Advertisement
ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಬಿಡುಗಡೆಯಾಗಬೇಕಿರುವ ಕೈದಿಗಳ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಿ ಅವರ ಅನುಮೋದನೆ ಪಡೆಯಲು ನಿರ್ಧರಿಸಲಾಯಿತು.
ರಾಜ್ಯದ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿ ಪ್ರಸ್ತುತ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಂಪುಟ ಉ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಾರಿಗೆ ಸಚಿವರು, ಸಣ್ಣ ಕೈಗಾರಿಕೆ ಸಚಿವರು, ಕೃಷಿ ಸಚಿವರು, ಪೌರಾಡಳಿತ, ಬಂದರು ಮತ್ತು ಮೀನುಗಾರಿಕೆ ಸಚಿವರು, ಸಹಕಾರ ಸಚಿವರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಇದರ ಸದಸ್ಯರಾಗಿರುತ್ತಾರೆ ಎಂದು ಅವರು ತಿಳಿಸಿದರು.
Related Articles
Advertisement
ಕೆಎಎಸ್ ಬಡ್ತಿ ವರ್ಷಮಿತಿ ಇಳಿಕೆ:ಕೆಎಎಸ್ ಅಧಿಕಾರಿಗಳ ಪದೋನ್ನತಿಗಾಗಿ ನಿಗದಿಪಡಿಸಿರುವ ಸೇವಾವಧಿಯನ್ನು ತಲಾ ಒಂದು ವರ್ಷ ಕಾಲ ಇಳಿಸಲು ನಿರ್ಧರಿಸಲಾಗಿದೆ. ಅದರಂತೆ ನೇಮಕಾತಿಯಿಂದ ಸೂಪರ್‌ಟೈಂ ಸ್ಕೇಲ್ ಹುದ್ದೆಗೆ ಬಡ್ತಿ ನೀಡಲು ಈ ಹಿಂದೆ ಇದ್ದು 14 ವರ್ಷ ಸೇವಾವಧಿಯನ್ನು 13 ವರ್ಷಕ್ಕೆ ಮತ್ತು ಸೂಪರ್ ಟೈಂ ಸ್ಕೇಲ್‌ನಿಂದ ಸೀನಿಯರ್ ಸೂಪರ್ ಟೈಂ ಸ್ಕೇಲ್ ಹುದ್ದೆಗೆ ಬಡ್ತಿ ನೀಡಲು ಈ ಹಿಂದೆ ಇದ್ದ 16 ವರ್ಷದ ಅವಧಿಯನ್ನು 15 ವರ್ಷಕ್ಕೆ ಇಳಿಸಲಾಗಿದೆ ಎಂದು ಹೇಳಿದರು.