ತಳಿ ಸಂವರ್ಧನೆ ಬಗ್ಗೆ, ಕುಕ್ಕುಟ ಅಭಿವೃದ್ಧಿ ಬಗ್ಗೆ, ಆಧುನಿಕ ತಾಂತ್ರಿಕ ಮಾಹಿತಿಗಳನ್ನು ಒದಗಿಸಲಾಗುತ್ತಿದೆ ಎಂದರು.

ಪಶು ವೈದ್ಯ ಡಾ| ನಾಗರಾಜ ಕಾಂಗೆ ಮಾತನಾಡಿದರು. ಡಾ| ರವಿಕುಮಾರ ಭೂರೆ ಸಮಾವೇಶ  ಉದ್ಘಾಟಿಸಿದರು. ಪಶು ವೈದ್ಯ ಡಾ| ವಿಜಯಕುಮಾರ ಅವರು ಹುಲ್ಲಿನ ತಳಿಗಳ ಬಗ್ಗೆ ಮಾಹಿತಿ ನೀಡಿದರು. ವಿಶೇಷ ಪರಿಣಿತರಿಂದ ಜಾನುವಾರುಗಳ ಪಾಲನೆ, ಪೋಷಣೆ, ಸಮತೋಲನ ಆಹಾರ, ಮೇವಿನ ಬೆಳೆಗಳು, ರೋಗಗಳು, ನಿರ್ವಹಣೆ ಮತ್ತು ಲಸಿಕೆ ಕಾರ್ಯಕ್ರಮ ಹಾಗೂ ಪಶು ಇಲಾಖೆಯ ಯೋಜನೆಗಳ ಮಾಹಿತಿ ನೀಡಲಾಯಿತು.

ಡಾ| ದೀಲಿಪಕುಮಾರ್‌, ಡಾ| ವಿವೇಕ ಪಾಟೀಲ, ಡಾ| ರವಿ, ಡಾ| ಗೋವಿಂದ, ಡಾ| ನರಸಪ್ಪ, ಡಾ| ಪೃಥ್ವಿರಾಜ್‌, ಡಾ| ಅಂಬಾದಾಸ, ಡಾ| ರಾಜಕುಮಾರ, ಡಾ| ವಿಜಯಕುಮಾರ, ಮಲ್ಲಪ್ಪ ಗೌಡಾ, ರಾಜಕುಮಾರ, ಶ್ಯಾಮರಾವ ಸೇರಿದಂತೆ ರಿಲಯನ್ಸ್‌ ಫೌಂಡೇಶನ್‌ ಗ್ರಾಮದ ರೈತರು ಪಾಲ್ಗೊಂಡಿದ್ದರು. ಡಾ| ನರಸಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next