Advertisement

ಅಲಮ್ಲ ಬಿಡುಗಡೆ ಮಾಡದಂತೆ ಪ್ರತಿಭಟನೆ

12:36 PM Jan 26, 2017 | Team Udayavani |

ಧಾರವಾಡ: ಬಸವಾದಿ ಶರಣರ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಅಪಚಾರ ಎಸಗಿರುವ ಟಿ.ಎಸ್‌. ನಾಗಾಭರಣ ಅವರ ನಿರ್ದೇಶನದ “ಅಲ್ಲಮ’ ಚಲನಚಿತ್ರ ಬಿಡುಗಡೆ ಮಾಡದಂತೆ ಆಗ್ರಹಿಸಿ ರಾಷ್ಟ್ರೀಯ ಬಸವದಳ, ಜಗನ್ಮಾತಾಅಕ್ಕಮಹಾದೇವಿ ಅನುಭಾವ ಪೀಠ ಸೇರಿದಂತೆ ಬಸವಪರ ಸಂಸ್ಥೆಗಳ ಸಹಯೋಗದಲ್ಲಿ ನಗರದ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. 

Advertisement

ದೆಹಲಿಯ ಬಸವ ಮಂಟಪದ ಶ್ರೀಚನ್ನಬಸವಾನಂದ ಸ್ವಾಮೀಜಿ ಅವರ  ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ಬಳಿಕ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಬಸವಣ್ಣ, ಅಲ್ಲಮಪ್ರಭುದೇವರ ಹಾಗೂ ಎಲ್ಲ ಶರಣರ ವ್ಯಕ್ತಿತ್ವಕ್ಕೆ ಚ್ಯುತಿ ಬರುವಂತಹ ಅಂಶಗಳು ಅಲ್ಲಮ ಚಿತ್ರದಲ್ಲಿವೆ. ಲೋಪ-ದೋಷಗಳಿಂದ ಕೂಡಿರುವ ಈ ಚಿತ್ರದ ಬಿಡುಗಡೆಗೆ ಸರಕಾರ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚನ್ನಬಸವಾನಂದ ಸ್ವಾಮೀಜಿ, ಟಿ.ಎಸ್‌. ನಾಗಾಭರಣ ಅವರ ನಿರ್ದೇಶನದ “ಅಲ್ಲಮ’ ಚಲನಚಿತ್ರದಲ್ಲಿ ಲಿಂಗಾಯತ ಧರ್ಮ ಹಾಗೂ ಶರಣ ಚಳವಳಿಯ ಇತಿಹಾಸವನ್ನು ಮರೆಮಾಚಿ ಚಿತ್ರ ನಿರ್ಮಿಸಲಾಗಿದೆ. ಇದರಿಂದ ಕೋಟ್ಯಂತರ ಬಸವ ಭಕ್ತರು ಹಾಗೂ ಅಲ್ಲಮ ಪ್ರಭು ದೇವರ ಅನುಯಾಯಿಗಳಿಗೆ ಚಲನಚಿತ್ರ ನೋವುಂಟು ಮಾಡಿದೆ.

ಹೀಗಾಗಿ ಚಲನಚಿತ್ರ ಪ್ರದರ್ಶನಕ್ಕೆ ಮುಖ್ಯಮಂತ್ರಿ ಅವರು ತಡೆ ನೀಡಬೇಕು. ಒಂದು ವೇಳೆ ಚಲಚಿತ್ರ ಪ್ರದರ್ಶನಗೊಂಡಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಇತಿಹಾಸ ಮರೆ ಮಾಚಿದ್ದಾರೆ. ಎಲ್ಲ ಲೋಪಗಳನ್ನು ಸರಿಪಡಿಸಿ ಚಿತ್ರ ಬಿಡುಗಡೆ ಮಾಡಬೇಕು. ಇಲ್ಲವೇ ಈ ಚಿತ್ರಕ್ಕೆ ಸರ್ಕಾರ ತಡೆ ನೀಡಬೇಕು. ಇಲ್ಲವಾದರೇ ಹೋರಾಟ ಅನಿವಾರ್ಯ ಆಗಲಿದೆಂದು ಎಚ್ಚರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next